ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Galvanometer

ಗ್ಯಾಲ್ವನೋಮೀಟರ್ – ಗ್ಯಾಲ್ವನೋಮೀಟರು ಅಥವಾ ಕಿರುವಿದ್ಯುತ್ ಪತ್ತೆಯಂತ್ರ – ತುಂಬ ಕಡಿಮೆ ಪ್ರಮಾಣದ ವಿದ್ಯುತ್ತನ್ನು ಕಂಡು ಹಿಡಿಯಲು ಬಳಸುವ ಒಂದು ಉಪಕರಣ. 

Galvanostat

ಗ್ಯಾಲ್ವನೋಸ್ಟ್ಯಾಟ್ – ಸ್ಥಿರ ವಿದ್ಯುತ್ ಉತ್ಪಾದಕ – ಹೆಚ್ಚಿನ ವಿದ್ಯುತ್ ಸಾಮರ್ಥ್ಯ ಇರುವ ವಿದ್ಯುತ್ ಕೋಶದಿಂದ ಸ್ಥಿರ ವಿದ್ಯುತ್ತನ್ನು ಉತ್ಪಾದಿಸಬಲ್ಲ ಉಪಕರಣ.

Galvonic cell or Voltaic cell

ಗ್ಯಾಲ್ವಾನಿಕ್ ಸೆಲ್ ಆರ್ ವೋಲ್ಟಾಯಿಕ್ ಸೆಲ್ – ಗ್ಯಾಲ್ವನಿ‌ ವಿದ್ಯುತ್ ಕೋಶ ಅಥವಾ ವೋಲ್ಟಾ  ವಿದ್ಯುತ್   ಕೋಶ –  ಇದು ಒಂದು ಆದಿಮ ವಿದ್ಯುತ್ ವಿಭಜಕ ಕೋಶ. ಇದರಲ್ಲಿ ಎರಡು ಬೇರೆ ಬೇರೆ ಲೋಹದ ಹಾಳೆಗಳನ್ನು ಒಂದು ವಿದ್ಯುತ್ ವಿಭಜಕ ದ್ರಾವಣದಲ್ಲಿ ಮುಳುಗಿಸಿ ಇಟ್ಟಿರುತ್ತಾರೆ.

Gamma ray spectrum

ಗಾಮಾ ರೇ ಸ್ಪೆಕ್ಟ್ರಮ್ – ಗಾಮಾ ಕಿರಣ ವರ್ಣಪಟಲ( ಗಾಮಾ ಕಿರಣ ರೋಹಿತ) – ಒಂದು ವಿಕಿರಣ ಆಕರದಿಂದ ಹೊರ ಸೂಸಲ್ಪಟ್ಟು ಗಾಮಾಕಿರಣ ಪ್ರದೇಶದಲ್ಲಿ ಜೋಡಣೆಗೊಳ್ಳುವ ತರಂಗಾಂತರ ಶ್ರೇಣಿ. 

Gamma rays( Gamma radiation)

ಗಾಮಾ ರೇಸ್( ಗಾಮಾ ರೇಡಿಯೇಷನ್) – ಗಾಮಾ ಕಿರಣಗಳು ( ಗಾಮಾ ವಿಕಿರಣ) – ತುಂಬ ಚಿಕ್ಕ ತರಂಗಾಂತರವುಳ್ಳ ವಿದ್ಯುತ್ಕಾಂತೀಯ ವಿಕಿರಣ.

Gamut

ಗ್ಯಾಮಟ್ – ಪೂರ್ಣ ಸ್ವರಶ್ರೇಣಿ – ಒಂದು ಸ್ವರಕ್ಕೂ ಮತ್ತು ಅದು ಇರುವಂತಹ ಸ್ವರಾಷ್ಟಕ ಶ್ರೇಣಿಗೂ ಇರುವ ಮಧ್ಯಂತರವನ್ನು ಸಾಮಾನ್ಯವಾಗಿ ಏಳು ಚಿಕ್ಕ ಚಿಕ್ಕ ಮಧ್ಯಂತರಗಳಾಗಿ ವಿಂಗಡಿಸಿರುತ್ತಾರೆ.‌ ಹೀಗೆ ರೂಪುಗೊಂಡ ಎಂಟು ಸ್ವರಗಳು ‘ಒಂದು ಸಂಗೀತ ಶ್ರೇಣಿ’ ಅಥವಾ ಪೂರ್ಣ ಸ್ವರಶ್ರೇಣಿ ಅನ್ನಿಸಿಕೊಳ್ಳುತ್ತವೆ.

Gas 

ಅನಿಲ – ಯಾವ ವಸ್ತುವಿನ ಅಣುಗಳು ಅಥವಾ ಪರಮಾಣುಗಳು ಅದನ್ನು ಇರಿಸಿರುವ ಇಡೀ ಪಾತ್ರೆಯ ಪರಿಮಾಣವನ್ನು ಆವರಿಸುತ್ತವೋ, ಆಕ್ರಮಿಸುತ್ತವೋ ಅಂತಹ ವಸ್ತು.

Gas cell

ಗ್ಯಾಸ್ ಸೆಲ್ – ಅನಿಲ ವಿದ್ಯುತ್ ಕೋಶ – – ತನ್ನ ವಿದ್ಯುತ್ ದ್ವಾರಗಳು ಅನಿಲವನ್ನು ಹೀರಿಕೊಳ್ಳುವುದರ ಮೂಲಕ ಕೆಲಸ ಮಾಡುವಂತಹ ಒಂದು ವಿದ್ಯುತ್ ಕೋಶ.

Gas laws

ಗ್ಯಾಸ್ ಲಾಸ್ – ಅನಿಲ ನಿಯಮಗಳು – ಒಂದು ಅನಿಲದ ಒತ್ತಡ ಮತ್ತು/ಅಥವಾ ಉಷ್ಣತೆಯನ್ನು ಬದಲಾಯಿಸಿದಾಗ ಉಂಟಾಗುವ ಬದಲಾವಣೆಗಳನ್ನು ವಿವರಿಸುವ ನಿಯಮಗಳು. ಉದಾಹರಣೆಗೆ ಬಾಯ್ಲ್ ರ ನಿಯಮ, ಚಾಲ್ಸ್ರ್ ರ ನಿಯಮ.

Gas maser

ಗ್ಯಾಸ್ ಮೇಸರ್ – ಅನಿಲ‌ ಬಲವರ್ಧಕ – ಮೈಕ್ರೋ ಅಲೆಗಳ ವಿಕಿರಣವು ಅನಿಲದ ಅಣುಗಳೊಂದಿಗೆ ಅಂತರ್ ಕ್ರಿಯೆ ನಡೆಸುವ ಒಂದು ಬಲವರ್ಧಕ.

Page 55 of 92

Kannada Sethu. All rights reserved.