ಕನ್ನಡ ಪ್ರಸಂಗ

ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.

ಏ….ಬೇಗ್ನೆ ಒಂದ್ ತಲ್ಮೂಟೆ ತತ್ತಾ…

 ಭಾಷಾಜೀವನವೇ ಹಾಗೆ ನೋಡಿ.  ಸಾಮಾನ್ಯಸಾಧಾರಣ ಎಂಬಂತಹ ದಿನಗಳಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ಹೊಸಪದವೊಂದು ಕಿವಿಗೆ ಬಿದ್ದು ಅಹ! ಅನ್ನಿಸುವಂತಾಗುತ್ತೆ‌. ಮೂರು ದಶಕಗಳ ಹಿಂದೆ ನನ್ನ ಕಿವಿಗೆ ಬಿದ್ದ ಹೊಸಪದವೊಂದು ಈಗಲೂ ನೆನೆದಾಗ ಅದು ತರುವ ಸಂತೋಷದಿಂದಾಗಿ, ಈ ಕನ್ನಡ ಪ್ರಸಂಗವನ್ನು ಬರೆಯುವಂತೆ ಮಾಡಿದೆ.  ನಾನು ಉದ್ಯೋಗಿನಿಯಾಗಿದ್ದು ಮನೆಯಲ್ಲಿ ಮಗು ನೋಡಿಕೊಳ್ಳಬಲ್ಲ ಕುಟುಂಬ ಸದಸ್ಯರು ಯಾರೂ ಇರದಿದ್ದ ಕಾರಣ, ನನ್ನ ಮೊದಲ ಮಗು ಹುಟ್ಟಿದಾಗ ದಾದಿಯೊಬ್ಬರ ಅಗತ್ಯ ಬಂತು. ನಮ್ಮ ಪರಿಚಿತರೊಬ್ಬರು ತುಮಕೂರು ಕಡೆಯಿಂದ, ತಮಗೆ ಗೊತ್ತಿದ್ದ ಒಬ್ಬ ಮಹಿಳೆಯನ್ನು […]

ಅರೆರೆ! ಚುಕ್ಕಿಯೊಂದು ತಪ್ಪು ಸ್ಥಳದಲ್ಲಿ ಬಂದಾಗ ಇಷ್ಟು ಗೊಂದಲ ಆಗಬಹುದಾ!!

ನಾವು ಕನ್ನಡ ಅಧ್ಯಾಪಕರು ಚುಕ್ಕಿ(ಪೂರ್ಣವಿರಾಮ), ಪುಟ್ಟ ಕೊಕ್ಕೆ(ಅಲ್ಪವಿರಾಮ)ಗಳಂತಹ ನೋಡಲು ಅತಿ ಚಿಕ್ಕದಾಗಿರುವ ಸಂಗತಿಗಳ ಬಗ್ಗೆ, ಅಂದರೆ ಲೇಖನಚಿಹ್ನೆಗಳ ಬಗ್ಗೆ  ಬಹಳ ತಲೆ ಕೆಡಿಸ್ಕೋತೀವಿ. ಇವುಗಳನ್ನು ಸರಿಯಾಗಿ ಬಳಸಬೇಕಾದ ರೀತಿಯನ್ನು ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ಹೇಳ್ತಾನೇ ಇರ್ತೀವಿ. ವಿದ್ಯಾರ್ಥಿಗಳಿರಲಿ ನಾವು ಅಧ್ಯಾಪಕರೇ ಈ ಪುಟಾಣಿ ಗುರುತುಗಳ ಬಗ್ಗೆ ಎಷ್ಟು ಜಾಗ್ರತೆ ವಹಿಸಬೇಕಾಗುತ್ತೆ ಎಂಬುದನ್ನು ತೋರಿಸಿಕೊಡುವ ಪ್ರಸಂಗವೊಂದು ಒಮ್ಮೆ ನಾನು ಕೆಲಸ ಮಾಡಿದ್ದ ಕಾಲೇಜೊಂದರಲ್ಲಿ ನಡೆದಿತ್ತು. ಅದನ್ನು ಹೇಳಲೆಂದೇ ಈ ಪ್ರಸಂಗವನ್ನು ಬರೀತಿದೀನಿ.  ಬಿಎ, ಬಿಎಸ್ಸಿ, ಬಿಕಾಂ, ಬಿಎ, […]

