ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Johnson noise 

ಜಾನ್ಸನ್ ನಾಯ್ಸ್ – ಜಾನ್ಸನ್ ರ ಶಬ್ಧ – ವಿದ್ಯುನ್ಮಾನ ಶಾಸ್ತ್ರಕ್ಕೆ ‌ಸಂಬಂಧಿಸಿದ ಪದ ಇದು. ಇದರ ವಾಹಕಗಳಲ್ಲಿನ ಎಲೆಕ್ಟ್ರಾನುಗಳಲ್ಲಿ ಉಂಟಾದ ತಾಪಮೂಲೀಯ ಕ್ಷೋಭೆಯಿಂದಾಗಿ ಉಂಟಾಗುವ ಶಬ್ಧ.

Joly steam calorimeter

ಜೋಲಿ ಸ್ಟೀಮ್ ಕೆಲೊರಿಮೀಟರ್ – ಜೋಲಿ ಹಬೆಯ ಕೆಲೊರಿ( ಉಷ್ಣ) ಮಾಪಕ – ಸ್ಥಿರ ಪರಿಮಾಣದಲ್ಲಿ ಒಂದು ಅನಿಲದ ನಿರ್ದಿಷ್ಟ ( ಸ್ಪೆಸಿಫಿಕ್) ತಾಪ ಸಾಮರ್ಥ್ಯವನ್ನು ಅಳೆಯಲು ಬಳಸುವ ಒಂದು ಉಪಕರಣ.

Joule ( symbol J) 

ಜೌಲ್ (ಸಿಂಬಲ್ ಜೆ) – ಜೌಲ್ ( ಸಂಕೇತ J) -ಶಕ್ತಿ ಮತ್ತು ಕಾರ್ಯದ ಎಸ್.ಐ. ಮೂಲಮಾನ. ಒಂದು ನ್ಯೂಟನ್ ಬಲವನ್ನು ಒಂದು ಬಿಂದುವಿನ ಮೇಲೆ ಹಾಕಿದಾಗ, ಆ ಬಲವು ಆ ಬಿಂದುವಿನಲ್ಲಿರುವ ವಸ್ತುವನ್ನು ಒಂದು ಮೀಟರ್ ತಳ್ಳಲು ಮಾಡಬೇಕಾದ ಕಾರ್ಯವೇ ಒಂದು ಜೌಲ್. ಎಲ್ಲ ರೂಪದ ಶಕ್ತಿಗಳಿಗೂ  ಜೌಲ್ ಎಂಬುದೇ ಮೂಲಮಾನವಾಗಿದೆ( 1 J = 1 Nm).

Joule Kelvin effect( Joule Thompson effect)

ಜೌಲ್ ಕೆಲ್ವಿನ್ ಎಫೆಕ್ಟ್ ‌( ಜೌಲ್ ಥಾಂಪ್ಸನ್ ಎಫೆಕ್ಟ್) – ಜೌಲ್ ಕೆಲ್ವಿನ್ ಪರಿಣಾಮ ( ಜೌಲ್ ಥಾಂಪ್ಸನ್ ಪರಿಣಾಮ) ಒಂದು ಅನಿಲವು ರಂಧ್ರಗಳುಳ್ಳ ಅಡ್ಡಗೋಡೆಯ ಮೂಲಕ ಕಡಿಮೆ ಒತ್ತಡವುಳ್ಳ ಒಂದು ಪ್ರದೇಶಕ್ಕೆ ವಿಸ್ತರಿಸಿಕೊಂಡಾಗ ಅದರಲ್ಲಿ ಉಂಟಾಗುವ ಬದಲಾವಣೆ. ಅನೇಕ ನೈಜ ಅನಿಲಗಳು ಈ ರೀತಿಯಲ್ಲಿ ವಿಸ್ತಾರಗೊಂಡಾಗ ಸ್ವಲ್ಪ ತಂಪಾಗುತ್ತವೆ. ಏಕೆಂದರೆ, ಅವು ತಮ್ಮೊಳಗಿನವೇ ಆದ ಸ್ವಂತ ಅಂತರ್ ಅಣುಶಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುತ್ತವೆ. ಆದರ್ಶ ಅನಿಲಗಳಲ್ಲಿ ಅಂತರ್ ಅಣುಶಕ್ತಿಗಳು ಇಲ್ಲದಿರುವುದರಿಂದ ಈ ಪರಿಣಾಮವು ಅವುಗಳಲ್ಲಿ ಕಾಣಿಸುವುದಿಲ್ಲ.

