ನಾನು ವಾಸಿಸುವ ಬೆಂಗಳೂರು ನಗರದ ಬಡಾವಣೆಯಾದ ಹಂಪಿನಗರದಲ್ಲಿಮೊನ್ನೆ, ಮನೆಸಾಮಾನು ತರಲೆಂದು ಅಂಗಡಿಗೆ ಹೋಗಿದ್ದಾಗ ಒಂದು ಪ್ರಕಟಣಾ ಫಲಕ ನನ್ನ ಕಣ್ಣಿಗೆ ಬಿತ್ತು. “ಇಲ್ಲಿ ಕಬ್ಬಿನ ಜ್ಯೂಸ್ ದೊರೆಯುತ್ತದೆ” ಎಂದು ಸಾರುತ್ತಿದ್ದ ಫಲಕವದು. ನೋಡಿದರೆ ಅದು ಒಂದು ಕಬ್ಬಿನ ಹಾಲಿನ ಅಂಗಡಿಯಾಗಿತ್ತು. ಅಲ್ಲೇ ಪಕ್ಕದಲ್ಲಿ ಇದ್ದ ಇನ್ನೊಂದು ಫಲಕದಲ್ಲಿ ‘Sugar cane juice available’ ಎಂಬ ಪ್ರಕಟಣೆ ಇತ್ತು. ಅಂದರೆ ಇದರ ಅರ್ಥ ನಮ್ಮ ಬೆಂಗಳೂರು ಕನ್ನಡ ‘ಕಂಗ್ಲಿಷ್’ ಆಗಿಬಿಟ್ಟು ಬಹಳ ದಿನವಾಗಿದೆ ಎಂದು! ಕಾಲಾಂತರದಿಂದ ನಾವು […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!