ಕೈ ಕೊಡುವುದೋ, ಕೈಕುಲುಕುವುದೋ…

ಈಚೆಗೆ ಸುಮಾರು ಅರವತ್ತು ವರ್ಷ ಸಮೀಪಿಸುತ್ತಿದ್ದ ಇಬ್ಬರು ಪರಿಚಿತರ ಒಂದು ಸಂಭಾಷಣೆಗೆ ನಾನು ಸಾಕ್ಷಿಯಾದೆ.‌ ಒಬ್ಬರು ತಮ್ಮ ಎದುರಿಗಿದ್ದವರಿಗ “ಏನ್ರೀ, ಇವತ್ತು ನಿಮ್ಮ ಹುಟ್ಟಿದ ಹಬ್ಬಾನಾ? ನಾವು ಹಳೇ ಕಾಲದವ್ರು ಹುಟ್ಟಿದ್ದು ಒಂದು ದಿನಾಂಕವಾದ್ರೆ, ಶಾಲೆಯಲ್ಲಿ ಬರೆಸಿದ ಜನ್ಮ ದಿನಾಂಕಾನೇ ಬೇರೆ  ಆಗಿರುತ್ತಲ್ಲ, ನಿಮ್ಗೆ ಕೈ ಕೊಡಕ್ಕೆ ಮುಂಚೆ ಕೇಳಿ ಕೈಕೊಡೋಣ ಅಂತ ವಿಚಾರಿಸ್ದೆ” ಅಂದರು. ಅದಕ್ಕೆ, ಎದುರಿಗಿದ್ದ ಅವರ ಪರಿಚಿತರು “ನಿಮ್ಮ ಊಹೆ ಸರಿ ಸರ್.  ಕಛೇರಿ ದಾಖಲೆಯ ಜನ್ಮದಿನ ಇವತ್ತು ಅಷ್ಟೇ, ನನ್ನ ಜನ್ಮ […]

ಚಾಚಾನೋ… ಸಾಚಾನೋ..

ಈ ಸಲದ ಕನ್ನಡ ಪ್ರಸಂಗದಲ್ಲಿ ಆಗೀಗ ನನ್ನ ಕಿವಿಗೆ ಬಿದ್ದು ತುಂಬ ಗೊಂದಲ ಉಂಟು ಮಾಡ್ತಿದ್ದ ಒಂದು ಪದದ ಬಗ್ಗೆ ಬರೀತಿದೀನಿ. ಅದ್ಯಾವುದೆಂದರೆ ‘ಚಾಚಾ’ ಅನ್ನುವ ಪದ. ‘ಅವ್ರೇನು ದೊಡ್ಡ ಚಾಚಾ ಅಲ್ಲ’, ‘ನಂಗೊತ್ತಿಲ್ವಾ! ತೋರಿಸಿಕೊಳ್ಳಕ್ಕೆ ನಾನೇ ಒಬ್ಬ ಚಾಚಾ ಅಂತ ಆಡ್ತಾನೆ’, ‘ಮಾಡೋದೆಲ್ಲ ಮಾಡಿ ಈಗ ದೊಡ್ಡ ಚಾಚಾ ತರಹ ಆಡೋದು’…… ಹೀಗೆ ಅನೇಕ ಸಲ‌ ದೈನಂದಿನ ಮಾತಿನಲ್ಲಿ ಜನರು ಈ ಪದಗಳ ಬಳಸುವುದನ್ನು  ಕೇಳಿದ್ದೆ ನಾನು.  ಚಾಚಾ ಅಂದರೆ ಹಿಂದಿ ಭಾಷೆಯಲ್ಲಿ ಚಿಕ್ಕಪ್ಪ ಎಂದು […]

ಬೇಕರಿ ತಿಂಡಿಗಳಿಗೆ ನಾವು ಯಾಕೆ ಕನ್ನಡ ಪದಗಳನ್ನು ಹುಡುಕಿಕೊಂಡಿಲ್ಲ?