Junction detector

ಜಂಕ್ಷನ್ ಡಿಟೆಕ್ಟರ್ – ಕೂಡುಬಿಂದು‌ ಪತ್ತೆಯಂತ್ರ – ಹಿಮ್ಮುಖ ವಿದ್ಯುತ್ ಸಾಮರ್ಥ್ಯವುಳ್ಳ ಅರೆವಾಹಕ ಕೂಡುಸ್ಥಳದಲ್ಲಿನ ವಿದ್ಯುತ್ ಪಾತದ ಕೂಡುಬಿಂದುವಿನಲ್ಲಿ ವಿದ್ಯುತ್ ವಿಕಿರಣವನ್ನು ಅಳೆಯುವ ಉಪಕರಣ.

Junction rectifier

ಜಂಕ್ಷನ್ ರೆಕ್ಟಿಫೈಯರ್ – ಕೂಡುಬಿಂದು ಪರಿವರ್ತಕ‌ – ಅರೆವಾಹಕ ಕೂಡುಬಿಂದುವನ್ನು ಆಧರಿಸಿದ ಪರಿವರ್ತಕ.

K – electron

ಕೆ – ಎಲೆಕ್ಟ್ರಾನ್ : ಕೆ.ಎಲೆಕ್ಟ್ರಾನು – ಪರಮಾಣುವಿನ ಬೀಜಕೇಂದ್ರಕ್ಕೆ ಅತ್ಯಂತ ಹತ್ತಿರವುಳ್ಳ ಸುತ್ತುಪಥ( ಕಕ್ಷೆ) ಯಲ್ಲಿರುವ ಎರಡು ಎಲೆಕ್ಟ್ರಾನುಗಳಲ್ಲಿ ಒಂದು.

Kaon

ಕೇಯಾನು – ಒಂದು ಕೆ-ಮೆಸಾನು ( ಮೆಸಾನು = ಎಲೆಕ್ಟ್ರಾನುಗಳಿಗಿಂತ ಭಾರವಾದ ಆದರೆ ಪ್ರೋಟಾನುಗಳಿಗಿಂತ ಹಗುರವಾದ ಮೂಲಭೂತ ಕಣಗಳು)

Kaonic atom

ಕೇಯಾನಿಕ್ ಆಟಮ್ – ಕೇಯಾನೀಯ ಪರಮಾಣು‌ – ಒಂದು ಸಾಧಾರಣ ಬೀಜಕೇಂದ್ರದ ಸುತ್ತ ಋಣಾತ್ಮಕ ವಿದ್ಯುದಂಶವುಳ್ಳ ಕೇಯಾನು ಸುತ್ತುತ್ತಿದ್ದರೆ ಅಂತಹ ಪರಮಾಣುವನ್ನು ಕೇಯಾನೀಯ ಪರಮಾಣು ಎನ್ನುತ್ತಾರೆ.

Kappline

ಕ್ಯಾಪ್ ಲೈನ್ – ಕ್ಯಾಪ್ ಲೈನ್ – ಕಾಂತೀಯ ಬಲರೇಖೆಗಳ ಒಂದು‌ ಮೂಲಮಾನ. ಇದು 6000 ಮಾಕ್ಸ್ವೆಲ್ ಗಳಿಗೆ ಸಮ.

Page 82 of 84

Kannada Sethu. All rights reserved.