‘ಕನ್ನಡದ ಕಾದಂಬರಿ ಸಾರ್ವಭೌಮ’ ಎಂಬ ಹೆಗ್ಗಳಿಕೆಯನ್ನು ಗಳಿಸಿದ ಶ್ರೀಯುತ ಅರಕಲಗೂಡು ನರಸಿಂಗರಾವ್ ಕೃಷ್ಣ ರಾವ್ (ಅನಕೃ : 1908 – 1971 ) ಅವರು ಅಪ್ಪಟ ಕನ್ನಡಾಭಿಮಾನಿ. ಕರ್ನಾಟಕ ಏಕೀಕರಣಕ್ಕಾಗಿ ದುಡಿದದ್ದು ಮಾತ್ರವಲ್ಲ, ವಿವಿಧ ಕಾರಣಗಳಿಂದ ಕನ್ನಡಕ್ಕೆ ನಮ್ಮ ನಾಡಿನ ಕೆಲವು ಪ್ರದೇಶಗಳಲ್ಲಿ ಮನ್ನಣೆ ಇರದಿದ್ದ ಸಂದರ್ಭದಲ್ಲಿ, ತಮ್ಮಂತೆಯೇ ಕನ್ನಡಪರರಾದ ಅಭಿಮಾನಿಗಳನ್ನು ಜೊತೆಗೆ ಕಟ್ಟಿಕೊಂಡು, ಕನ್ನಡ ನಾಡಿನ ಉದ್ದಗಲಕ್ಕೂ ಓಡಾಡಿ, ಕನ್ನಡದ ಜಯಘಂಟೆಯನ್ನು ಬಾರಿಸಿದವರು ಈ ಮಹನೀಯರು. ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿ ಅವರು ಕನ್ನಡಿಗರಿಗೆ ನಾಲ್ಕು […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!