ಗ್ಯಾಸ್ ಥರ್ಮೋಮೀಟರ್ – ಅನಿಲ ತಾಪಮಾಪಕ – ಒಂದು ರೀತಿಯ ತಾಪಮಾಪಕ – ಇದರಲ್ಲಿ ತಾಪದ ಉತ್ಪನ್ನವಾಕ್ಯ(ಫಂಕ್ಷನ್)ವಾಗಿ ಅನಿಲದ ಗುಣಗಳ ಬದಲಾವಣೆಯನ್ನು ಗಮನಿಸಿ ತಾಪಮಾನದ ಅಳತೆ ಮಾಡಲಾಗುತ್ತದೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಗ್ಯಾಸ್ ಟರ್ಬೈನ್ – ಹವೆ ಯಂತ್ರ – ದ್ರವರೂಪೀ ಇಂಧನದ ರಾಸಾಯನಿಕ ಶಕ್ತಿಯು ಯಂತ್ರಚಾಲನಾ ಶಕ್ತಿಯಾಗಿ ಪರಿವರ್ತಿತವಾಗುವ ಒಂದು ಚಾಲಕ ಯಂತ್ರ. ಇದನ್ನು ವಿಮಾನ, ರೈಲು ಹಾಗೂ ಮೋಟಾರು ಕಾರುಗಳಲ್ಲಿ ಬಳಸುತ್ತಾರೆ.
ಗ್ಯಾಸಿಂಗ್ – ಅನಿಲೋತ್ಪಾದನೆ – ಒಂದು ವಿದ್ಯುತ್ ಕೋಶದ ವಿದ್ಯುತ್ ಪೂರಣವು ಮುಗಿದ ಮೇಲೂ ವಿದ್ಯುತ್ ಪೂರಣವನ್ನು ಮುಂದುವರಿಸಿದಾಗ ಆ ವಿದ್ಯುತ್ ಕೋಶದಿಂದ ಸಣ್ಣ ಸಣ್ಣ ಗುಳ್ಳೆಗಳು ಏಳುವ ಕ್ರಿಯೆ.
ಗೇಟ್- ವಿದ್ಯುತ್ ಸಂಕೇತ/ದ್ವಾರ – ವಿದ್ಯುನ್ಮಂಡಲವನ್ನು ಚಾಲೂ ಮಾಡುವ ಒಂದು ವಿದ್ಯುತ್ ಸಂಕೇತ.
ಗೀಗರ್ ಕೌಂಟರ್ ( ಗೀಗರ್ ಮುಲ್ಲರ್ ಕೌಂಟರ್) – ಬಿಡಿಕಣಗಳು ಮತ್ತು ಬೆಳಕು ಕಣಗಳು ( ಫೋಟಾನ್) ಗಳನ್ನು ಲೆಕ್ಕ ಮಾಡುವುದಕ್ಕೋಸ್ಕರ ಅಯಾನೀಕರಿಸುವ ವಿಕಿರಣದ ಪತ್ತೆಯಲ್ಲಿ ಬಳಸುವ ಉಪಕರಣ.
ಗೀಸರ್ಸ್ ಟ್ಯೂಬ್ – ಗೀಸರ್ ಕೊಳವೆ – ಪಾದರಸದ ಒತ್ತಡವು 1 ಮಿಲಿಮೀಟರ್ ನಷ್ಟು ಇರುವಂತೆ ತಯಾರಿಸಿದ ಒಂದು ನಿರ್ವಾತ ಕೊಳವೆ. ಇದರಲ್ಲಿನ ವಿಸರ್ಜನವು ಹೆಚ್ಚು ಉಜ್ವಲವಾಗಿರಬೇಕೆಂದು ಒಂದು ಕಿರಿದಾದ ಜಾಗದಲ್ಲಿ ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಈ ಕೊಳವೆಯನ್ನು ಅನಿಲದ ವರ್ಣಪಟಲಗಳನ್ನು ಅಧ್ಯಯನ ಮಾಡಲಿಕ್ಕೋಸ್ಕರ ಬಳಸುತ್ತಾರೆ.
ಜೆನರೇಟರ್ – ವಿದ್ಯದುತ್ಪಾದಕ – ಯಂತ್ರಚಲನ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಒಂದು ದೊಡ್ಡ ಗಾತ್ರದ ಯಂತ್ರ.
ಜಿಯೋಡೆಸಿಕ್ ಲೈನ್ – ಭೂವಿಭಜನಾ (ರೇಖೆ) – ಬಾಗಿರುವ ಒಂದು ಮೇಲ್ಮೈ ಯಲ್ಲಿ ಎರಡು ಬಿಂದುಗಳಿಗಿರುವ ಅತ್ಯಂತ ಕಡಿಮೆ (ಕನಿಷ್ಠ) ಅಂತರ.
ಜಿಯೋಮೆಟ್ರಿಕ್ ಆವರೇಜ್ – ಜ್ಯಾಮಿತೀಯ ಸರಾಸರಿ – n ಸಂಖ್ಯೆಗಳ ಒಂದು ಗಣದ ಜ್ಯಾಮಿತೀಯ ಸರಾಸರಿ ಅಂದರೆ ಅವುಗಳ ಗುಣಲಬ್ಧದ n ನೇ ಘಾತ.
ಜಿಯೋಮೆಟ್ರಿಕ್ ಸೀರೀಸ್ – ಸಂಖ್ಯೆಗಳು ಅಥವಾ ಗಣಿತ ವಾಕ್ಯಗಳ ಒಂದು ಸರಣಿ. ಇದರಲ್ಲಿ ಪ್ರತಿ ಸಂಖ್ಯೆ ಮತ್ತು ಅದರ ಹಿಂದಿನ ಸಂಖ್ಯೆಗೆ ಇರುವ ಅನುಪಾತವು ಸ್ಥಿರವಾಗಿರುತ್ತದೆ. ಉದಾಹರಣೆಗೆ, 1, 4, 16, 64, 156. ಈ ಸರಣಿಯ ಸರ್ವಸಾಮಾನ್ಯ ಅನುಪಾತ 4.
Like us!
Follow us!