ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Cohesion

ಸಮಕಣ ಆಕರ್ಷಣೆ – ಒಂದೇ ರೀತಿಯ ಅಲೆಗಳು ಅಥವಾ ಒಂದೇ ವಸ್ತುವಿನ ಅಣುಗಳ ನಡುವಿನ ಆಕರ್ಷಣೆಯ ಬಲ.

Cold cathode

ತಂಪು ಋಣವಿದ್ಯುದ್ವಾರ – ವಿದ್ಯುತ್ ತಂತಿಯ ಸಹಾಯದಿಂದ ಬಿಸಿ ಮಾಢದೇ ಇರುವ ಋಣ ವಿದ್ಯುದ್ವಾರ.

Cold trap

ಶೀತ ಪಂಜರ – ದ್ರವರೂಪೀ ಅನಿಲ ಅಥವಾ ಅಸಿಟೋನಿನಲ್ಲಿರುವ ಒಣ ಮಂಜುಗಡ್ಡೆ(ಹೆಪ್ಪುಗಟ್ಟಿಸಿದ ಇಂಗಾಲದ ಡೈ ಆಕ್ಸೈಡ್)ಯನ್ನು ಹೊಂದಿದ್ದು, ತುಂಬ ತಣ್ಣಗಿರುವ ಒಂದು ಕೊಳವೆ ಇದು. ಈ ಕೊಳವೆಯು ತನ್ನ ಮೂಲಕ ಚಿಲಸುವ ಆವಿಯನ್ನು ಹಿಡಿದು ದ್ರವರೂಪಕ್ಕೆ ತಂದುಬಿಡುತ್ತದೆ.

Collision

ಢಿಕ್ಕಿ(ಸಂಘರ್ಷ) – ಅಣುಗಳು, ಪರಮಾಣುಗಳು ಮುಂತಾದವು ಮುಖಾಮುಖಿಯಾದಾಗ ಅವುಗಳಲ್ಲಿ ಉಂಟಾಗುವ ಪರಸ್ಪರ ಕ್ರಿಯೆ.

Colloid

ಕಲಿಲ – ಇದು ಒಂದು ರೀತಿಯ ಮಿಶ್ರಣ. ಒಂದು ವಸ್ತು ಮತ್ತು ಆ ವಸ್ತುವಿನೊಳಗೆ ಅದರ ಎಲ್ಲೆಡೆಗೂ ವ್ಯಾಪಿಸಿರುವ ಆದರೆ ಕರಗದ ಕಣಗಳ ರೂಪದಲ್ಲಿಯೇ ಉಳಿದಿರುವ ಇನ್ನೊಂದು ವಸ್ತು – ಇವುಗಳ ಮಿಶ್ರಣ ಇದು. ಉದಾಹರಣೆಗೆ ಹಾಲು. ಹಾಲಿನಲ್ಲಿ ಕೊಬ್ಬಿನ ಕಣಗಳು ಕರಗದ ಕಣಗಳಾಗಿಯೇ ಇರುತ್ತವೆ.

Colorimeter

ಬಣ್ಣಶಕ್ತಿ ಮಾಪಕ – ಯಾವುದೇ ಬಣ್ಣದ ತೀಕ್ಷ್ಣತೆಯನ್ನಾದರೂ ಮೂರು ಮೂಲಭೂತ ಬಣ್ಣಗಳ (ಕೆಂಪು, ಹಸುರು, ನೀಲಿ) ನೆಲೆಯಲ್ಲಿ(ಅಂದರೆ ಪ್ರತಿಯೊಂದರ ಪರಿಭಾಷೆಯಲ್ಲಿ) ನೀಡುವ ಒಂದು ಉಪಕರಣ.

Colour

ಬಣ್ಣ – ಮನುಷ್ಯನ ಕಣ್ಣಿನ ಮೇಲೆ ಬೇರೆ ಬೇರೆ ತರಂಗಾಂತರಗಳ ಬೆಳಕು ಬಿದ್ದಾಗ ಉಂಟಾಗುವ ಇಂದ್ರಿಯ ಗ್ರಹಿಕೆ.

Colour blindness

ಬಣ್ಣಗುರುಡು – ಮನುಷ್ಯನ ಕಣ್ಣಿನ ಒಂದು ಸಮಸ್ಯೆ ಇದು. ಒಂದು ನಿರ್ದಿಷ್ಟ ಬಣ್ಣ ಅಥವಾ ಕೆಲವು ಬಣ್ಣಗಳನ್ನು ಗುರುತಿಸಲಾರದ ಕಣ್ಣಿನ ಸಮಸ್ಯೆ.

Colour photography

ಬಣ್ಣ ಛಾಯಾಚಿತ್ರ ಕಲೆ – ಒಂದು ತೆಳುವಾದ ಪೊರೆ ಅಥವಾ ಕಾಗದದ ಮೇಲೆ ಬಣ್ಣವುಳ್ಲ ಬಿಂಬಗಳನ್ನು ಮೂಡಿಸುವ ವಿಧಾನಗಳಲ್ಲಿ ಯಾವುದಾದರೂ ಒಂದು.

Colour Television

ಬಣ್ಣದ ದೂರದರ್ಶನ(ಟಿವಿ) – ಪರದೆಯೊಂದರ ಮೇಲೆ ಬಣ್ಣದ ಚಿತ್ರಗಳನ್ನು ಮೂಡಿಸುವ ವ್ಯವಸ್ಥೆ. ಕೆಂಪು, ಹಸುರು ಮತ್ತು ನೀಲಿ ಎಂಬ ಮೂಲಭೂತ ಬಣ್ಣಗಳನ್ನು ಹೊಂದಿರುವ ಬಿಂಬಗಳನ್ನು ಒಂದಾದ ಮೇಲೊಂದರಂತೆ ತುಂಬ ವೇಗದಲ್ಲಿ ಪ್ರಸಾರ ಮಾಡಿ ಎಲ್ಲ ಬಣ್ಣವುಳ್ಳ ಬಿಂಬವನ್ನು ರೂಪಿಸುವುದು.

Page 20 of 88

Kannada Sethu. All rights reserved.