ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ, ಯಾವುದಾದರೂ ವಿಭಾಗದ ಹಿರಿಯ ವಿದ್ಯಾರ್ಥಿಗಳಿಗೆ ಅದೇ ವಿಭಾಗದ ಕಿರಿಯ ವಿದ್ಯಾರ್ಥಿಗಳು ಬೀಳ್ಕೊಡುಗೆ ಕೊಡುವುದು ವಾಡಿಕೆ. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಆ ವಿಭಾಗದ ಹಿರಿಯ ವಿದ್ಯಾರ್ಥಿಗಳು ಸ್ವಾಗತ ಸಮಾರಂಭ ಏರ್ಪಡಿಸುವುದೂ ಸಾಮಾನ್ಯ ಅನ್ನಿ. ನಮ್ಮ ಕಾಲೇಜಿನ ಸಭಾಂಗಣವು ಕನ್ನಡ ವಿಭಾಗದ ಪಕ್ಕವೇ ಇದೆ. ಹೀಗಾಗಿ ನಮಗೆ ಈ ಸ್ವಾಗತ ಸಮಾರಂಭ, ಬೀಳ್ಕೊಡುಗೆಗಳಾಗುವಾಗ ಚಂದಚಂದದ ಬಟ್ಟೆ ತೊಟ್ಟ ವಿದ್ಯಾರ್ಥಿನಿಯರ ಸರಬರ ಓಡಾಟ, ಅವರ ಖುಷಿಖುಷಿ ಹಾಡು, ನೃತ್ಯ, ಅಧ್ಯಾಪಕರ ಹಾರೈಕೆಯ ನುಡಿ…ಇತ್ಯಾದಿಗಳಿಗೆ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.