ಮುಚ್ಚಿಕೊಂಡ ವ್ಯವಸ್ಥೆ – ತನ್ನಾಚೆಗೆ ಇರುವ ಪ್ರಪಂಚದ ಜೊತೆಗೆ ಯಾವುದೇ ಕೊಳುಕೊಡೆಯ ಅಂತರ್‌ಕ್ರಿಯೆಗಳನ್ನು ಇಟ್ಟುಕೊಳ್ಳದ ಒಂದು ವಸ್ತು ಅಥವಾ ಒಂದಕ್ಕಿಂತ ಹೆಚ್ಚು ವಸ್ತುಗಳ ಒಂದು ವ್ಯವಸ್ಥೆ. ಇವು ತಮ್ಮತಮ್ಮಲ್ಲಿ ಅಂತರ್‌ಕ್ರಿಯೆ ನಡೆಸಿದರೂ ಹೊರಪ್ರಪಂಚದ ಜೊತೆಗೆ ಯಾವ ಕ್ರಿಯೆಯನ್ನೂ ನಡೆಸುವುದಿಲ್ಲ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಮೋಡ ಕೋಣೆ ಅಥವಾ ಆವಿ ಪಂಜರ – ವಿಕಿರಣಕಾರೀ ಕಣಗಳ ಪಥಗಳನ್ನು ಕಾಣುವಂತೆ ಮಾಡಲು ಬಳಸುವ ಒಂದು ಉಪಕರಣ.
ಕೋಬಾಲ್ಟ್ ಉಕ್ಕು – ಅತಿವೇಗದ ಉಪಕರಣಗಳಲ್ಲಿ ಬಳಸುವ ಉಕ್ಕಿನ ಒಂದು ಮಿಶ್ರಲೋಹ ಇದು. ಕೋಬಾಲ್ಟ್, ಟಂಗ್‌ಸ್ಟನ್, ಕ್ರೋಮಿಯಂ ಮತ್ತು ವೆನೆಡಿಯಂಗಳನ್ನು ಹೊಂದಿರುವ ಉಕ್ಕಿನ ಈ ಮಿಶ್ರಲೋಹವು ತುಂಬ ಕಠಿಣವಾಗಿದ್ದರೂ ಬೇಗ ಮುರಿಯುವ ಗುಣ ಹೊಂದಿರುತ್ತದೆ.
ಕಾಕ್‌ಕ್ರಾಫ್ಟ್-ವಾಲ್ಟನ್ ವೇಗವರ್ಧಕ – ಮೊಟ್ಟ ಮೊದಲು ಕಂಡುಹಿಡಿಯಲಾದ ಕಣವೇಗವರ್ಧಕವಿದು. ೧೯೩೨ರಲ್ಲಿ, ಬ್ರಿಟನ್ ಮತ್ತು ರ‍್ಲೆಂಡ್‌ನ ಭೌತವಿಜ್ಞಾನಿಗಳಾದ ಜಾನ್ ಡಾಗ್ಲಾಸ್ ಕಾಕ್‌ಕ್ರಾಫ್ಟ್ ಮತ್ತು ರ‍್ನೆಸ್ಟ್ ಸಿನ್‌ಟನ್ ವಾಲ್ಟನ್ ಕಂಡುಹಿಡಿದAಥದ್ದು. ಆಲ್ಫಾ ಕಣಗಳನ್ನು ಪಡೆಯಲೋಸುಗ ಪ್ರೋಟಾನುಗಳನ್ನು ಲಿಥಿಯಮ್ ಗುರಿವಸ್ತುವಿಗೆ ಢಿಕ್ಕಿ ಹೊಡೆಸಿ, ಇದರ ಮೂಲಕ ಮೊಟ್ಟ ಮೊದಲ ಬಾರಿಗೆ ಕೃತಕವಾಗಿ ಅಣುಬೀಜಕೇಂದ್ರ ಒಡೆಯುವಿಕೆಯನ್ನು ಸಾಧಿಸಲಾಯಿತು.
ಸಹಗುಣಕ – ಒಂದು ಗುಣಕ. ಇದು ಒಂದು ವಸ್ತುವಿನ ನಿರ್ದಿಷ್ಟ ಗುಣಲಕ್ಷಣವೊಂದರ ಅಳತೆಯಾಗಿದ್ದು, ಕೆಲವು ದತ್ತ ಸನ್ನಿವೇಶಗಳಲ್ಲಿ ಆ ವಸ್ತುವಿನ ಮಟ್ಟಿಗೆ ಒಂದು ಸ್ಥಿರಾಂಕವಾಗಿರುತ್ತದೆ.
ನಿರ್ಬಂಧಕ ಬಲ – ಅಯಸ್ಕಾಂತವಾಗಿರುವ ಒಂದು ವಸ್ತುವಿನಲ್ಲಿ ಉಳಿದುಕೊಂಡಿರುವ ಅಯಸ್ಕಾಂತತೆಯನ್ನು ತೆಗೆದುಹಾಕಲು ಪ್ರಯೋಗಿಸಬೇಕಾದ ವಿರುದ್ಧಗುಣದ ಅಯಸ್ಕಾಂತೀಯ ತೀಕ್ಷ್ಣತೆ.
ಸುಸಂಬದ್ಧತೆ – ಏಕಮಾತ್ರ ಆವರ್ತನವುಳ್ಳ ಕಿರಣಗಳ ಸಮೂಹದಲ್ಲಿ ಅಲೆಗಳ, ಏರಿಕೆಗಳ ಹಂತವ್ಯತ್ಯಾಸವು ಸ್ಥಿರವಾಗಿರುವುದು. ಒಂದೇ ದಿಕ್ಕಿಗೆ ಹರಿಯುವ ಬೆಳಕನ್ನು ಹೊರಸೂಸುವ ಆಕರವು ಸುಸಂಬದ್ಧವಾಗಿರುತ್ತದೆ, ಉದಾಹರಣೆಗೆ ಲೇಸರ್.
ಸಮಕಣ ಆಕರ್ಷಣೆ – ಒಂದೇ ರೀತಿಯ ಅಲೆಗಳು ಅಥವಾ ಒಂದೇ ವಸ್ತುವಿನ ಅಣುಗಳ ನಡುವಿನ ಆಕರ್ಷಣೆಯ ಬಲ.
ತಂಪು ಋಣವಿದ್ಯುದ್ವಾರ – ವಿದ್ಯುತ್ ತಂತಿಯ ಸಹಾಯದಿಂದ ಬಿಸಿ ಮಾಢದೇ ಇರುವ ಋಣ ವಿದ್ಯುದ್ವಾರ.
ಶೀತ ಪಂಜರ – ದ್ರವರೂಪೀ ಅನಿಲ ಅಥವಾ ಅಸಿಟೋನಿನಲ್ಲಿರುವ ಒಣ ಮಂಜುಗಡ್ಡೆ(ಹೆಪ್ಪುಗಟ್ಟಿಸಿದ ಇಂಗಾಲದ ಡೈ ಆಕ್ಸೈಡ್)ಯನ್ನು ಹೊಂದಿದ್ದು, ತುಂಬ ತಣ್ಣಗಿರುವ ಒಂದು ಕೊಳವೆ ಇದು. ಈ ಕೊಳವೆಯು ತನ್ನ ಮೂಲಕ ಚಿಲಸುವ ಆವಿಯನ್ನು ಹಿಡಿದು ದ್ರವರೂಪಕ್ಕೆ ತಂದುಬಿಡುತ್ತದೆ.