ನೀರಿನ ನೆಪದಲ್ಲಿ ಮನುಷ್ಯ ಸಂಬಂಧಗಳ ಬಗ್ಗೆ ಒಂದು ಮುಖ್ಯವಾದ ಒಳನೋಟವನ್ನು ಕೊಡುವ ಗಾದೆ ಮಾತು ಇದು. ನಮಗೆ ತುಂಬ ಬಾಯಾರಿಕೆಯಾದಾಗ ನೀರು ತಕ್ಷಣ ಹತ್ತಿರದಲ್ಲಿ ಸಿಕ್ಕಿದರಷ್ಟೆ ನಮಗೆ ಅದರಿಂದ ಪ್ರಯೋಜನ. ಆದರೆ ಎಲ್ಲೋ ದೂರದಲ್ಲಿ ಎಷ್ಟು ನೀರಿದ್ದರೂ ಅದು ನಮ್ಮ ದಾಹ ಶಮನಕ್ಕೆ ಒದಗುವುದಿಲ್ಲ. ಹಾಗೆಯೇ, ನಾವು ಯಾರನ್ನು ಆತ್ಮೀಯರೆಂದು ಭಾವಿಸುತ್ತೇವೋ ಅವರು ನಮ್ಮ ಕಷ್ಟದ ಸಮಯದಲ್ಲಿ ಲಭ್ಯರಾಗಿ ನಮ್ಮ ಬೆಂಬಲಕ್ಕೆ ಸಿಗಬೇಕು.ಅದು ಬಿಟ್ಟು ಅವರು ಎಲ್ಲೋ ದೂರದಲ್ಲಿ ಇದ್ದುಬಿಟ್ಟರೆ ಏನು ಪ್ರಯೋಜನ? ಬಹುಶಃ, ನಾವು ನಮ್ಮ ಆತ್ಮೀಯರಿಂದ ಅವರ ಕಷ್ಟಸುಖಗಳಿಗೆ ಸ್ಪಂದಿಸಲಾರದಷ್ಟು ದೂರಕ್ಕೆ ಎಂದೂ ಹೋಗಬಾರದು ಅನ್ನಿಸುತ್ತದೆ. ಅಲ್ಲವೆ? ತಂದೆತಾಯಿಗಳ ಸಾವಿನ ಸಂದರ್ಭದಲ್ಲೂ ಬರಲಾರದಷ್ಟು ದೂರದ ವಿದೇಶಗಳಿಗೆ ಹೋಗುವ ಮಕ್ಕಳು, ಸ್ನೇಹಿತರು-ಬಂಧುಗಳು- ಮಕ್ಕಳು- ನೆಚ್ಚಿನ ಸಹೋದ್ಯೋಗಿಗಳು…ಒಟ್ಟಿನಲ್ಲಿ ತಮಗೆ ಆತ್ಮೀಯರಾದ ಯಾರ ಕಷ್ಟಕ್ಕೂ ಬೆಂಬಲವಾಗಿ ನಿಲ್ಲದಷ್ಟು ‘ಬಿಡುವಿಲ್ಲದ’ ಜೀವನ ಮಾಡುವವರು ಈ ಬಗ್ಗೆ ಯೋಚಿಸಬೇಕೇನೋ ಅನ್ನಿಸುತ್ತದೆ. ನಮ್ಮ ಬಗ್ಗೆ, ಮತ್ತು ನಮ್ಮ ಆತ್ಮೀಯರ ಬಗ್ಗೆ ಆಳವಾಗಿ ಯೋಚಿಸುವಂತೆ ಮಾಡುವ ಗಾದೆ ಮಾತಿದು. ಅಲ್ಲವೆ?
Kannada proverb – Doorada neeru daahakkilla ( Far away water won’t quench the thirst).
This wise proverb not only talks about physical thirst but also about the hard reality of unavailability of dear persons in times of need. When one is very thirsty, water which is not in his/her reach won’t quench the thirst. Just like that when our dear ones need us in their difficult times, we are expected to support them by easing their burden. We expect the same from them in our tough times. Relationships need this kind of availability to each other by the concerned persons. Otherwise we will act like the far away water which can not quench the thirst of a needy person.