ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Computer

ಗಣಕ ಯಂತ್ರ – ಒಂದು ವಿದ್ಯುನ್ಮಾನ ಉಪಕರಣ. ಒಂದು ಸೂಚಿತ ಕ್ರಮಬದ್ಧ ಕಾರ್ಯಪಟ್ಟಿ(ಪ್ರೋಗ್ರಾಂ)ಯ ಪ್ರಕಾರ ಮಾಹಿತಿಯನ್ನು ಸಂಸ್ಕರಿಸುತ್ತದೆ. ಗಣಕ ಯಂತ್ರದ ಯಂತ್ರಾಂಶವು(ಹಾರ್ಡ್ವೇರ್) ವಾಸ್ತವಿಕ ವಿದ್ಯುನ್ಮಾನ ಅಥವ ಯಾಂತ್ರಿಕ ಉಪಕರಣಗಳನ್ನು ಒಳಗೊಂಡಿರುತ್ತದೆ, ಹಾಗೂ ಅದರ ತಂತ್ರಾಂಶವು(ಸಾಫ್ಟ್ವೇರ್) ಕ್ರಮಬದ್ಧ ಕಾರ್ಯಪಟ್ಟಿ ಮತ್ತು ದತ್ತಾಂಶಗಳನ್ನು ಒಳಗೊಂಡಿರುತ್ತದೆ.

Concave

ತಗ್ಗು ಅಥವಾ ನಿಮ್ನ – ತನ್ನ ಮೇಲ್ಮೈಯಲ್ಲಿ ಒಳಮುಖಿಯಾಗಿ ತಗ್ಗಿದ ಅಥವಾ ಬಾಗಿದ ಒಂದು ಗಾಜು ಅಥವಾ ಮಸೂರ.

Concave

ತಗ್ಗು-ಉಬ್ಬು ಅಥವಾ ನಿಮ್ನ-ಪೀನ – ತನ್ನ ಒಂದು ಮೇಲ್ಮೈಯಲ್ಲಿ ಉಬ್ಬಿದ್ದು ಇನ್ನೊಂದು ಮೇಲ್ಮೈಯಲ್ಲಿ ತಗ್ಗಿರುವ ಗಾಜು ಅಥವಾ ಮಸೂರ.

Concord

ಸ್ವರಮೈತ್ರಿ – ಎರಡು ಅಥವಾ ಅದಕ್ಕಿಂತ ಹೆಚ್ಚು ಸ್ವರಗಳು ಒಟ್ಟಿಗೆ ಸೇರಿ, ಕಿವಿಗೆ ಇಂಪಾಗುವಂತಹ ಧ್ವನಿಸಂಯೋಜನೆಯನ್ನು ಉಂಟುಮಾಡುವುದು.

Condensation

ಹನಿಗಟ್ಟುವಿಕೆ ಅಥವಾ ಬಾಷ್ಪೀಭವನ –  ‌ವಸ್ತುವಿನ ಅವಸ್ಥೆಯು ಆವಿಯಿಂದ ದ್ರವರೂಪಕ್ಕೆ ಬದಲಾಗುವುದು.

Condensor

ವಿದ್ಯುತ್ ಸಂಗ್ರಾಹಕ – ವಿದ್ಯುದಂಶವನ್ನು ಸಂಗ್ರಹಿಸಬಲ್ಲ  ವಾಹಕ‌ ಅಥವಾ ವಾಹಕಗಳಿಂದ ಕೂಡಿದ ಒಂದು ವ್ಯವಸ್ಥೆ. ಇದಕ್ಕೆ capacitor ಎಂಬ ಹೆಸರೂ ಇದೆ. 

Conductance

ವಾಹಕತ್ವ – ಒಂದು‌ ವಸ್ತುವಿನಲ್ಲಿ ಎಷ್ಟು ಸುಲಭವಾಗಿ ವಿದ್ಯುತ್ ಹರಿಯಬಲ್ಲುದು‌ ಎಂಬುದರ ಅಳತೆಯೇ ಅದರ ವಾಹಕತ್ವ.

Conduction

ವಾಹಕತೆ – ವಸ್ತುವಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಆ ವಸ್ತುವಿನ ಚಲನೆಯಿಲ್ಲದೆ ಶಕ್ತಿಯು ಹರಿಯುವ ಕ್ರಿಯೆ. ಉದಾಹರಣೆಗೆ –  ಉಷ್ಣವಾಹಕತೆ, ವಿದ್ಯುತ್ ವಾಹಕತೆ.

Conjugate points

ಜೋಡಿ ಬಿಂದುಗಳು‌ – ಮಸೂರದ ಎರಡೂ ಬದಿಗಳಲ್ಲಿರುವ ಒಂದು‌ ಜೋಡಿ ಬಿಂದುಗಳಿವು. ಇವು ಹೇಗಿರುತ್ತವೆ ಅಂದರೆ ಒಂದು ಬಿಂದುವಿನಲ್ಲಿ ಇಟ್ಟ ಒಂದು ವಸ್ತುವಿನ ಬಿಂಬವು ಇನ್ನೊಂದರಲ್ಲಿ ಮೂಡುತ್ತದೆ.

Conservation of charge

ವಿದ್ಯುದಂಶದ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ಒಂದು‌ ವ್ಯವಸ್ಥೆಯಲ್ಲಿರುವ ವಿದ್ಯುದಂಶವು ನಿಯತವಾಗಿರುತ್ತದೆ(ನಿಯತ = ಸ್ಥಿರ = ಎಂದೂ ಬದಲಾಗದ್ದು).

Page 22 of 80

Kannada Sethu. All rights reserved.