ಐಸೋಟೋಪ್ ಸೆಪರೇಷನ್ – ಸಮಸ್ಥಾನಿಗಳ ಪ್ರತ್ಯೇಕೀಕರಣ – ಒಂದು ವಸ್ತುವಿನ ಸಮಸ್ಥಾನಿಗಳನ್ನು ಅವುಗಳ ಭೌತಿಕ ಗುಣಲಕ್ಷಣಗಳಲ್ಲಿರುವ ತುಸು ವ್ಯತ್ಯಾಸದ ಆಧಾರದ ಮೇಲೆ ಪ್ರತ್ಯೇಕಗೊಳಿಸುವುದು. ಇದನ್ನು ಮಾಡಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಐಸೋಟೋಪ್ಸ್ – ಸಮಸ್ಥಾನಿಗಳು – ಒಂದೇ ಪರಮಾಣು ಸಂಖ್ಯೆಯಿದ್ದು ಬೇರೆ ಬೇರೆ ದ್ರವ್ಯರಾಶಿ ಸಂಖ್ಯೆಗಳುಳ್ಳ ಒಂದು ವಸ್ತುವಿನ ಪರಮಾಣುಗಳು. ಇಂತಹ ಪ್ರಭೇದಗಳ ಪ್ರೋಟಾನು ಸಂಖ್ಯೆಯು ಸಮವಾಗಿದ್ದು, ನ್ಯೂಟ್ರಾನುಗಳ ಸಂಖ್ಯೆ ಭಿನ್ನವಾಗಿರುತ್ತದೆ. ಇವುಗಳಿಗೆ ಸಮಾನ ರಾಸಾಯನಿಕ ಗುಣಲಕ್ಷಣಗಳು ಹಾಗೂ ಭಿನ್ನವಾದ ಭೌತಿಕ ಗುಣಲಕ್ಷಣಗಳಿರುತ್ತವೆ.
ಐಸೋಟೋಪಿಕ್ ನಂಬರ್ – ನ್ಯೂಟ್ರಾನ್ ಎಕ್ಸೆಸ್ – ಸಮಸ್ಥಾನಿ ಸಂಖ್ಯೆ (ನ್ಯೂಟ್ರಾನ್ ಆಧಿಕ್ಯ) – ಒಂದು ಸಮಸ್ಥಾನಿಯಲ್ಲಿ ಪ್ರೋಟಾನುಗಳ ಸಂಖ್ಯೆಗೂ ನ್ಯೂಟ್ರಾನುಗಳ ಸಂಖ್ಯೆಗೂ ಇರುವ ವ್ಯತ್ಯಾಸ.
ಐಸೀಟೋಪಿಕ್( ಐಸೋ/ ಐಸೋಬಾರಿಕ್) ಸ್ಪಿನ್ – ಸಮಸ್ಥಾನೀ(ಸಮ/ಸಮಭಾರಿ) ಗಿರಕಿ – ಒಂದು ರೀತಿಯ ಮೂಲಭೂತ ಕಣಗಳಾದ ಹೇಡ್ರಾನುಗಳಿಗೆ ನೀಡುವಂತಹ ಒಂದು ಶಕ್ತಿಪೊಟ್ಟಣ ( ಕ್ವಾಂಟಂ) ಸಂಖ್ಯೆ. ಬಹಳಷ್ಟು ರೀತಿಗಳಲ್ಲಿ ಸಮನಾಗಿದ್ದು, ವಿದ್ಯುತ್ ಕಾಂತೀಯ ಗುಣಲಕ್ಷಣಗಳಲ್ಲಿ ಮಾತ್ರ ಭಿನ್ನವಾಗುವ ಕಣಗಳ ಒಂದು ಕಟ್ಟಿನ ಸದಸ್ಯರನ್ನು ಗುರುತಿಸಲು ಈ ಪದವನ್ನು ಬಳಸಲಾಗುತ್ತದೆ.
Like us!
Follow us!