ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Carbon dating

ಇಂಗಾಲ ಕಾಲನಿರ್ಣಯ – ಜೀವಂತ ವಸ್ತುಗಳನ್ನು ಒಳಗೊಂಡ ಅದರಲ್ಲೂ ಭೂಮಿಯನ್ನು ಅಗೆಯುವುದರಿಂದ ದೊರೆಯುವ ಪಳೆಯುಳಿಕೆಗಳ ಕಾಲವನ್ನು ಕಂಡು ಹಿಡಿಯಲು ಬಳಸುವ ಒಂದು ವಿಧಾನ. ಜೀವಂತ ವಸ್ತುಗಳಲ್ಲಿರುವ ಇಂಗಾಲದ ಪರಮಾಣುವಿನ ವಿಕಿರಣ ಸೂಸುವ ಗುಣವನ್ನು ಆಧಾರವಾಗಿಟ್ಟುಕೊಂಡಂತಹ ವಿಧಾನ ಇದು.

Carbon microphone

ಇಂಗಾಲ ಧ್ವನಿವರ್ಧಕ – ಇಂಗಾಲದ ಹರಳುಗಳನ್ನು ಬಳಸಿಕೊಂಡು ತನ್ನ ಕೆಲಸ ಮಾಡುವಂತಹ ಒಂದು ಧ್ವನಿವರ್ಧಕ. 

Carburettor

ಮಿಶ್ರಕ ಕೊಳವೆ – ಆಂತರಿಕ ದಹನವುಳ್ಳ ಕಲ್ಲೆಣ್ಣೆ(ಪೆಟ್ರೋಲ್)ಯ ಚಾಲಕ ಯಂತ್ರದಲ್ಲಿ ವಾಯು ಮತ್ತು ಕಲ್ಲೆಣ್ಣೆಯನ್ನು ಸ್ಫೋಟನಕ್ಕೆ ಮುಂಚೆ ಬೆರೆಸುವ ಉಪಕರಣ.

Cardinal points

ಪ್ರಧಾನ ಬಿಂದುಗಳು – ಒಂದು ದಪ್ಪ ಮಸೂರದ ಅಥವಾ ಸಮಾನ ಅಕ್ಷವುಳ್ಳ ಮಸೂರಗಳ ವ್ಯವಸ್ಥೆಯಲ್ಲಿನ ಆರು ಮುಖ್ಯ ಬಿಂದುಗಳು.

Carnot cycle

ಕರ‍್ನಾಟ್ ಚಕ್ರ – ಒಂದು ಪರಿಪೂರ್ಣವಾದ ತಾಪಯಂತ್ರದಲ್ಲಿ ಕಂಡುಬರುವ, ಒಂದು ಇನ್ನೊಂದನ್ನು ಹಿಂಬಾಲಿಸುವAತಹ ನಾಲ್ಕು ಭೌತಿಕ ಕ್ರಿಯೆಗಳ ಒಂದು ಚಕ್ರ.

Carnot’s Principle

ಕರ‍್ನಾಟ್‌ರ ಸಿದ್ಧಾಂತ – ಯಾವುದೇ ತಾಪಯಂತ್ರದ ಸಾಮರ್ಥ್ಯವು ಅದೇ ತಾಪಮಾನ ಶ್ರೇಣಿಯಲ್ಲಿ ಕೆಲಸ ಮಾಢುತ್ತಿರುವ, ಹಿಮ್ಮರಳಿಸಬಹುದಾದ ತಾಪಯಂತ್ರದ ಸಾಮರ್ಥ್ಯಕ್ಕಿಂತ ಹೆಚ್ಚಾಗಿರಲು ಸಾಧ್ಯ ಇಲ್ಲ.

Carrier

ಒಯ್ಯಕ – ಒಂದು ಅರೆವಾಹಕದಲ್ಲಿ ಎಲೆಕ್ಟಾçನುಗಳು ಅಥವಾ ರಂಧ್ರಗಳು ತಮ್ಮ ಚಲನೆಯಿಂದಾಗಿ ವಿದ್ಯುತ್ ಉತ್ಪತ್ತಿಯಾಗಲು ಕಾರಣವಾಗುತ್ತವೆ. ಇವುಗಳನ್ನು ಒಯ್ಯಕಗಳು ಎಂದು ಕರೆಯುತ್ತಾರೆ.

Carrier wave

ಒಯ್ಯಕ ಅಲೆ – ಆಕಾಶವಾಣಿ(ರೇಡಿಯೋ) ಪ್ರಸಾರಕವು ಸೂಸುವ ಒಂದು ನಿರಂತರ ವಿದ್ಯುತ್ಕಾಂತೀಯ ವಿಕರಣವಿದು. ಇದಕ್ಕೆ ಸ್ಥಿರವಾದ ಅಲೆಯೆತ್ತರ ಮತ್ತು ಆವರ್ತನ ಗತಿಗಳಿರುತ್ತವೆ. 

Cascade 

 ಸಂಗ್ರಾಹಕ ಸರಣಿ – ಒಂದಕ್ಕೊಂದು ಜೋಡಿಸಲ್ಪಟ್ಟ ವಿದ್ಯುತ್ ಸಂಗ್ರಾಹಕಗಳ ಸರಣಿ.

Case hardening

ಮೇಲ್ಮೈಯ ಕಠಿಣಗೊಳಿಸುವಿಕೆ – ಉಪಕರಣಗಳಲ್ಲಿ ಮತ್ತು ಕೆಲವು ಯಂತ್ರಭಾಗಗಳಲ್ಲಿ ಬಳಸುವುದಕ್ಕಾಗಿ ಉಕ್ಕಿನ ಮೇಲ್ಮೈಯನ್ನು ಕಠಿಣಗೊಳಿಸುವುದು.

Page 13 of 80

Kannada Sethu. All rights reserved.