ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಬುತ್ತಿ – ಈ ಪದದೊಳಗ ಎಷ್ಟು ವಿಶೇಷ ಐತಿ!

 `ನೆನಪು ಬಾಳಿನ ಬುತ್ತಿ’ ಎಂದಿದೆ ಒಂದು ಕವಿಮನಸ್ಸು. `ಹೇಳಿಕೊಟ್ಟ ಬುದ್ಧಿ, ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನ ಬಂದೀತು?’ ಎನ್ನುತ್ತದೆ ಒಂದು ಕನ್ನಡ ಗಾದೆಮಾತು. ಬುತ್ತಿ ಎಂಬುದು ಕನ್ನಡದಲ್ಲಿ ಬಳಕೆಯಲ್ಲಿರುವ ಒಂದು ಪದ. ನಾಮಪದವಾದಾಗ ಅದಕ್ಕೆ “ಪ್ರಯಾಣ ಕಾಲಕ್ಕಾಗಿ ಕಟ್ಟಿ ಸಿದ್ಧಪಡಿಸಿದ ಮೊಸರನ್ನ, ಕಲಸನ್ನ ರೊಟ್ಟಿ ಮೊದಲಾದುದು’’ ಎಂಬ ಅರ್ಥಗಳಿವೆ ಅನ್ನುತ್ತದೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ನಿಘಂಟು. ಬುತ್ತಿ ಕ್ರಿಯಾಪದವಾದಾಗ ಆಟದಲ್ಲಿ ತೂರಿ ಬರುವ ಚಿಣ್ಣಿ, ಚೆಂಡು ಮೊದಲಾದುವನ್ನು ಹಿಡಿಯುವುದು ಎಂಬ ಅರ್ಥವಿದೆ. ಉತ್ತರ ಕರ್ನಾಟಕದ ಕೆಲವು […]

ಕನ್ನಡ ಅಧ್ಯಾಪಕರು ಮತ್ತು ಇಂಗ್ಲಿಷ್ ಭಾಷೆ –  ಈ ಸಂಬಂಧ ಹೇಗಿದ್ದರೆ ಚೆನ್ನ?

ಕನ್ನಡ ಅಧ್ಯಾಪಕರಿಗೆ ಎಷ್ಟರ ಮಟ್ಟಿಗೆ ಇಂಗ್ಲಿಷ್ ಬೇಕು? ಅವರಿಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತಾಡುವ ಶಕ್ತಿ ಇರಬೇಕೇ? ಅವರು ಅನುವಾದದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡರೆ ಸಾಕೇ? ಅವರ ಕನ್ನಡ ಎಷ್ಟರ ಮಟ್ಟಿಗೆ `ಬೆರಕೆಯಿಲ್ಲದ ಕನ್ನಡ’ ಆಗಿರಬೇಕು? ………… ಇಂತಹ ಪ್ರಶ್ನೆಗಳು ಆಗಾಗ ಚರ್ಚೆಗೆ ಬರುವುದುಂಟು. ಇದೇ ಸಂದರ್ಭದಲ್ಲಿ ಎರಡು ವಿಲಕ್ಷಣ ಸಂಗತಿಗಳನ್ನು ನಾವು ಗಮನಿಸಬಹುದು. ೧.    ತಾವು ಕನ್ನಡ ಅಧ್ಯಾಪಕರಾಗಿದ್ದರೂ ತಮ್ಮ ಇಂಗ್ಲಿಷ್ ಭಾಷಾ ಪ್ರೌಢಿಮೆಯನ್ನು ತಮ್ಮ ನುಡಿಬೆರಕೆ, ನುಡಿಜಿಗಿತಗಳಿಂದ ತೋರಿಸದಿದ್ದರೆ ತಮ್ಮ ಪ್ರತಿಷ್ಠೆಗೆ ಕುಂದು ಬರುತ್ತದೇನೋ […]

