ವಕ್ರಗೊಳಿಸದ ಗುಣ – ವಸ್ತುಗಳಲ್ಲಿರುವ ಒಂದು ಗುಣಲಕ್ಷಣ. ಒಂದು ವಸ್ತುವು ತನ್ನ ಮೇಲೆ ಬಿದ್ದಂತಹ ಬೆಳಕನ್ನು ವಕ್ರೀಭವನಕ್ಕೆ(ರಿಫ್ರ್ಯಾಕ್ಷನ್) ಒಳಪಡಿಸದ ಒಂದು ಗುಣವಿದು.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಶಬ್ಧವಿಜ್ಞಾನ – ಶಬ್ಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ.
ವಿಕಿರಣ ಪ್ರಚೋದನೆ _ ಒಂದು ವಸ್ತುವಿನಲ್ಲಿ ವಿಕಿರಣ(ರೇಡಿಯೇಷನ್)ವನ್ನು ಪ್ರಚೋದಿಸುವ ಪ್ರಕ್ರಿಯೆ.
ಅಂಟಿಕೊಳ್ಳುವಿಕೆ – ಒಂದರಂತೆ ಒಂದಿಲ್ಲದ ಕಣಗಳು ಅಥವಾ ಮೇಲ್ಮೈ ಗಳು ಪರಸ್ಪರ ಅಂಟಿಕೊಳ್ಳುವ ಪ್ರವೃತ್ತಿ.
ಶಕ್ತಿ ವಿನಿಮಯರಹಿತ ಬದಲಾವಣೆ ವ್ಯವಸ್ಥೆಯಲ್ಲಿರುವ ಶಕ್ತಿಯು ಹೊರಗೆ ಹೋಗದೆ, ಹೊರಗಿನಿಂದ ಶಕ್ತಿಯು ಒಳಗೆ ಪ್ರವೇಶಿಸದೆ ನಡೆಯುವಂತಹ ಪ್ರಕ್ರಿಯೆ.
ಆಕರ್ಷಣ ತಂತಿ – ಬಾನುಲಿ, ದೂರದರ್ಶನಗಳಲ್ಲಿ ವಿದ್ಯುತ್ ಕಾಂತೀಯ ತರಂಗಗಳನ್ನು ಆಕರ್ಷಿಸಲು ಬಳಸುವ ತಂತಿ.
ವಾಯುಚಲನ ಶಾಸ್ತ್ರ ವಾಯುವಿನಲ್ಲಿ ವಿಮಾನ, ರಾಕೆಟ್ಟು, ಕ್ಷಿಪಣಿ ಮುಂತಾದ ವಸ್ತುಗಳ ಚಲನೆ ಮತ್ತು ನಿಯಂತ್ರಣವನ್ನು ಕುರಿತ ಅಧ್ಯಯನ.
ವಾಯುಜಿಡ್ಡು ಒಂದು ಅನಿಲದಲ್ಲಿ ಒಂದು ಘನವಸ್ತು ಅಥವಾ ದ್ರವವಸ್ತುವು ಅಲ್ಲಲ್ಲಿ ಹರಡಿಕೊಂಡ ಸ್ಥಿತಿಯಲ್ಲಿ, ಸುಲಭವಾಗಿ ಬೇರ್ಪಡಿಸಲಾಗದಂತೆ ಇದ್ದುಬಿಡುವುದು.
ವಾಯುಮಂಡಲ – ಭೂಮಿಯ ಸುತ್ತ ಇರುವ ವಾಯುಮಂಡಲ ಮತ್ತು ಅದರಾಚೆಗೆ ಇರುವ ಆಕಾಶ.
ಅಗೇಟ್ – ಸಿಲಿಕಾದ ಹರಳುಗಟ್ಟಿದ ರೂಪ ಇದು. ತುಂಬ ಗಟ್ಟಿಯಾದ ಪದಾರ್ಥವಾದ ಇದನ್ನು ಒಡವೆಗಳಲ್ಲಿ ಹಾಗೂ ಚಾಕು ಮುಂತಾದ ಪರಿಕರಗಳನ್ನು ಮಾಡುವ ಸಂದರ್ಭದಲ್ಲಿ ಬಳಸುತ್ತಾರೆ.
Like us!
Follow us!