ಬೇಕರಿ ಅನ್ನುವುದು ಪಾಶ್ಚಾತ್ಯ ಪ್ರಪಂಚದಲ್ಲಿ ಹುಟ್ಟಿದ ತಿಂಡಿ ತಯಾರಿಕೆಯ ವ್ಯವಸ್ಥೆ. ಪುರಾತನ ಗ್ರೀಸ್ ನಲ್ಲಿ  ಕ್ರಿ.ಪೂ.168ರಲ್ಲೇ ಬೇಕರಿ ಅನ್ನುವುದನ್ನು ಸ್ಥಾಪಿಸಲಾಗಿತ್ತಂತೆ. ನಮಗೆ ಅಂದರೆ ಭಾರತ ಭೂಖಂಡದವರಿಗೆ ಇದು ನಮ್ಮನ್ನು ಆಳಿದ ಯುರೋಪಿನವರ ಪ್ರಭಾವದಿಂದಲೇ ಪರಿಚಯವಾದದ್ದು. ಭಾರತದ ಮೊಟ್ಟಮೊದಲ ಬೇಕರಿಯನ್ನು 1880ರಲ್ಲಿ ಕೇರಳದ ತಲಸ್ಸೇರಿಯಲ್ಲಿ ರೋಯಲ್ ಬಿಸ್ಕಿಟ್ ಫ್ಯಾಕ್ಟರಿ ಎಂಬ ಹೆಸರಿಟ್ಟು ಮಂಬಳ್ಳಿ ಬಾಪು ಎಂಬವರು ಸ್ಥಾಪಿಸಿದರಂತೆ. ಇವರು ಬೇಕರಿ ತಿನಿಸು ತಯಾರಿಕೆಯ ಕಲೆಯನ್ನು ಬರ್ಮಾದಲ್ಲಿ ಕಲಿತರಂತೆ.‌  ಇನ್ನು, ಕರ್ನಾಟಕದ ಮೊಟ್ಟಮೊದಲ ‌ಬೇಕರಿಯನ್ನು ಸಹ 1880 ರಲ್ಲಿ‌ ಕೆಜಿಎಫ್ ನಲ್ಲಿ […]

ಕ್ಯಾಲೆಂಡರ್ ಗೆ ಕನ್ನಡದಲ್ಲಿ ಯಾವ ಪದ ಬಳಸಬಹುದು…?

ನಾವು ವ್ಯವಹಾರ ಪ್ರಪಂಚದಲ್ಲಿ ಬಳಸುವ ಕ್ರಿಶ್ಚಿಯನ್ ಕ್ಯಾಲೆಂಡರ್ ನಲ್ಲಿ ಜನವರಿ ಮೊದಲು ತಿಂಗಳು ತಾನೆ. ಈ ತಿಂಗಳಲ್ಲಿ ಎಲ್ಲರೂ ಹೊಸ ಕ್ಯಾಲೆಂಡರ್ ಕೊಳ್ಳುವುದರಲ್ಲಿ ಉದ್ಯುಕ್ತರಾಗ್ತಾರೆ. ಸರ್ಕಾರ, ವಿವಿಧ ಸಂಸ್ಥೆಗಳು, ವ್ಯಾಪಾರಕೇಂದ್ರಗಳು ತಮ್ಮ ತಮ್ಮ ಕ್ಯಾಲೆಂಡರ್ ಗಳನ್ನು ಮುದ್ರಿಸುತ್ತಾರೆ, ನಾವು ನಮಗೆ ಹೊಂದುವಂಥದನ್ನು ಕೊಂಡು ವರ್ಷವಿಡೀ ಬಳಸುತ್ತೇವೆ.  ಸರಿ, ಅನೇಕ ಕನ್ನಡ ಅಧ್ಯಾಪಕರಂತೆ ನನ್ನನ್ನೂ ಕಾಡಿದ ಒಂದು ಪ್ರಶ್ನೆ ಅಂದರೆ ‘ಕ್ಯಾಲೆಂಡರ್ ಗೆ ಕನ್ನಡ ಪದ ಏನು? ‘ ಎಂಬುದು. ನಿಘಂಟಿನಲ್ಲಿ ನೋಡಿದರೆ ಪಂಚಾಂಗ ಎಂಬ ಪದ ಸಿಕ್ಕುತ್ತೆ. […]

ವಲ್ಲಿಬಟ್ಟೆ, ಬೈರಾಸ, ಉತ್ತರೀಯ….ಅರೆರೆರೆ….!

