ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Conservative field

ನಿಯತ ಕ್ಷೇತ್ರ – ಶಕ್ತಿಯು ನಿಯತವಾಗಿರುವ ಭೌತಿಕ ವ್ಯವಸ್ಥೆಗಳ ಬಲಗಳನ್ನು‌ ಸೂಚಿಸುವ ದಿಶಾಯುತ(ದಿಕ್ಕುಳ್ಳ) ಕ್ಷೇತ್ರಗಳು. 

Constant

ಸ್ಥಿರಾಂಕ – ಬೇರೆ ಭೌತಿಕ ಸಂಗತಿಗಳು ಬದಲಾದರೂ ತಾನು ಬದಲಾಗದೆ ಉಳಿಯುವ ಒಂದು ಪರಿಮಾಣ ಅಥವಾ ಅಂಶ.

Constentan

ಕಾನ್ಸ್ಟೆಂಟನ್ – ತಾಮ್ರ ಮತ್ತು ತವರಗಳ ಒಂದು ಮಿಶ್ರಲೋಹ. ಉಷ್ಣತೆಯು ಬದಲಾದಾಗ ಈ ಲೋಹದ ವಿದ್ಯುತ್ ನಿರೋಧಕತೆಯಲ್ಲಿ‌ ತುಂಬ ಕಡಿಮೆ ವ್ಯತ್ಯಾಸ ಆಗುವುದರಿಂದ, ಇದನ್ನು ವಿದ್ಯುದುಷ್ಣತೆಯನ್ನು ಅಳೆಯುವ ಉಪಕರಣಗಳಲ್ಲಿ ಮತ್ತು ನಿಖರತಾ ರೆಸಿಸ್ಟರುಗಳಲ್ಲಿ ಬಳಸುತ್ತಾರೆ.

Contact angle

Contact potential

ಸಂಪರ್ಕ ಅಂತಃ ಸಾಮರ್ಥ್ಯ-ಸಂಪರ್ಕದಲ್ಲಿರುವ ಎರಡು ಘನವಸ್ತುಗಳ ನಡುವೆ ಉಂಟಾಗುವ ಅಂತಃಸಾಮರ್ಥ್ಯ ವ್ಯತ್ಯಾಸ.

Continuous spectrum

ಅಖಂಡ ವರ್ಣಪಟಲ – ಹೊರಸೂಸಲ್ಪಟ್ಟ ಅಥವಾ ಹೀರಲ್ಪಟ್ಟ ವಿಕಿರಣದ ಅಖಂಡ ಶ್ರೇಣಿಯಿಂದ ಉಂಟಾಗಿರುವ ವರ್ಣಪಟಲ.

Continuous wave

ನಿರಂತರ ಅಲೆ – ಆಕಾಶವಾಣಿಯ ಸಂವಹನದಲ್ಲಿ‌ ಆಗುವಂತೆ ಒಂದು‌ ಕಾಲಾವಧಿಯಲ್ಲಿ ನಿರಂತರವಾಗಿ‌‌ ಪ್ರಸಾರಿಸಿದ ಒಂದು ವಿದ್ಯುತ್ಕಾಂತೀಯ ಅಲೆ. ‌

Control grid

ನಿಯಂತ್ರಕ ಸರಳು‌ – ಉಷ್ಣ ವಿದ್ಯುದಣು ಕವಾಟ ಅಥವಾ ಋಣಕಿರಣ ಕೊಳವೆಯಲ್ಲಿ ಇರಿಸಿದ ಲೋಹಪರದೆಯ ರೂಪದ ವಿದ್ಯುತ್ ಧ್ರುವ. ಇದು ಒಂದು ಧ್ರುವದಿಂದ ಇನ್ನೊಂದು ಧ್ರುವಕ್ಕೆ ಹರಿಯುವ ಎಲೆಕ್ಟ್ರಾನುಗಳನ್ನು‌ ನಿಯಂತ್ರಿಸುತ್ತೆ.

Convection

ಸ್ವತಃಚಲನಾ ಉಷ್ಣ ವರ್ಗಾವಣೆ – ಒಂದು ದ್ರವದಲ್ಲಿ ಆ ದ್ರವದ ಚಲನೆಯಿಂದಲೇ ಉಷ್ಣತೆಯು ಅದರ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆಯಾಗುವುದು.

Converging lens or mirror

ಕೂಡುವ ಮಸೂರ ಅಥವಾ ಕನ್ನಡಿ – ಬೆಳಕಿನ‌ ಒಂದು ಸಮಾನಾಂತರ ಕಿರಣ ಸಮೂಹವನ್ನು ಒಂದು ಬಿಂದುವಿನಲ್ಲಿ ಕೂಡುವಂತೆ ವಕ್ರೀಭವಿಸುವ ಅಥವಾ ಪ್ರತಿಫಲಿಸುವ ಮಸೂರ ಅಥವಾ ಕನ್ನಡಿ.‌ ಹೀಗೆ ಮಾಡುವ ಕನ್ನಡಿಯು ತಗ್ಗಿರುತ್ತದೆ ಮತ್ತು‌‌ ಮಸೂರವು‌ ಮಧ್ಯದಲ್ಲಿ ಉಬ್ಬಿರುತ್ತದೆ.

Page 23 of 76

Kannada Sethu. All rights reserved.