ಕನ್ನಡದಲ್ಲಿ ವಿಜ್ಞಾನ ಬರವಣಿಗೆಗೆ ಸರಳತೆಯ ನವದೀಕ್ಷೆ

ಕನ್ನಡ ಭಾಷೆಯು ಬೆಳೆಯಬೇಕೆಂದರೆ ಅದರಲ್ಲಿ ಹೊಸ ಹೊಸ ಸಂಶೋಧನಾ ಆಯಾಮಗಳು ಮತ್ತು ಸಮಕಾಲೀನ ವಿಷಯಗಳು ಚರ್ಚೆಯಾಗಬೇಕು, ಹಾಗೂ ಹೊಸ ಆವಿಷ್ಕಾರಗಳಿಗೆ ತಕ್ಕ ಹೊಸ ಕನ್ನಡ ಪದಗಳು ಸೃಷ್ಟಿಯಾಗಬೇಕು ಎಂಬುದು, ಎಲ್ಲ ಕನ್ನಡ ಪ್ರಿಯರೂ ಒಪ್ಪುವ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನದ ವಿಷಯ ಬಂದಾಗ, ಜನಮಾನಸದಲ್ಲಿನ ಎರಡು ಅನಿಸಿಕೆಗಳು ಗಮನೀಯವಾಗಿದೆ. `ಗಂಭೀರ ವಿಜ್ಞಾನವನ್ನು ಕನ್ನಡಕ್ಕೆ ತರುವುದು ಅಸಾಧ್ಯವೆನ್ನುವಷ್ಟು ಕಷ್ಟಕರವಾದದ್ದು ಎಂಬುದು ಇವುಗಳಲ್ಲಿ ಒಂದಾದರೆ, `ಈಗಾಗಲೇ ವಿಜ್ಞಾನವನ್ನು ಸೂಚಿಸಲು ಬಳಸುತ್ತಿರುವ ಕನ್ನಡ ಪದಗಳು ಸಂಸ್ಕೃತಮಯವಾಗಿದ್ದು ಬರೆಯಲು, ಉಚ್ಚರಿಸಲು ತುಂಬ ಕಷ್ಟ […]

“ಸ್ವಲ್ಪ ರುಚಿ ಹಾಕ್ತೀರಾ ಅಮ್ಮ?’’

ದೈನಂದಿನ ಮಾತುಕತೆಗಳು ಕೆಲವು ಸಲ ನಮಗೆ ತಿಳಿದಿರದ ಹೊಸ ಪದಗಳ ಅಥವಾ ಕನ್ನಡ ಭಾಷೆಯ ಕೆಲವು ಹೊಸ ಆಯಾಮಗಳ ಪರಿಚಯ ಮಾಡಿಸುತ್ತವೆ. ಮೊನ್ನೆ ನಡೆದ ಒಂದು ಪ್ರಸಂಗವಿದು. ನನಗೆ ಮನೆಯಲ್ಲಿ ಕೆಲಸದ ಒತ್ತಡ ಹೆಚ್ಚಿದ್ದಾಗ ಅಥವಾ ಪುಸ್ತಕಗಳನ್ನು ಜೋಡಿಸುವ ಅಗತ್ಯ ಇದ್ದಾಗ, ನನಗೆ ಈ ನಡುವೆ ಪರಿಚಿತರಾದ ಒಬ್ಬ ಮಹಿಳೆಯನ್ನು ಸಹಾಯಕ್ಕೆ ಕರೆಯುತ್ತೇನೆ ನಾನು. ಸುಮಾರು ಮೂವತ್ತೈದು-ಮೂವತ್ತಾರು ವಯಸ್ಸಿನ ನಗೆಮೊಗದ ಹೆಣ್ಣುಮಗಳು ಆಕೆ. ಚಾಮರಾಜನಗರದಲ್ಲಿ ಹುಟ್ಟಿ ಬೆಳೆದು ಈಗ ಬೆಂಗಳೂರಿನಲ್ಲಿ ತನ್ನ ಗಂಡ ಹಾಗೂ ಶಾಲೆಗೆ ಹೋಗುವ […]