ಈ ನಡುವೆ ನಮ್ಮ ಮನೆಗೆ ಚಾಮರಾಜನಗರದ ಕಡೆಯ ಪರಿಚಿತರೊಬ್ಬರು ಬಂದಿದ್ದರು. ರಾತ್ರಿ ಮಲಗಿಕೊಂಡಿದ್ದು ಬೆಳಿಗ್ಗೆ ಅವರು ಎದ್ದಾಗ, ಸ್ನಾನ ಮಾಡಲು ಹೊರಟವರು ‘ಒಂದು ವಲ್ಲಿಬಟ್ಟೆ ಇದ್ರೆ ಕೊಡ್ತೀರಾ?’ ಎಂದು ಕೇಳಿದರು. ನನಗೆ ತಕ್ಷಣ ಅರ್ಥ ಆಗಲಿಲ್ಲ. ‘ಹಾಗಂದ್ರೆ?’ ಎಂದು ಕೇಳಿದೆ. “ಅದೇ ಸ್ನಾನ ಮಾಡಿ ಮೈ ಒರೆಸ್ಕೋತೀವಲ್ಲ, ಅದು” ಅಂದರು. ಅಲ್ಲೇ ಇದ್ದು ಇದನ್ನು ಕೇಳಿಸಿಕೊಂಡ ನಮ್ಮನೆಯವರು “ಟವಲ್ ಕೇಳ್ತಿದಾರೆ ಕಣೆ, ಕೊಡು” ಅಂದರು. ಅರೆ! ಟವೆಲ್ ಗೆ ‘ವಲ್ಲಿಬಟ್ಟೆ’ ಅನ್ನುತ್ತಾರಾ! ನನಗೆ ಅಚ್ಚರಿ ಆಯ್ತು.  ಮಂಗಳೂರಿನ […]

ಓಹ್ ಕೈಚೌಕವೇ….ಎಲ್ಲಿ ಹೋದೆ ನೀನು!!

ನಲವತ್ತು ಐವತ್ತು ವರ್ಷಗಳ ಹಿಂದೆ ಅಂದರೆ ನಮ್ಮ ಬಾಲ್ಯಕಾಲದಲ್ಲಿ ಕರವಸ್ತ್ರ ಎಂಬ ಪದಕ್ಕೆ ( hand kerchief – ಇದಕ್ಕೆ ಮೂಲ‌ – ಫ್ರೆಂಚ್ ಭಾಷೆಯ ಪದ‌ – couvercheif – ತಲೆಯನ್ನು‌ ಮುಚ್ಚಿಕೊಳ್ಳಲು ಬಳಸುತ್ತಿದ್ದ ಚೌಕಾಕಾರದ ಅಥವಾ ತ್ರಿಕೋನಾಕಾರದ ಬಟ್ಟೆ)  ಸಂವಾದಿಯಾಗಿ ಮನೆಗಳಲ್ಲಿ ಬಳಸುತ್ತಿದ್ದ ಪದ ಅಂದರೆ ಕೈಚೌಕ.‌ ಆಗಿನ‌ ಕಾಲದಲ್ಲಿ ಮನೆಯಿಂದ ಹೊರಗೆ ಹೊರಟಾಗ, ಅಥವಾ ಶೀತ-ಜ್ವರದ ಬಾಧೆ ಇದ್ದಾಗ ಅಮ್ಮ ತನ್ನ ಮಕ್ಕಳಿಗೆ ಹೇಳಿಯೇ ಹೇಳುತ್ತಿದ್ದ ವಾಕ್ಯ ಅಂದ್ರೆ ‘ಕೈಚೌಕ ತಗೋ, ಮರೀಬೇಡ’. […]

‘ಕಲ್ಮಿನೇಟ್’ ಎಂಬ ಹೆಸರಿನ ತರಕಾರಿ ಅಂಗಡಿ!

