ಐಸೋಲೇಟಿಂಗ್ ಟ್ರ್ಯಾನ್ಸ್ಫಾರ್ಮರ್ – ಪ್ರತ್ಯೇಕಗೊಳಿಸುವ ವಿದ್ಯುತ್ ಪರಿವರ್ತಕ – ಯಾವುದಾದರೂ ವಿದ್ಯುನ್ಮಂಡಲ ಅಥವಾ ಉಪಕರಣವನ್ನು ತನ್ನ ವಿದ್ಯುತ್ ಸರಬರಾಜಿನಿಂದ ಪ್ರತ್ಯೇಕಗೊಳಿಸುವ (ಬೇರೆ ಮಾಡುವ) ಪರಿವರ್ತಕ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಐಸೋಲೇಟರ್ – ಪ್ರತ್ಯೇಕಕಾರಕ – ವಿದ್ಯುತ್ ಕಾಂತೀಯ ಶಕ್ತಿಯನ್ನು ಒಂದು ದಿಕ್ಕಿನಲ್ಲಿ ಹರಿಯಲು ಬಿಟ್ಟು ಅದರ ವಿರುದ್ಧ ದಿಕ್ಕಿನಲ್ಲಿ ವಿದ್ಯುತ್ ಸಾಮರ್ಥ್ಯವನ್ನು ಹೀರಿಕೊಳ್ಳುವ ಉಪಕರಣ.
ಐಸೋಮ್ಯಾಗ್ನೆಟಿಕ್ ಲೈನ್ಸ್ – ಕಾಂತಬಲವು ಸಮಾನವಾಗಿರುವ ಬಿಂದುಗಳನ್ನು ಜೋಡಿಸುವ ರೇಖೆಗಳು.
ಐಸೋಮರ್ಸ್ – ಸಮಾಂಗಿಗಳು – ಸಮಾನ ಅಣುತೂಕ ಮತ್ತು ಸಮಾನ ಶೇಕಡಾವಾರು ವಸ್ತುಸಂಯೋಜನೆಗಳನ್ನು ಹೊಂದಿದ್ದು, ತಮ್ಮ ಕೆಲವು ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಲ್ಲಿ ಭಿನ್ನವಾಗಿರುವ ಸಂಯುಕ್ತಗಳು.
ಐಸೋಮೆಟ್ರಿಕ್ ಚೇಂಜ್ – ಪರಿಮಾಣೀಯ ಬದಲಾವಣೆ – ಸ್ಥಿರಪರಿಮಾಣದ ಒಂದು ಅನಿಲದಲ್ಲಿ ಉಂಟಾಗುವ ಬದಲಾವಣೆ.
ಐಸೋಮಾರ್ಫಿಸಂ. – ಸಮರೂಪತೆ – ರಾಸಾಯನಿಕವಾಗಿ ಪರಸ್ಪರ ಸಂಬಂಧ ಹೊಂದಿರುವ ವಸ್ತುಗಳಲ್ಲಿನ ಹರಳುಗಳ ರೂಪ ಅಥವಾ ರಚನೆಯಲ್ಲಿನ ಸಮತೆ.
ಐಸೋಥರ್ಮ್ – ಸಮತಾಪರೇಖೆ – ಸಮ ಉಷ್ಣತೆಯುಳ್ಳ ಬಿಂದುಗಳು ಸೇರುತ್ತಾ ಹೋಗುವ ಒಂದು ರೇಖೆ ಅಥವಾ ರೇಖಾಚಿತ್ರ.
ಐಸೋಥರ್ಮಲ್ ಪ್ರೋಸೆಸ್ – ಸಮತಾಪ ಅಥವಾ ಸಮೋಷ್ಣ ಪ್ರಕ್ರಿಯೆ – ತನ್ನ ಉದ್ದಕ್ಕೂ ಉಷ್ಣತೆಯು ಸ್ಥಿರವಾಗಿರುವಂತಹ ಪ್ರಕ್ರಿಯೆ. ಇದರಲ್ಲಿ ವ್ಯವಸ್ಥೆಯು, ಬದಲಾವಣೆಯುದ್ದಕ್ಕೂ ತನ್ನ ಸುತ್ತಮುತ್ತಲ ಪರಿಸರದೊಂದಿಗೆ ಸಮತೋಲನದಲ್ಲಿರುತ್ತದೆ.
ಐಸೋಥರ್ಮಲ್ ಟ್ರ್ಯಾನ್ಸ್ಫಾರ್ಮೇಷನ್ – ಸಮೋಷ್ಣ ಪರಿವರ್ತನೆ – ಉಷ್ಣಚಲನಾ ಶಾಸ್ತ್ರದಲ್ಲಿ ಸರ್ವೇಸಾಮಾನ್ಯವಾಗಿ ಬಳಸುವ ಪದ. ಸ್ಥಿರವಾದ ಉಷ್ಣತೆಯಲ್ಲಿ ಒಂದು ವಸ್ತುವಿನಲ್ಲಿ ಉಂಟಾಗುವ ಬದಲಾವಣೆಯನ್ನು ಇದು ಹೇಳುತ್ತದೆ.
ಐಸೋಟೋನ್ಸ್ – ಸಮಸಾರಿಗಳು ಅಥವಾ ಸಮಕೇಂದ್ರೀಯಗಳು – ಒಂದೇ ಸಂಖ್ಯೆಯ ನ್ಯೂಟ್ರಾನುಗಳನ್ನು ಆದರೆ ಬೇರೆ ಬೇರೆ ಸಂಖ್ಯೆಯ ಪ್ರೋಟಾನುಗಳನ್ನು ಹೊಂದಿರುವ ಬೀಜಕೇಂದ್ರಗಳು (ನ್ಯೂಕ್ಲೈಡುಗಳು).
Like us!
Follow us!