ದಿನಕ್ಕೊಂದು ಹೊಸ ಪದ, ಒಂದು ಸೂಕ್ತಿ – ಕನ್ನಡ ಕಲಿಕೆಯ ಬುತ್ತಿ

ಒಂದು ಭಾಷೆ ಚೆನ್ನಾಗಿ ಬರಬೇಕೆಂದರೆ ನಾವು ಅದರ ಪದಗಳನ್ನು, ನುಡಿಗಟ್ಟು, ಸೂಕ್ತಿ, ಗಾದೆಮಾತುಗಳನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಾ ಹೋಗಬೇಕು. ಆಗ ಕಾಲಕ್ರಮೇಣ ಆ ಭಾಷೆಗೆ ಸಂಬಂಧಿಸಿದಂತೆ ನಮ್ಮ ಪದಸಂಪತ್ತು ಹೆಚ್ಚುತ್ತಾ ಹೋಗಬೇಕು. ಕಲಿಯುವುದೇ ಜೀವನದ ಮುಖ್ಯ ಉದ್ದೇಶವಾಗಿರುವ ವಿದ್ಯಾರ್ಥಿಗಳ ಮಟ್ಟಿಗೆ ಈ ಮಾತು ಹೆಚ್ಚು ನಿಜ. ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಈ ವಿಷಯದಲ್ಲಿ ನನ್ನ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸಿದಾಗ ಒಂದು ವಿಷಯ ಹೊಳೆಯಿತು. ದಿನಾ ತರಗತಿಯಲ್ಲಿ ಒಂದು ಹೊಸ ಪದ, ಒಂದು […]

ಸುಲಭ ಪಾಠದ ಕಷ್ಟ!! – ಅಯ್ಯೋ, ಹೀಗಿರಬಹುದು ನೋಡಿ ಕನ್ನಡ ಅಧ್ಯಾಪಕರ ಫಜೀತಿ!

ಕಬ್ಬಿಣದ ಕಡಲೆಯಂತಹ ಹಳೆಗನ್ನಡ ಪಾಠಗಳು ಅಥವಾ ಅತ್ಯಂತ ಅಮೂರ್ತ ಹಾಗೂ ಸಂಕೀರ್ಣವಾಗಿರುವ ವೈಚಾರಿಕ ಪಾಠಗಳು ಕನ್ನಡ ಅಧ್ಯಾಪಕರ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ ನಿಜ. ಆದರೆ ತೀರಾ ಸರಳ ಭಾಷೆಯಲ್ಲಿರುವ ಲಲಿತ ಪ್ರಬಂಧಗಳು ಅಥವಾ ಪ್ರವಾಸ ಕಥನಗಳು ಪಠ್ಯಭಾಗವಾದಾಗ ಅಧ್ಯಾಪಕರಿಗೆ ಇನ್ನೊಂದು ರೀತಿಯ ಸವಾಲು ಎದುರಾಗುತ್ತೆ ನೋಡಿ. ಇದನ್ನು ವಿಚಿತ್ರ ಅನ್ನದೆ ವಿಧಿಯಿಲ್ಲ. ಅದರಲ್ಲೂ ಆ ಪಾಠದ ವಿಷಯವು ಸರಳವಾದ ಆದರೆ  ರಸಹೀನವೆನ್ನಿಸುವ ಮಾಹಿತಿಯಿಂದ ಕೂಡಿದ್ದಾಗಲಂತೂ ಇದ್ದಿದ್ದೂ ಕಷ್ಟ. ಇದು ಹೇಗೆ ಎನ್ನುವಿರಾ? ವಿದ್ಯಾರ್ಥಿಗಳಿಗೆ ತಾವೇ ಓದಿ ಅರ್ಥ ಮಾಡಿಕೊಳ್ಳುವುದು […]

ಕನ್ನಡ ತರಗತಿಗೆ ತಡವಾಗಿ ಬಂದಿದ್ದಕ್ಕೆ ಬರಹಶಿಕ್ಷೆ!