ನೀವು ಎಂದಾದರೂ ಬಿಡುವಾಗಿದ್ದಾಗ, ಬೆಳಿಗ್ಗೆ 7-9 ಗಂಟೆ ಸಮಯದಲ್ಲಿ ಬೆಂಗಳೂರಿನ ನಮ್ಮ ವಿಜಯನಗರಕ್ಕೆ ಬನ್ನಿ. ಆಗ ವಿಜಯನಗರ ಕ್ಲಬ್ ಇರುವ ಮೊದಲನೆಯ ಮುಖ್ಯರಸ್ತೆಗೆ,  ಒಂಬತ್ತನೇ ಅಡ್ಡರಸ್ತೆಯೆಂಬ,  ಹಂಪಿನಗರದ ಈಜುಕೊಳ ರಸ್ತೆಯು ಸೇರುವ ವೃತ್ತಕ್ಕೆ ಬಂದಿರೆಂದರೆ, ಅಲ್ಲೇ ಪಕ್ಕದಲ್ಲಿ, ನಿಮಗೆ ‘ಕಲ್ಮಿನೇಟ್’ ಎಂಬ ‘ವಿಲಕ್ಷಣ’ ಹೆಸರುಳ್ಳ ತರಕಾರಿ ಅಂಗಡಿ ಕಾಣಿಸುತ್ತದೆ. ಅಂಗಡಿ ಮಾತ್ರವಲ್ಲ,  ಅದರ ತುಂಬ ಸಿಹಿತಿಂಡಿಗೆ ಇರುವೆ ಮುತ್ತಿದಂತೆ ತುಂಬಿರುವ ಜನರೂ ಕಾಣಿಸುತ್ತಾರೆ.  ಬಹಳ ತಾಜಾ ತರಕಾರಿಯನ್ನು ಕಡಿಮೆ ಬೆಲೆಗೆ ಮಾರುವುದರಿಂದ ಇದು ನಮ್ಮ ಬಡಾವಣೆಯಲ್ಲಿ ತುಂಬ […]

“ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ!”. 

ಕರ್ನಾಟಕದ ಸರಳ, ಪೌಷ್ಟಿಕ ಹಾಗೂ ಪ್ರಖ್ಯಾತ ಆಹಾರಗಳಲ್ಲಿ ರಾಗಿಮುದ್ದೆ ಒಂದು. ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಇದು  ಪ್ರಧಾನ‌ ದೈನಿಕ  ಆಹಾರವಾಗಿದೆ (ಸ್ಟೇಪಲ್ ಫುಡ್ ಎಂಬ ಅರ್ಥದಲ್ಲಿ). ಇದಕ್ಕೆ ‘ಹಿಟ್ಟು’ ಎಂಬ ಇನ್ನೊಂದು ಹೆಸರಿದೆ! ಮತ್ತೆ, ಇನ್ನೂ ಬೇಯಿಸದ ರಾಗಿಹಿಟ್ಟಿಗೆ ರಾಗಿಹಸಿಟ್ಟು (ರಾಗಿ ಹಸಿಹಿಟ್ಟು) ಅನ್ನುತ್ತಾರೆ ನೋಡಿ!  ತಾಯಿ ಮಂಗಳೂರಿನವರಾಗಿದ್ದು ತಂದೆ ತುಮಕೂರಿನವರಾಗಿದ್ದ ನಮ್ಮ ಮನೆಯಲ್ಲಿ ರಾಗಿಮುದ್ದೆ ದೈನಿಕ ಆಹಾರವಾಗಿರಲಿಲ್ಲ, ಆದರೆ ಅಪರೂಪಕ್ಕೆ ಮಾಡುವ ಒಂದು ವಿಶೇಷ ಆಹಾರವಾಗಿತ್ತು. ‘ರಾಗಿ‌ಮುದ್ದೆ ಮಾಡಿದ್ರೆ ಅದಕ್ಕೆ ಸರಿಯಾದ  ಹುಳಿ(ಸಾಂಬಾರ್) ಇರ್ಬೇಕು, […]

Page 5 of 17

Kannada Sethu. All rights reserved.