ಇಂಡಕ್ಷನ್ ಮೋಟಾರ್ – ವಿದ್ಯುತ್ಪ್ರೇರಣಾ ಮೋಟಾರು- ಪರ್ಯಾಯ ವಿದ್ಯುತ್ ನ ವಿದ್ಯುತ್ ಯಂತ್ರ( ಮೋಟಾರು). ಇದರಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿದಂತಹ ಬದಲಾಗುತ್ತಿರುವ ಕಾಂತಕ್ಷೇತ್ರವು, ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿರುವ ಸುರುಳಿಯಲ್ಲಿ ವಿದ್ಯುತ್ತನ್ನು ಪ್ರೇರಿಸುತ್ತದೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಇನೆಲಾಸ್ಟಿಕ್ ಕೊಲಿಷನ್ – ಸ್ಥಿತಿಸ್ಥಾಪಕವಲ್ಲದ ಢಿಕ್ಕಿ - ಚಲನಶಕ್ತಿಯು ನಷ್ಟವಾಗುವಂತಹ ಢಿಕ್ಕಿಯನ್ನು ಸ್ಥಿತಿಸ್ಥಾಪಕವಲ್ಲದ ಢಿಕ್ಕಿ ಎನ್ನುತ್ತಾರೆ. ಇಲ್ಲಿ ಚಲನಶಕ್ತಿಯ ಒಂದಷ್ಟು ಭಾಗವು ಆಂತರಿಕ ಶಕ್ತಿಯಾಗಿ ಮಾರ್ಪಾಡಾಗುತ್ತದೆ.
ಇನರ್ಟ್ ಗ್ಯಾಸಸ್ – ಜಡಾನಿಲಗಳು – ಹೀಲಿಯಂ, ಆರ್ಗಾನ್, ನಿಯಾನ್, ಕ್ರಿಪ್ಟಾನ್ ಮತ್ತು ಆರ್ಗ್ನೆಸಾನ್ – ಈ ಮೂಲವಸ್ತುಗಳು. ಇವುಗಳ ಅತ್ಯಂತ ಹೊರಗಿನ ಕಕ್ಷೆಯು ಸಂಪೂರ್ಣವಾಗಿ ತುಂಬಿರುತ್ತದೆ.
ಇನರ್ಷಿಯಾ – ಯಥಾಸ್ಥಿತಿ ಜಡತ್ವ – ಇದು ವಸ್ತುವಿಗಿರುವ ಒಂದು ಆಂತರಿಕ ಗುಣ. ನ್ಯೂಟನ್ ರ ಮೊದಲ ಚಲನಾ ನಿಯಮವು ಈ ಗುಣವನ್ನು ನಿರೂಪಿಸುತ್ತದೆ. ಈ ಗುಣದಿಂದಾಗಿ ವಸ್ತುವು ತಾನು ಇರುವ ವಿಶ್ರಾಂತ ಸ್ಥಿತಿ ಅಥವಾ ಚಲನೆಯ ಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯನ್ನು ಪ್ರತಿರೋಧಿಸುತ್ತದೆ.
ಇನರ್ಷಿಯಲ್ ಫ್ರೇಮ್ – ಜಡತ್ವ ಚೌಕಟ್ಟು - ನ್ಯೂಟನ್‌ರ ನಿಯಮಗಳು ಪಾಲಿಸಲ್ಪಡುವಂತಹ ನಿರ್ದೇಶಕ ಚೌಕಟ್ಟು.
ಇನರ್ಷಿಯಲ್ ಮಾಸ್ – ಜಡತ್ವ ದ್ರವ್ಯರಾಶಿ – ಜಡತ್ವದ ಗುಣಲಕ್ಷಣದ ಆಧಾರದಿಂದ ಅಳೆದಂತಹ, ವಸ್ತುವಿನ ದ್ರವ್ಯರಾಶಿ.
ಇನರ್ಷಿಯಲ್ ಸಿಸ್ಟಂ – ಜಡತ್ವ ವ್ಯವಸ್ಥೆ – ಒಂದು ವಸ್ತುವು ಯಾವುದೇ ಬಾಹ್ಯ ಬಲಗಳ ಪರಿಣಾಮದ ಗೋಜಿಲ್ಲದೆ ಸ್ಥಿರವಾದ ದಿಕ್ವೇಗದಲ್ಲಿ ಚಲಿಸುತ್ತಿರುವಂತೆ ನೋಡಲು, ಒಬ್ಬ ವೀಕ್ಷಕನಿಗೆ ಸಾಧ್ಯವಾಗುವ ಒಂದು ನಿರ್ದೇಶಕ ಚೌಕಟ್ಟು.
ಇನ್ಫ್ರಾರೆಡ್ ಸ್ಟಾರ್ಸ್ – ಅಧೋಕೆಂಪು ನಕ್ಷತ್ರಗಳು – ಅಧೋಕೆಂಪು ವಿಕಿರಣವನ್ನು ತಮ್ಮ ಮುಖ್ಯ ಹೊರಸೂಸುವಿಕೆಯಾಗಿ ಹೊಂದಿರುವ ಆಕಾಶಕಾಯಗಳು. ಧೂಳಿನ ಮೋಡಗಳಿಂದ ಸುತ್ತುವರಿದಿರುವ ನಕ್ಷತ್ರಗಳಿವು ಎನ್ನಲಾಗುತ್ತದೆ.
ಇನ್ಫ್ರಾರೆಡ್ ( IR) – ಅಧೋಕೆಂಪು – ಕಣ್ಣಿಗೆ ಕಾಣಿಸುವಂತಹ ವರ್ಣಪಟಲದಲ್ಲಿನ ಕೆಂಪು ಬಣ್ಣದ ಆಚೆಯ ವಿಕಿರಣ.
ಇನ್ಫ್ರಾರೆಡ್ ಡಿಟೆಕ್ಟರ್ – ಅಧೋಕೆಂಪು ಪತ್ತೆಯಂತ್ರ – ಅಧೋಕೆಂಪು ವಿಕಿರಣವನ್ನು ಗಮನಿಸಲು ಮತ್ತು ಅಳೆಯಲು ಬಳಸುವಂತಹ ಒಂದು ಉಷ್ಣ ಉಪಕರಣ.
Like us!
Follow us!