ನನ್ನಂತಹ ಎಲ್ಲ ಅಧ್ಯಾಪಕರೂ ಅನುಭವಿಸುವ ಒಂದು ಕಿರಿಕಿರಿ ಸಂಗತಿ ಅಂದರೆ, ಬೆಳಿಗ್ಗೆ ಕಾಲೇಜಿನ ಮೊದಲ ತರಗತಿಗೆ ತಡವಾಗಿ ಬರುವ ವಿದ್ಯಾರ್ಥಿಗಳದ್ದು. ತರಗತಿ ಶುರುವಾಗಿ ಅರ್ಧ ಗಂಟೆಯಾದರೂ ಮಳೆಹನಿ ತೊಟ್ಟಿಕ್ಕಿದಂತೆ ಒಬ್ಬೊಬ್ಬರೇ ವಿದ್ಯಾರ್ಥಿಗಳು ಬರುತ್ತಲೇ ಇರುತ್ತಾರೆ. ಅವರು ಬಾಗಿಲು ತಟ್ಟುವುದು, ಒಳಗೆ ಬರಲು ಅಧ್ಯಾಪಕರ ಅನುಮತಿ ಕೋರುವುದು, ಧಡಧಡ ಎನ್ನುತ್ತಾ ಗಡಿಬಿಡಿ ಮಾಡಿಕೊಂಡು ಒಳಗೆ ಧಾವಿಸುವುದು, ಆ ಸಮಯದಲ್ಲಿ, ಮೊದಲು ಒಳಗೆ ಕುಳಿತಿದ್ದ ವಿದ್ಯಾರ್ಥಿಗಳು ಪಾಠ ಕೇಳುವುದನ್ನು ಅಲ್ಲಿಗೇ ಬಿಟ್ಟು ತಡವಾಗಿ ಬಂದವರನ್ನೇ ಹೊಸ ದೃಶ್ಯವೇನೋ  ಎಂಬಂತೆ ನೋಡುತ್ತಾ […]

“ಅವರು ನನ್ನನ್ನು ಮನುಷ್ಯರನ್ನಾಗಿ ಮಾಡಿದವರಮ್ಮಾ!”

ಆ ಹಿರಿಯರನ್ನು ನಾನು ಮೊದಲು ನೋಡಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ನನ್ನ ಅಧ್ಯಯನದ ಸಲುವಾಗಿ, ಆಗ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿಲ್ಲದ, ಅನಕೃರ ಕೃತಿಗಳು ನನಗೆ ತುಂಬ ಜರೂರಾಗಿ ಬೇಕಿತ್ತು. ಈಗಿನ ತರಹ ಅಂತರ್ಜಾಲ ಸಂಪರ್ಕ, ವಿದ್ಯುನ್ಮಾನ ಪ್ರತಿ(ಸಾಫ್ಟ್ ಕಾಪಿ)ಗಳ ಕಾಲವಲ್ಲ ಅದು. ಹೀಗೇ ವಿಚಾರಿಸುತ್ತಿದ್ದಾಗ ಬೆಂಗಳೂರಿನ ವಿದ್ಯಾಪೀಠ ವೃತ್ತದ ಬಳಿ ಇರುವ ಒಬ್ಬ ವ್ಯಕ್ತಿಯ ಬಳಿ ಅನಕೃ ಅವರ ಸಮಗ್ರ ಕೃತಿಗಳ ಸಂಗ್ರಹ ಇದೆ ಎಂಬ ಮಾಹಿತಿ ಹಾಗೂ ಅವರ ಸ್ಥಿರದೂರವಾಣಿ(ಲ್ಯಾಂಡ್‌ಲೈನ್)ಯ ಸಂಖ್ಯೆ ನನಗೆ ಸಿಕ್ಕಿತು. […]

`ಫೋರ್ ಲೈಮ್ ಕೊಡಿ ಅಂಕಲ್’.

