ಹೊದಿಕೆ – ಅಣುಸ್ಥಾವರದ ಕೇಂದ್ರವನ್ನು ಸುತ್ತುವರಿದಿರುವ ಫಲವತ್ತಾದ ವಸ್ತು. ಇದನ್ನು ಒಂದೋ ಹೊಸ ಇಂಧನವಸ್ತುವನ್ನು ಬೆಳೆಸಲು ಇಲ್ಲವೇ ಕೆಲವು ನ್ಯೂಟ್ರಾನುಗಳನ್ನು ಕೇಂದ್ರಕ್ಕೆ ಮರಳಿ ಪ್ರತಿಫಲಿಸಲು ಬಳಸುತ್ತಾರೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಕುರುಡು ಜಾಗ – ಕಣ್ಣಿನ ದೃಶ್ಯಪಟಲದಲ್ಲಿ ನರವು ಕಣ್ಣನ್ನು ಬಿಡುವಂತಹ ಜಾಗ.
ನೀಲಿ ಸರಿತ – ನಮ್ಮ ಹತ್ತಿರ ಬರುತ್ತಿರುವ ಆಕಾಶಕಾಯದ ವರ್ಣಪಟಲವು ಚಿಕ್ಕ ತರಂಗಾಂತರಗಳ ಕಡೆಗೆ ಸರಿಯುವುದು.
ಕುದಿಯುವಿಕೆ – ನಿರ್ದಿಷ್ಟ ಉಷ್ಣತೆಯೊಂದರಲ್ಲಿ (ಕುದಿಬಿಂದು) ದ್ರವವೊಂದು ಅನಿಲವಾಗಿ ಬದಲಾಗುವ ಕ್ರಿಯೆ. ಯಾವಾಗ ಸಂತುಷ್ಟ ಆವಿಯ ಒತ್ತಡವು ಹೊರಗಿನ ಒತ್ತಡಕ್ಕೆ ಸಮನಾಗುತ್ತದೋ ಆಗ ಕುದಿಯುವಿಕೆ ಉಂಟಾಗುತ್ತದೆ.
ಕುದಿನೀರಿನ ಸ್ಥಾವರ – ನೀರನ್ನು ತಂಪುಕಾರಕವಾಗಿ ಮತ್ತು ಮಿತಕಾರಕ(ನ್ಯೂಟ್ರಾನುಗಳ ವೇಗವನ್ನು ಕಡಿಮೆ ಮಾಡುವಂಥದ್ದು)ವಾಗಿ ಬಳಸುವಂತಹ ಅಣುಸ್ಥಾವರ.
ಸಿಡಿಗುಂಡು ಉಷ್ಣತಾಮಾಪಕ – ದಹನಕ್ರಿಯೆಯಲ್ಲಿನ (ಉದಾಹರಣೆಗೆ ಇಂಧನ ಮತ್ತು ಆಹಾರಗಳ ದಹನಕ್ರಿಯೆ) ಉಷ್ಣತೆಯನ್ನು ಅಳೆಯಲು ಬಳಸುವ, ಪಾತ್ರೆಯಂತಹ ಒಂದು ಉಪಕರಣ.
ಬೂಲಿಯನ್ ಬೀಜಗಣಿತ – ಜಾರ್ಜ್ ಬೂಲ್ ಎಂಬ ಗಣಿತಜÐರು 19ನೇ ಶತಮಾನದ ಮಧ್ಯಭಾಗದಲ್ಲಿ ರೂಪಿಸಿದ ಒಂದು ರೀತಿಯ ತರ್ಕವ್ಯವಸ್ಥೆ. ಇದು ತಾರ್ಕಿಕ ಸಂಬಂಧಗಳನ್ನು ನಿರ್ವಹಿಸಲು ಗಣಿತ ವಿಧಾನಗಳನ್ನು ನೀಡುತ್ತದೆ. ಗಣಕಯಂತ್ರದ 0 ಮತ್ತು 1ರ ಎರಡಂಕಿ ಭಾಷೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸುತ್ತಾರೆ.
ವಿದ್ಯುತ್ ಬಲವರ್ಧಕ – (ಅ). ಒಂದು ವಿದ್ಯುತ್‍ಮಂಡಲದಲ್ಲಿ ಹರಿಯುತ್ತಿರುವ ವಿದ್ಯುತ ಚಾಲಕ ಶಕ್ತಿಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು, ಸರಣಿ ಜೋಡಣೆಯಲ್ಲಿ ಇರಿಸಿರುವಂತಹ ವಿದ್ಯುತ್ ಉತ್ಪಾದಕ ಯಂತ್ರ. (ಆ). ಪ್ರಸಾರ ಕಾರ್ಯದಲ್ಲಿ ಮುಖ್ಯಕೇಂದ್ರದಿಂದ ಪುನರಾವರ್ತನ ಕೇಂದ್ರವು ತರಂಗಾಂತರವನ್ನು ಸ್ವೀಕರಿಸಿ ಅದರ ಬಲವರ್ಧಿಸಿ, ಮರುಪ್ರಸಾರ ಮಾಡುತ್ತದೆ, ಕೆಲವೊಮ್ಮೆ ಆವರ್ತನವನ್ನು ಬದಲಿಸಿ ಮರುಪ್ರಸಾರಿಸುತ್ತದೆ. ಇಲ್ಲಿ ಬಲವರ್ಧಕವನ್ನು ಉಪಯೋಗಿಸುತ್ತಾರೆ.
ಬೋಸಾನು – ಆಂತರಿಕ ಗಿರಕಿ(ಸ್ಪಿನ್)ಯುಳ್ಳ ಯಾವುದೇ ಮೂಲಭೂತ ಕಣ.
ಸರಹದ್ದು ಪದರ – ಒಂದು ಘನವಸ್ತುವಿನ ಸರಹದ್ದಿನಲ್ಲಿ ಉಂಟಾಗುವ ಒಂದು ದ್ರವದ ಪದರ. ಇಲ್ಲಿ ಆ ದ್ರವದ ಸ್ನಿಗ್ಧ(ಅಂಟಂಟು) ಗುಣವು ಗಮನಾರ್ಹವಾಗಿರುತ್ತದೆ.
Like us!
Follow us!