ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Breeder reactor 

ಉತ್ಪತ್ತಿಸುವ ಸ್ಥಾವರ – ತಾನು ಇಂಧನವನ್ನು ಸೇವಿಸುತ್ತಿರುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಅಧಿಕಾಧಿಕ ಬೀಜಕೇಂದ್ರಗಳನ್ನು ಉತ್ಪಾದಿಸುವ ಅಣುಸ್ಥಾವರ

Brownian motion

ಬ್ರೌನಿಯನ್ ಚಲನೆ – ಅತ್ಯಂತ ಕಿರಿದಾದ ವ್ಯಾಸ ಹೊಂದಿರುವ ಚಿಕ್ಕ ಚಿಕ್ಕ ಕಣಗಳು, ಉದಾಹರಣೆಗೆ ಪರಾಗರೇಣುಗಳು ದ್ರವವೊಂದರಲ್ಲಿ ತೇಲಾಡಿಕೊಂಡಿದ್ದಾಗಿನ ಸ್ಥಿತಿಯಲ್ಲಿ, ನಿರಂತರವಾಗಿ ಮತ್ತು ಅವ್ಯವಸ್ಥಿತವಾಗಿ ಚಲಿಸುವದು. ಇಂತಹ ಚಲನೆಯನ್ನು ಹೊಗೆಯಲ್ಲಿನ ಕಣಗಳಲ್ಲಿಯೂ ಗಮನಿಸಬಹುದು.

Bulk modulus

ಒಟ್ಟಾರೆ ಒತ್ತಡಗುಣಕ – ಒಟ್ಟಾರೆಯಾಗಿ ಇಡೀ ಒಂದು ವಸ್ತುವಿನ ಮೇಲೆ ಪ್ರಯೋಗಿಸಿದ ಬಲಕ್ಕೂ, ಆ ವಸ್ತುವಿನಲ್ಲಿ ಉಂಟಾಗುವ ಒತ್ತಡಕ್ಕೂ ಇರುವ ಅನುಪಾತ.  

Bumping

ಸಿಡಿಸಿಡಿ ಕುದಿತ – ವಾತಾವರಣದ ಒತ್ತಡಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಆವಿಯ ಗುಳ್ಳೆಗಳು ರೂಪುಗೊಳ್ಳುವ ರೀತಿಯಲ್ಲಿ ಒಂದು ದ್ರವವನ್ನು ಅತಿಯಾಗಿ, ವಿಪರೀತ ಜುಲುಮೆಯಿಂದ ಕುದಿಸುವುದು.

Buoyancy

ತೇಲುವ ಗುಣ – ಒಂದು ವಸ್ತುವಿಗೆ ಇರುವಂತಹ ತೇಲುವ ಗುಣಲಕ್ಷಣ

Bypass

ಪಕ್ಕದ ದಾರಿ – ಭೌತಶಾಸ್ತçದಲ್ಲಿ ಈ ಪದವನ್ನು ಸಾಮಾನ್ಯವಾಗಿ ವಿದ್ಯುತ್ತಿನ ಸಂದರ್ಭದಲ್ಲಿ ಬಳಸುತ್ತಾರೆ. ಇಲ್ಲಿ ಈ ಪದವು ಒಂದು ವಿದ್ಯುನ್ಮಂಡಲದ ಅಂಗ ಅಥವಾ ಅಂಗಗಳನ್ನು ಜೋಡಿಸುವ ಇನ್ನೊಂದು ದಾರಿಯನ್ನು ಸೂಚಿಸುತ್ತದೆ. 

Cable

ರಕ್ಷಿತ ವಿದ್ಯುತ್ ತಂತಿ – ವಿದ್ಯುತ್ ಹರಿಯುವ ಒಂದು ತಂತಿಯನ್ನು ವಾಹಕದ ಒಂದು ಪದರ, ಅದರ ಮೇಲೆ ವಿದ್ಯುತ್ ರಕ್ಷಕದ ಒಂದು ಹೊದಿಕೆ ಹಾಕಿ ಭದ್ರ ಮಾಡಿರುವುದು.

Calorie 

 ಕ್ಯಾಲೊರಿ – ಒಂದು ಗ್ರಾಂ ನೀರಿನ ಉಷ್ಣತೆಯನ್ನು ಒಂದು ಡಿಗ್ರಿ ಸೆಂಟಿಗ್ರೇಡ್‌ಗೆ ಏರಿಸಲು ಬೇಕಾದ ತಾಪದ ಪ್ರಮಾಣ. ಹಳೆಯ ಕಾಲದ ಈ ಮೂಲಮಾನವನ್ನು ಈಗ ಜೌಲ್ ಎಂಬ ಹೊಸ ಮೂಲಮಾನದಿಂದ ಸ್ಥಳಾಂತರಿಸಲಾಗಿದೆ.

Caloriemeter

ಉಷ್ಣಮಾಪಕ – ತಾಪಶಕ್ತಿಯನ್ನು ಅಳೆಯಲು ಬಳಸುವ ಉಪಕರಣ.

Camera   

ಛಾಯಾಚಿತ್ರಗ್ರಾಹಕ – ಛಾಯಾಚಿತ್ರಗಳನ್ನು ತೆಗೆಯಲು ಅಥವಾ ಚಲನಚಿತ್ರ ಬಿಂಬಗಳನ್ನು ಪ್ರಕಟಪಡಿಸಲು ಬಳಸುವ ಒಂದು ದೃಶ್ಯೋಪಕರಣ

Page 11 of 76

Kannada Sethu. All rights reserved.