ತಮ್ಮ ಮಕ್ಕಳನ್ನು `ಇಂಗ್ಲಿಷ್ ಮೀಡಿಯಂ’ ಶಾಲೆಗೆ ಸೇರಿಸುವುದು, ಆ ಮಕ್ಕಳು ಜನರ ಮುಂದೆ ಇಂಗ್ಲಿಷ್ ಮಾತಾಡುವಾಗ ಹಿರಿಹಿರಿ ಹಿಗ್ಗುವುದು, ಅಂಗಡಿಗಳಲ್ಲಿ, ಸಮಾರಂಭಗಳಲ್ಲಿ ತಾವು ಕೂಡ ತಮ್ಮ ಮಕ್ಕಳೊಂದಿಗೆ ಆಂಗ್ಲಭಾಷೆಯಲ್ಲಿ ಮಾತಾಡಿ ತಾವು ಎಷ್ಟು `ಫಾರ್‌ವರ್ಡ್, ಶ್ರೀಮಂತ ಜನಗಳು, ತಮ್ಮ ಮಕ್ಕಳನ್ನು ಹೇಗೆ ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಓದಿಸುತ್ತಿದ್ದೇವೆ’ ಎಂಬುದನ್ನು ತೋರಿಸಿಕೊಳ್ಳುವುದು ಕನ್ನಡ ನಾಡಿನಲ್ಲಿನ ಸಾಕಷ್ಟು ತಂದೆತಾಯಿಯರ ಅಭ್ಯಾಸವಾಗಿದೆ. ಇದರ ಗಂಭೀರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಆಯಾಮಗಳನ್ನು ನಾನಿಲ್ಲಿ ಚರ್ಚಿಸಲು ಹೋಗುತ್ತಿಲ್ಲ. ಇದು ನಮ್ಮ ದೈನಂದಿನ ಜೀವನದ […]

`ಲೊಡ್ಡೆ ಡಾಕ್ಟರ್ ಕೈಗುಣಾನೇ ಕೈಗುಣ ಅಮ್ಮ!’

`ಮೊಮ್ಮಗಂಗೆ ಹುಷಾರಿರಲಿಲ್ಲ ಕಣ್ರಮ್ಮ, ಡಾಕ್ಟರ್ ಹತ್ರ ರ‍್ಕೊಂಡು ಹೋಗಿದ್ದೆ’’ ಅಂತ ನಮ್ಮ ಮನೆಯಲ್ಲಿ ಅನೇಕ ವರ್ಷದಿಂದ ಮನೆವಾಳ್ತೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಯಲ್ಲಮ್ಮ ಹೇಳಿದಾಗ `ಈಗ ಹೇಗಿದಾನೆ ಮಗು?’ ಎಂದು ಕೇಳಿದೆ. `ನಮ್ಮ ಲೊಡ್ಡೆ ಡಾಕ್ಟರ್ ಕೈಗುಣಾನೇ ಕೈಗುಣ ಅಮ್ಮ. ಅವ್ರು ಒಂದು ಸಲ ನೋಡಿದ್ರೆ ಸಾಕು ರೋಗ ವಾಸಿಯಾಯ್ತು ಅಂತಾನೇ ಅರ್ಥ’’ ಅಂದರು ಯಲ್ಲಮ್ಮ.  `ಲೊಡ್ಡೆ ಡಾಕ್ಟರ್’ ಎಂಬ ಪದದಿಂದ ನನ್ನಲ್ಲಿ ಕುತೂಹಲವುಂಟಾಗಿ `ಯಾಕಮ್ಮ ಅವರನ್ನ ಹಾಗೆ ಕರೀತಿರಿ? ಆ ಡಾಕ್ಟರ್ ಹೆಸರೇನು?’ ಎಂದು ಕೇಳಿದೆ. […]

Page 14 of 17

Kannada Sethu. All rights reserved.