ಸೆಂಟಿ – ೧/೧೦೦ ನ್ನು ಸೂಚಿಸುವ ಒಂದು ಪೂರ್ವಪದ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಕೇಂದ್ರರೇಖಾ ಬಲ – ಯಾವುದೇ ಒಂದು ವಸ್ತುವಿನ ಕೇಂದ್ರವು ಇರುವಂತಹ ರೇಖೆಯುದ್ದಕ್ಕೂ ವರ್ತಿಸುವ ಬಲ.
ವಕ್ರತೆಯ ಕೆಂದ್ರ – ಒಂದು ಉಬ್ಬುಗಾಜು ಅಥವಾ ತಗ್ಗುಗಾಜಿನ(ಮಸೂರದ) ಮೇಲ್ಮೆöÊ ಅಥವಾ ವಕ್ರಾಕಾರದ ಕನ್ನಡಿಯು ಯಾವ ಗೋಳದ ಭಾಗವಾಗಿರುತ್ತದೋ ಅದರ ಕೇಂದ್ರ.
ವಕ್ರತೆಯ ಕೆಂದ್ರ – ಒಂದು ಉಬ್ಬುಗಾಜು ಅಥವಾ ತಗ್ಗುಗಾಜಿನ(ಮಸೂರದ) ಮೇಲ್ಮೈ ಅಥವಾ ವಕ್ರಾಕಾರದ ಕನ್ನಡಿಯು ಯಾವ ಗೋಳದ ಭಾಗವಾಗಿರುತ್ತದೋ ಅದರ ಕೇಂದ್ರ.
ಗುರುತ್ವ ಕೇಂದ್ರ ಅಥವಾ ದ್ರವ್ಯರಾಶಿಯ ಕೇಂದ್ರ – ಒಂದು ವಸ್ತುವಿನ ಇಡೀ ದ್ರವ್ಯರಾಶಿಯು ಈ ಬಿಂದುವಿನಲ್ಲಿ ಶೇಖರಗೊಂಡಿದೆ ಎಂದು ಪರಿಗಣಿಸಬಹುದಾದ ಬಿಂದು.
ಕೇಂದ್ರನಿರ್ಗಮನಿ ಬಲ – ವೃತ್ತಾಕಾರದಲ್ಲಿ ಚಲಿಸುತ್ತಿರುವ ವಸ್ತುವಿನ ಮೇಲೆ ಹೊರಮುಖವಾಗಿ ತ್ರಿಜ್ಯಾಕಾರದಲ್ಲಿ ಕೆಲಸ ಮಾಢುವ ಬಲ.
ಪ್ರತ್ಯೇಕಿಸುವ ಯಂತ್ರ – ಬೇರೆ ಬೇರೆ ಸಾಂದ್ರತೆಯುಳ್ಳ ಘನವಸ್ತುವಿನ ಅಥವಾ ದ್ರವವಸ್ತುವಿನ ಕಣಗಳನ್ನು ಒಂದು ಕೊಳವೆಯಲ್ಲಿ ಅಡ್ಡಡ್ಡಕ್ಕೆ ತಿರುಗಿಸಿ, ಅವುಗಳನ್ನು ಪ್ರತ್ಯೇಕಿಸುವ ಒಂದು ಉಪಕರಣ. ಹೆಚ್ಚು ಸಾಂದ್ರರೆಯುಳ್ಳ ಕಣಗಳು ಹೆಚ್ಚಿನ ತ್ರಿಜ್ಯದಲ್ಲಿ ಸುತ್ತಿ ಕೊಳವೆಯುದ್ದಕ್ಕೂ ಚಲಿಸುತ್ತವೆ, ಮತ್ತು ಇವು ಕಡಿಮೆ ಸಾಂದ್ರತೆಯುಳ್ಳ ಕಣಗಳನ್ನು ಇನ್ನೊಂದು ತುದಿಗೆ ದೂಡುತ್ತವೆ.
ಕೇಂದ್ರಗಮನಿ ಬಲ – ಒಂದು ವಸ್ತುವಿನ ಮೇಲೆ ವರ್ತಿಸಿ ಅದನ್ನು ವೃತ್ತಾಕಾರಾದಲ್ಲಿ ಸುತ್ತುವಂತೆ ಮಾಡುವ ಬಲ. ಇದು ವೃತ್ತಕೇಂದ್ರದ ದಿಕ್ಕಿನಲ್ಲಿ ವರ್ತಿಸುತ್ತದೆ.
ಮಧ್ಯಬಿಂದು ಸಮಕಟ್ಟು – ಒಂದು ಬಿಂದುವಿಗೆ ಸಂಬಂಧ ಪಟ್ಟಂತೆ ಸಮಕಟ್ಟನ್ನು ಹೊಂದಿರುವುದು. ಮಧ್ಯಬಿಂದು ಸಮಕಟ್ಟುಳ್ಳ ಹರಳುಗಳಲ್ಲಿ ಅವುಗಳ ಮೇಲ್ಮೈಗಳು ಸಮಾನಾಂತರ ಜೋಡಿಗಳಾಗಿ ಕಾಣಸಿಗುತ್ತವೆ.
ದ್ರವ್ಯರಾಶಿ ಕೇಂದ್ರಬಿಂದು ಅಥವಾ ದ್ರವ್ಯಕೇಂದ್ರ – ಒಂಧು ಸಮರೂಪೀ ಘನವಸ್ತುವಿನ ದ್ರವ್ಯರಾಶಿಯ ಕೇಂದ್ರಬಿಂದು.