ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Chemical dating

ರಾಸಾಯನಿಕ ಕಾಲನಿಗದೀಕರಣ – ಒಂದು ಪ್ರಯೋಗವಸ್ತುವಿನ ರಾಸಾಯನಿಕ ಸಂಯೋಜನೆಯನ್ನು ಅಳೆಯುವುದನ್ನು ಅವಲಂಬಿಸಿರುವ ಒಂದು ಕಾಲನಿಗದಿಯ ವಿಧಾನ ; ಉದಾಹರಣೆಗೆ ಹುಗಿದಿಟ್ಟ ಮೂಳೆಗಳ ಕಾಲನಿಗದಿ ಮಾಡಲು ಈ ವಿಧಾನವನ್ನು ಬಳಸಬಹುದು.

Chemical energy

ರಾಸಾಯನಿಕ ಶಕ್ತಿ – ರಾಸಾಯನಿಕ ವಸ್ತುವೊಂದರಲ್ಲಿ ಸಂಗ್ರಹಗೊAಡಿರುವ ಶಕ್ತಿ. ಇದು ಇನ್ನೊಂದು ರೂಪಕ್ಕೆ ಬದಲಾಗಬಹುದು. ಒಂದು ರಾಸಾಯನಿಕ ವಸ್ತುವನ್ನು ಕಾಯಿಸಿದರೆ ರಾಸಾಯನಿಕ ಶಕ್ತಿಯು ಉಷ್ಣತೆಯಾಗಿ ಬದಲಾಗುತ್ತದೆ.

Chemical Hygrometer

ರಾಸಾಯನಿಕ ತೇವಾಂಶಮಾಪಕ – ಒಂದು ಅನಿಲ ಅಥವಾ ಗಾಳಿಯ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ.

Chemical potential  

ರಾಸಾಯನಿಕ ಅಂತಃಸಾಮರ್ಥ್ಯ – ಒಂದು ಮಿಶ್ರಣದಲ್ಲಿನ ಒಂದು ವಸ್ತುವಿನ ರಾಸಾಯನಿಕ ಅಂತಃಸಾಮರ್ಥ್ಯ.

Chemical shift

ರಾಸಾಯನಿಕ ಪಲ್ಲಟ – ರಾಸಾಯನಿಕ ಪರಿಣಾಮದಿಂದಾಗಿ ವರ್ಣಪಟಲದ ಶಿಖರಬಿಂದುವಿನಲ್ಲಿ ಉಂಟಾಗುವ ಬದಲಾವಣೆ.

Chemosphere

ರಸಾಯನಾವರಣ – ಭೂಮಿಯ ಮೇಲ್ಮೈಯಿಂದ ಇಪ್ಪತ್ತು ಮೀಟರ್ ಎತ್ತರದಲ್ಲಿರುವಂತಹ ಹಾಗೂ ತನ್ನೊಳಗೆ ಅನೇಕ ಬೆಳಕು-ರಾಸಾಯನಿಕ ಕ್ರಿಯೆಗಳು ನಡೆಯುವಂತಹ,  ವಾತಾವರಣದ ಒಂದು ಪದರ. 

Chi meson

ಚಿ-ಮೆಸಾನು – ಪರಮಣುವಿನೊಳಗೆ ಇರುವ ಒಂದು ಸಣ್ಣ ಕಣ. ಇದು ಬೋಸಾನುಗಳ ಗುಂಪಿಗೆ ಸೇರುತ್ತದೆ.

Chief ray

ಮುಖ್ಯ ಕಿರಣ – ಒಂದು ವಸ್ತುವಿನಿಂದ ಹೊರಟು ನಮ್ಮ ಕಣ್ಣುಪಾಪೆಯ ಮಧ್ಯಭಾಗಕ್ಕೆ ತಲುಪುವ ಕಿರಣಪುಂಜದಲ್ಲಿನ ಮಧ್ಯದಲ್ಲಿರುವ ಒಂದು ಪ್ರಾತಿನಿಧಿಕ ಕಿರಣ

Chip

ಮೈಕ್ರೋಚಿಪ್ಪು – ತುಂಬ ಪುಟ್ಟದಾಗಿರುವ ಒಂದು ಅರೆವಾಹಕ. ಇದು ಸಂಕಲಿತ ವಿದ್ಯುನ್ಮಂಡಲದ ಟ್ರಾನ್ಸ್ಮೀಟರನ್ನು ಅಥವಾ ನಿರೋಧಕವನ್ನು ಒಳಗೊಂಡಿರುತ್ತದೆ. 

Choke

ವಿದ್ಯುತ್ ನಿಯಂತ್ರಕ – ಪರ್ಯಾಯ ವಿದ್ಯುತ್ ಅಲೆಗಳ ಆವರ್ತನಗಳನ್ನು ಅಡ್ಡಿಯೊಡ್ಡಿ ಕಡಿಮೆ ಮಾಡಲು ಹಾಗೂ ಏಕಮುಖೀ ವಿದ್ಯುತ್ ಹರಿವಿನ ಮಂಡಲಗಳಲ್ಲಿನ ಓಲಾಟ, ಅಸ್ಥಿರತೆಗಳನ್ನು ಸರಿ ಮಾಡಲು ಬಳಸುವ ವಿದ್ಯುತ್ ಚೋದಕವಿದು.

Page 17 of 80

Kannada Sethu. All rights reserved.