ಲೋಹಪಿಂಗಾಣಿ – ಲೋಹ ಮತ್ತು ಪಿಂಗಾಣಿಗಳು ಒಟ್ಟು ಸೇರಿದಂತಹ ಒಂದು ವಸ್ತುವನ್ನು ಸೂಚಿಸುತ್ತದೆ. ಹೆಚ್ಚಿನ ಉಷ್ಣತೆ, ತುಕ್ಕು. ಉಜ್ಜುವಿಕೆ ಮುಂತಾದವುಗಳಿಗೆ ಜಗ್ಗದ ಅತ್ಯಂತ ಕಠಿಣ ವಸ್ತು ಇದು.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಸಿ.ಜಿ.ಎಸ್. ಮೂಲಮಾನ ಪದ್ಧತಿ – ಸೆಂಟಿಮೀಟರ್, ಗ್ರಾಂ, ಮತ್ತು ಸೆಕೆಂಡುಗಳನ್ನು ಮೂಲಭೂತ ಮೂಲಮಾನವಾಗಿ ಉಳ್ಳ ಒಂದು ಮೂಲಮಾನ ವ್ಯವಸ್ಥೆ.
ಸರಣಿ ಕ್ರಿಯೆ – ಪರಮಾಣು ಬೀಜಕೇಂದ್ರದ ಸೀಳಿಕೆಗಳಲ್ಲಿ, ಕೆಲವು ಭಾರವಾದ ಬೀಜಕೇಂದ್ರಗಳು ನ್ಯೂಟ್ರಾನುಗಳನ್ನು ಹೀರಿಕೊಂಡು ಕಡಿಮೆ ಭಾರದ ಬೀಜಕೇಂದ್ರಗಳಾಗಿ ಒಡೆದುಕೊಳ್ಳುತ್ತವೆ. ಈ ಕ್ರಿಯೆಯಲ್ಲಿ ಮತ್ತೆ ಬಿಡುಗಡೆಯಾಗುವ ನ್ಯೂಟ್ರಾನುಗಳು ಉಳಿದ ಭಾರವಾದ ಬೀಜಕೇಂದ್ರಗಳ ಸೀಳಿಕೆಗೆ ಕಾರಣವಾಗುತ್ತವೆ. ಹೀಗಾಗಿ ಸೀಳಿಕೆಗಳ ಸರಣಿಯೇ ಉಂಟಾಗಿಬಿಡುತ್ತದೆ. ಇದನ್ನು ಸರಣಿಕ್ರಿಯೆ ಎಂದು ಕರೆಯುತ್ತಾರೆ.
ಚಾಲ್ಡ್ನಿ ತಗಡುಗಳು – ಘನವಸ್ತುಗಳಲ್ಲಿನ ಕಂಪನಗಳನ್ನು ಪತ್ತೆ ಮಾಡಲು ಬಳಸುವ ಒಂದು ರೀತಿಯ ತಗಡುಗಳು.
ವಾಹಿನಿ – ಪ್ರಸಾರ ಕ್ರಿಯೆಯಲ್ಲಿ ವಿದ್ಯುತ್ ಅಲೆಗಳ ಪ್ರಸರಣಕ್ಕಾಗಿ ಅಥವಾ ಸ್ವೀಕಾರಕ್ಕಾಗಿ ಬಳಸುವ ನಿರ್ದಿಷ್ಟ ಆವರ್ತನಗಳ ಒಂದು ಕಟ್ಟು ಅಥವಾ ಒಂದು ನಿರ್ದಿಷ್ಟ ದಾರಿ.
ಇದ್ದಲು – ಮರವನ್ನು ಅಥವಾ ಇನ್ಯಾವುದಾದರೂ ಸಾವಯವ ವಸ್ತುವನ್ನು ಗಾಳಿಯ ಗೈರುಹಾಜರಿಯಲ್ಲಿ ಸುಟ್ಟಾಗ ಉಂಟಾಗುವಂತಹ ಇಂಗಾಲದ ಒಂದು ರೂಪ. ಇದಕ್ಕೆ ನಿಶ್ಚಿತ ಆಕಾರವಿರುವುದಿಲ್ಲ.
ವಿದ್ಯುದಂಶ – ವಸ್ತುವಿನ ಮೂಲಭೂತ ಕಣಗಳ ಒಂದು ಮೂಲಭೂತ ಗುಣ¯ಕ್ಷಣವಿದು. ಇದರ ಮೂಲಮಾನ ಕೂಲಂಬ್. ಧನ ಮತ್ತು ಋಣ ಎಂದು ಎಂದು ರೂಢಿಗತವಾಗಿ ಕರೆಯುವ ಎರಡು ರೀತಿಯ ವಿದ್ಯುದಂಶಗಳಿರುತ್ತವೆ.
ವಿದ್ಯುದಂಶ ಸಾಂದ್ರತೆ – ವಸ್ತುವೊಂದರ ಏಕಮಾನ ಉದ್ದದಲ್ಲಿ ಅಥವಾ ಏಕಮಾನ ವಿಸ್ತೀರ್ಣದಲ್ಲಿ, ಅದರ ಏಕಮಾನ ಪರಿಮಾಣದಲ್ಲಿ ಇರುವಂತಹ ವಿದ್ಯುದಂಶ.
ರಾಸಾಯನಿಕ ಕಾಲನಿಗದೀಕರಣ – ಒಂದು ಪ್ರಯೋಗವಸ್ತುವಿನ ರಾಸಾಯನಿಕ ಸಂಯೋಜನೆಯನ್ನು ಅಳೆಯುವುದನ್ನು ಅವಲಂಬಿಸಿರುವ ಒಂದು ಕಾಲನಿಗದಿಯ ವಿಧಾನ ; ಉದಾಹರಣೆಗೆ ಹುಗಿದಿಟ್ಟ ಮೂಳೆಗಳ ಕಾಲನಿಗದಿ ಮಾಡಲು ಈ ವಿಧಾನವನ್ನು ಬಳಸಬಹುದು.
ರಾಸಾಯನಿಕ ಶಕ್ತಿ – ರಾಸಾಯನಿಕ ವಸ್ತುವೊಂದರಲ್ಲಿ ಸಂಗ್ರಹಗೊAಡಿರುವ ಶಕ್ತಿ. ಇದು ಇನ್ನೊಂದು ರೂಪಕ್ಕೆ ಬದಲಾಗಬಹುದು. ಒಂದು ರಾಸಾಯನಿಕ ವಸ್ತುವನ್ನು ಕಾಯಿಸಿದರೆ ರಾಸಾಯನಿಕ ಶಕ್ತಿಯು ಉಷ್ಣತೆಯಾಗಿ ಬದಲಾಗುತ್ತದೆ.