ಅಂಬಲಿ ಎಂಬುದು ರಾಗಿ ಹಸಿಹಿಟ್ಟಿಗೆ ಒಂದಿಷ್ಟು ನೀರು ಮತ್ತು ತುಸು ಉಪ್ಪು ಹಾಕಿ ಬೇಯಿಸಿದ ಗಂಜಿಯಂತಹ ಸರಳ ಆಹಾರ. ಇದನ್ನು ಸಾಮಾನ್ಯವಾಗಿ ಬಡವರ ಊಟ ಎನ್ನುತ್ತಾರೆ. ಇಂತಹ ಅಂಬಲಿಯನ್ನು ಕುಡಿದರೂ ಇಂಬಾಗಿ ಅಂದರೆ ಖುಷಿ, ಪ್ರೀತಿ, ಸಂತೋಷದಿಂದ ಕುಡಿಯಬೇಕು ಎಂದು ಮೇಲಿನ ಗಾದೆಮಾತು ಹೇಳುತ್ತದೆ. ಜೀವನದಲ್ಲಿ ಪ್ರೀತಿ, ನೆಮ್ಮದಿ ಎಷ್ಟು ಮುಖ್ಯ ಎಂಬುದನ್ನು ಪರೋಕ್ಷವಾಗಿ ಹೇಳುವ ಜಾಣ್ಣುಡಿ ಇದು. ಮೃಷ್ಟಾನ್ನ ಭೋಜನವನ್ನು ಅಸಂತೋಷದಿಂದ, ಹಂಗಿನಲ್ಲಿದ್ದೇನೆ ಎಂಬ ಭಾವದಿಂದ, ಚಿಂತೆಯೇ ಮಂತಾದ ಕಾರ್ಮೋಡಗಳು ಮನಸ್ಸನ್ನು ಕವಿದ ಸ್ಥಿತಿಯಿಂದ ಉಂಡರೆ ಏನು ಪ್ರಯೋಜನ? ಅಂತಹ ಭೂರಿ ಭೋಜನವನ್ನು ಎದುರಿಗಿದ್ದರೂ ಸವಿಯಲಾರದೆ ಹೋಗುವುದಕ್ಕಿಂತ ಒಂದು ಸರಳ ಅಂಬಲಿಯನ್ನು ಸಂತೋಷದಿಂದ ತಿನ್ನುವುದು ಮಿಗಿಲಲ್ಲವೆ? ಒಳ್ಳೆಯ ಜೀವನ ಪಾಠವೊಂದನ್ನು ಹೇಳುವ ಗಾದೆ ಮಾತು ಇದು.
Kannada proverb – Ambali kudidaruu imbaagi kudi (Even if you drink simple porridge, drink it happily).
By experience we learn that even if take very simple food like humble porridge, if we are happy it tastes good! On the contrary if our heart is sad even a feast feels tasteless! Therefore the state of mind always wins over the richness of food. This way the proverb reveals a profound truth of life.
Like us!
Follow us!