ನಮ್ಮ ಹಿರಿಯರು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಗಾದೆಮಾತುಗಳಲ್ಲಿ ಇದೂ ಒಂದು. ನಾವು ಮನುಷ್ಯರು ಆಸೆ ಪಡುವುದಕ್ಕೆ ಯಾವ ಮಿತಿಯೂ ಇಲ್ಲ. ಎಷ್ಟು ಕೊಟ್ಟರೂ ಇನ್ನೂ ಬೇಕೆನ್ನುವ ಮನಃಸ್ಥಿತಿ ನಮ್ಮದು. ಆದರೆ ಜೀವನದ ವಾಸ್ತವಿಕತೆಯಲ್ಲಿ ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ. ಕೆಲವು ಸಲ ಏನೋ ಬಯಸಿದರೆ ಇನ್ನೇನೋ ಸಿಗುತ್ತದೆ. ಇಂತಹ ಸಂದರ್ಭಗಳಲ್ಲಿ ನಮ್ಮ ಹತ್ತಿರ ಇಲ್ಲದ್ದರ ಬಗ್ಗೆ ಕೊರಗುವ ಬದಲು ಇರುವುದನ್ನು ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆಗಳ ರುಚಿಕರ ಮಿಶ್ರಣ. ದೇವಸ್ಥಾನಗಳಲ್ಲಿ, ಮನೆಯ ಪೂಜೆಗಳಲ್ಲಿ ಇದನ್ನು ದೇವರಿಗೆ ನೈವೇದ್ಯ ಮಾಡಿ ಭಕ್ತರಿಗೆ ಪ್ರಸಾದವಾಗಿ ಕೊಡುತ್ತಾರೆ.) ಎಂದು ಭಾವಿಸುವುದು ನಮ್ಮ ಮನಶ್ಯಾಂತಿಯ ದೃಷ್ಟಿಯಿಂದ ಉತ್ತಮ ಎಂದು ಹಿರಿಯರ ಅಂಬೋಣ. ಸರಿ ಇದೆ ಅಲ್ಲವೇ ಈ ದೃಷ್ಟಿಕೋನ? ಬದುಕು ಕಲಿಸುವ ಒಂದು ಮುಖ್ಯ ಪಾಠ ಇದು ಅನ್ನಿಸುತ್ತೆ.
Kannada proverb – Paalige bandaddu panchamrutha( What we got for our share itself is the sweetest elixir).
There is no limit for our desires. Whatever we get, howmuch ever we get we want still more. But in real life we will not get everything we ask for. In the pursuit of what we do not have, we often forget to see what we actually have. Therefore our wise ancestors advised us by this proverb that, we need to value what we have as if it is the sweetest elixir. Panchamrutha is a sweet offering in temples and worships. It is a delicious mixture of milk, curd, ghee, honey and sugar. We do well to enjoy what we already have as this sweetest elixir. Our elders were very level headed. Isn’t it? I think we do well to apply this proverb to our life.