ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Alloy

ಮಿಶ್ರಲೋಹ : ಎರಡು ಅಥವಾ ಅದಕ್ಕಿಂತ ಹೆಚ್ಚು ಲೋಹಗಳಿಂದ ಕೂಡಿದ ವಸ್ತು.

Alnico

ಅಲ್ನಿಕೋ : ಕಬ್ಬಿಣ, ಅಲ್ಯುಮಿನಿಯಂ, ನಿಕ್ಕಲ್, ಕೋಬಾಲ್ಟ್ ಮತ್ತು ತಾಮ್ರವನ್ನು ಒಳಗೊಂಡ ಒಂದು  ಸರಣಿಯ ವ್ಯಾಪಾರೀನಾಮ. ಇದನ್ನು ಶಾಶ್ವತ ಅಂiiಸ್ಕಾಂತಗಳನ್ನು ಮಾಡಲು ಬಳಸುತ್ತಾರೆ.

Alpha  particle

ಆಲ್ಫಾ ಕಣ – ಕೆಲವು ವಿಕಿರಣ ವಸ್ತುಗಳು ಹೊರಚೆಲ್ಲುವ ಹೀಲಿಯಂ ಬೀಜಕೇಂದ್ರಗಳು.

Alpha Irradiation

ಆಲ್ಫಾ ಪ್ರಕಾಶ : ಒಂದು ವಸ್ತುವನ್ನು ಆಲ್ಪಾ ಕಣಗಳ ಕಿರಣ ಸಮೂಹಕ್ಕೆ ಒಡ್ಡುವುದು.

Alpha particles

ಆಲ್ಫಾ ಕಣಗಳು – ಎರಡು ಪ್ರೋಟಾನುಗಳು ಮತ್ತು ಎರಡು ನ್ಯೂಟ್ರಾನುಗಳು ಒಟ್ಟಿಗೆ ಬೆಸೆದುಕೊಂಡು ಉಂಟಾಗಿರುವ ಕಣ. ಹೀಲಿಯಂ ಅಣುವಿನ ಬೀಜಕೇಂದ್ರಕ್ಕೆ ಸಮನಾದದ್ದು.

Alternating current

ಪರ್ಯಾಯ ಹರಿವಿನ ವಿದ್ಯುತ್ – ನಿಯತಕಾಲಿಕವಾಗಿ ವಿರುದ್ಧ ದಿಕ್ಕುಗಳಿಗೆ ಮಗುಚುತ್ತಾ ಹರಿಯುವ ವಿದ್ಯುತ್ ಪ್ರವಾಹ.

Alternating current  circuit

ಪರ್ಯಾಯ ವಿದ್ಯುತ್ತಿನ ಮಂಡಲ – ಪರ್ಯಾಯ ವಿದ್ಯುತ್ತಿನ ಆಕರದಿಂದ ವಿದ್ಯುತ್ತನ್ನು ಪಡೆಯುವಂತಹ ವಿದ್ಯುನ್ಮಂಡಲ.

Alternator 

ಪರ್ಯಾಯ ವಿದ್ಯುದುತ್ಪಾದಕ : ಪರ್ಯಾಯ ವಿದ್ಯುತ್ತನ್ನು ಉತ್ಪಾದಿಸುವಂತಹ ಉಪಕರಣ.

Altitude

ಎತ್ತರ – ಸೂರ್ಯ ಅಥವಾ ಯಾವುದಾದರೂ ಆಕಾಶಕಾಯವು ಇರುವ ಎತ್ತರ..

Amalgam

ಪಾದರಸಮಿಶ್ರ ವಸ್ತು – ಪಾದರಸವಿರುವ ಮಿಶ್ರಲೋಹಕ್ಕೆ ಬಳಸುವ ಪದವಿದು.

Page 3 of 80

Kannada Sethu. All rights reserved.