ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Halo

ಹೇಲೋ – ಪ್ರಭಾಮಂಡಲ – ಸೂರ್ಯ ಅಥವಾ ಚಂದ್ರನ ಸುತ್ತ ಕೆಲವು ಸಲ ಕಾಣಸಿಗುವ ಪ್ರಕಾಶಮಾನವಾದ ಹೊಳೆಯುವ ಉಂಗುರ. ಇದಕ್ಕೆ ಕಾರಣವೇನೆಂದರೆ ಭೂಮಿಯ ವಾತಾವರಣದಲ್ಲಿನ ಕಣಗಳು ಆ ಆಕಾಶಕಾಯಗಳ ಬೆಳಕನ್ನು ಹಬ್ಬಿಸುವ ಪ್ರಕ್ರಿಯೆ ( ಡಿಪ್ರ್ಯಾಕ್ಷನ್).

Hard ferromagnetic materials

ಹಾರ್ಡ್ ಫೆರ್ರೋಮ್ಯಾಗ್ನೆಟಿಕ್ ಮೆಟೀರಿಯಲ್ಸ್ – ಕಠಿಣ ಪ್ರಬಲ ಅಯಸ್ಕಾಂತೀಯ ವಸ್ತುಗಳು – ಬಾಹ್ಯ ಕಾಂತಕ್ಷೇತ್ರವನ್ನು ತೆಗೆದ ನಂತರವೂ ತಮ್ಮ ಅಯಸ್ಕಾಂತತೆಯನ್ನು ಉಳಿಸಿಕೊಳ್ಳುವ ನಿಕ್ಕಲ್ ನಂತಹ ಕೆಲವು ವಸ್ತುಗಳು.

Hard radiation

ಹಾರ್ಡ್ ರೇಡಿಯೇಷನ್ – ಕಠಿಣ ವಿಕಿರಣ – ತೀಕ್ಷ್ಣ ವಾದ ಒಳಪ್ರವೇಶಿಕ ಸಾಮರ್ಥ್ಯ ಇರುವಂತಹ ವಿಕಿರಣಕಾರಕ ಬೆಳಕು ಅಥವಾ ಕಿರಣಗಳು, ಅಥವಾ ಚಿಕ್ಕ ತರಂಗಾಂತರವುಳ್ಳ ಕ್ಷ-ಕಿರಣಗಳು.

Hard(high) vacuum

ಹಾರ್ಡ್( ಹೈ) ವ್ಯಾಕ್ಯೂಮ್ – ಕಠಿಣ (ಉನ್ನತ) ನಿರ್ವಾತ – ನೂರು‌ ಮಿಲಿ ಪ್ಯಾಸ್ಕಲ್ ಗಳಿಗಿಂತ ಕಡಿಮೆ ಒತ್ತಡವುಳ್ಳ ನಿರ್ವಾತ.

Hardware 

ಹಾರ್ಡ್‌ವೇರ್ – (ಗಣಕಯಂತ್ರದ) ಯಂತ್ರಾಂಶ – ಗಣಕಯಂತ್ರದಲ್ಲಿ ವಾಸ್ತವಿಕವಾಗಿ ಬಳಸುವ ವಿದ್ಯುನ್ಮಾನೀಯ ಅಥವಾ ಯಾಂತ್ರಿಕ ಉಕಕರಣಗಳು‌( ಸಾಪ್ಟ್ ವೇರ್ ಅಂದರೆ ತಂತ್ರಾಂಶ = ದತ್ತಾಂಶ ಹಾಗೂ ಕಾರ್ಯಕ್ರಮ ಪಟ್ಟಿಗಳು).

Harmonic

ಹಾರ್ಮೋನಿಕ್ – ಸಮರಸ, ಸಮರೂಪೀ ಅಲೆ – ಒಂದು ಸಂಕೀರ್ಣ ಅಲೆರೂಪ ಅಥವಾ  ಕಂಪನದ ಸಂದರ್ಭದಲ್ಲಿ ಸಾಧ್ಯವಾಗುವ ಸರಳ ಅಲೆರೂಪೀ ಭಾಗ‌‌. ಇದು ಸೈನ್ ಅಲೆಯ  ರೂಪದಲ್ಲಿ ಇರುತ್ತದೆ. ಇದರಲ್ಲಿ ಏರುತಗ್ಗಿನ ಪ್ರಮಾಣ ಒಂದೇ ಸಮನಾಗಿರುತ್ತದೆ.

Harmonic motion 

ಹಾರ್ಮೋನಿಕ್ ಮೋಷನ್ – ಸಂಗತ ಆವರ್ತನ ಅಥವಾ ಸಮರಸ ಚಲನೆ – ನಿಯಮಿತವಾಗಿ ಪುನರಾವರ್ತನೆಗೊಳ್ಳುವ ಸರಣಿ. ಇದನ್ನು ಸೈನ್ ತರಂಗಗಳ (ಅಲೆಗಳ)  ಒಂದು‌ ಮೊತ್ತವಾಗಿ ನಿರೂಪಿಸಬಹುದು (ತನ್ನ ಆಕಾರವನ್ನು ಸದಾ ಉಳಿಸಿಕೊಳ್ಳುವ ಅಲೆಯೇ ಸೈನ್ ಅಲೆ).

Heat

ಹೀಟ್ – ಉಷ್ಣತೆ – ಹೆಚ್ಚು ತಾಪಮಾನವುಳ್ಳ ಪ್ರದೇಶದಿಂದ ಕಡಿಮೆ ತಾಪಮಾನವುಳ್ಳ‌ ಪ್ರದೇಶಕ್ಕೆ ವರ್ಗಾವಣೆಯಾಗುವ ಶಕ್ತಿಯನ್ನು ಸಾಮಾನ್ಯವಾಗಿ ಉಷ್ಣತೆ ಎಂಬ‌ ಹೆಸರಿನಿಂದ ಕರೆಯುತ್ತಾರೆ.

Heat capacity

ಹೀಟ್ ಕೆಪ್ಯಾಸಿಟಿ – ಉಷ್ಣತಾ ಸಾಮರ್ಥ್ಯ ಅಥವಾ ತಾಪ ಸಾಮರ್ಥ್ಯ – ಒಂದು ವಸ್ತುವಿನ‌ ತಾಪಮಾನವನ್ನು ಒಂದು ಏಕಘಟಕ ಅಳತೆಗೆ ಏರಿಸಲು ಬೇಕಾಗಿರುವ ಶಕ್ತಿ. ‌ಇದನ್ನು ಸಾಮಾನ್ಯವಾಗಿ ಜೌಲ್ಸ್ ಪರ್ ಕೆಲ್ವಿನ್ ನಲ್ಲಿ ಹೇಳಲಾಗುತ್ತದೆ. 

Heat engine

ಹೀಟ್ ಇಂಜಿನ್ – ತಾಪಯಂತ್ರ (ಉಷ್ಣ ಚಲನಾ ಯಂತ್ರ) – ಉಷ್ಣತೆಯನ್ನು ಕಾರ್ಯವಾಗಿ ಪರಿವರ್ತಿಸುವ ಒಂದು ಯಂತ್ರ.

Page 63 of 80

Kannada Sethu. All rights reserved.