ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Atomic number

ಪರಮಾಣೀಯ ಸಂಖ್ಯೆ  ಒಂದು ಪರಮಾಣುವಿನ ಬೀಜಕೇಂದ್ರದಲ್ಲಿರುವ ಪ್ರೋಟಾನುಗಳ ಸಂಖ್ಯೆ. ಇದು ಆ ಬೀಜಕೇಂದ್ರವನ್ನು ಸುತ್ತುತ್ತಿರುವ ಎಲೆಕ್ಟ್ರಾನುಗಳ ಸಂಖ್ಯೆಗೆ ಸಮವಾಗಿರುತ್ತದೆ. 

Attenuation

ಶಕ್ತಿಗುಂದುವಿಕೆ – ಒಂದು ವಸ್ತುವಿನೊಳಗೆ ಹಾದು ಹೋಗುವಾಗ ವಿಕಿರಣದ ಸಾಮರ್ಥ್ಯವು ಕಡಿಮೆಯಾಗುವುದು.

Aurora Borealis

ಉತ್ತರಧ್ರುವ ಅರುಣಜ್ಯೋತಿ – ಉತ್ತರಧ್ರುವದಲ್ಲಿ ಕಾಣಿಸುವ ಬಣ್ಣಬಣ್ಣದ ಬೆಳಕು (ಮುಖ್ಯವಾಗಿ ಕೆಂಪು ಮತ್ತು ಹಸಿರು)

Autoclave

ಕ್ರಿಮಿನಾಶಕ ಪಾತ್ರೆ – ಹೆಚ್ಚಿನ ಉಷ್ಣತೆ ಮತ್ತು ಒತ್ತಡದಲ್ಲಿ ಕ್ರಿಮಿಗಳನ್ನು ನಾಶ ಮಾಡುವ ಗಟ್ಟಿಯಾದ ಪಾತ್ರೆ.

Avalanche

ವಿದ್ಯುದಣು ಸುಗ್ಗಿ – ಕೇವಲ ಒಂದೇ ಬಾರಿಯ ವಿದ್ಯುದಣುಗೊಳಿಸುವಿಕೆಯಿಂದ ವಿಪುಲ ಸಂಖ್ಯೆಯ ವಿದ್ಯುದಣುಗಳು ಸೃಷ್ಟಿಯಾಗುವ ಪ್ರಕ್ರಿಯೆ.

Axis

ಅಕ್ಷರೇಖೆ – ಒಂದು ವಸ್ತು ಅಥವಾ ವ್ಯವಸ್ಥೆಯು ಯಾವ ರೇಖೆಯ ಸುತ್ತ ಸುತ್ತುತ್ತದೋ ಆ ರೇಖೆ. 

Azeotrope

ಬದಲಾಗದ ಬಂಧವುಳ್ಳದ್ದು – ಒಟ್ಟಿಗೆ ಕುದಿಯುವಾಗ ತಮ್ಮ ಬಂಧದಲ್ಲಿ ಯಾವುದೇ ವ್ಯತ್ಯಾಸ ತೋರದ ಎರಡು ದ್ರವಗಳ ಮಿಶ್ರಣ.

Background radiation

ಹಿನ್ನೆಲೆ ವಿಕಿರಣ – ಭೂಮಿಯ ಮೇಲ್ಮೈಯಲ್ಲಿ ಮತ್ತು ವಾತಾವರಣದಲ್ಲಿ ಸದಾ ಇರುವ ಸಹಜವಾದ, ಕಡಿಮೆ ತೀಕ್ಷ್ಣತೆಯ, ಪರಮಾಣುಗಳನ್ನು ವಿದ್ಯುತ್‌ಕಣಗಳನ್ನಾಗಿಸುವ ಸಾಮರ್ಥ್ಯವುಳ್ಳ ವಿಕಿರಣ.

Ballistics

ಕ್ಷಿಪಣಿ ಪಥ ಅಧ್ಯಯನ – ಮುಂದಕ್ಕೆಸೆಯಲಾಗುವ ವಸ್ತುಗಳ ಅದರಲ್ಲೂ ಕ್ಷಿಪಣಿಗಳ ಪಥಚಲನೆಯ ಅಧ್ಯಯನ.

Balmer Series 

ಬಾಲ್ಮರ್ ಸರಣಿ – ಜಲಜನಕದ ಪರಮಾಣುಗಳ ವರ್ಣಪಟಲದ ಗೆರೆಗಳ ಅಧ್ಯಯನ.

Page 6 of 80

Kannada Sethu. All rights reserved.