ಅಡಿಗೆ ಮಾಡಬೇಕು ಅನ್ನುವಾಗ ಒಲೆ ಉರಿದರೆ ಪ್ರಯೋಜನವೇ ಹೊರತು, ಅಡಿಗೆ ಆದ ಮೇಲೆ ಒಲೆ ಉರಿದರೆ ಪ್ರಯೋಜನವಿಲ್ಲ. ಹಾಗೆಯೇ ಬದುಕು ‌ಹಾಳಾದ ಮೇಲೆ ಬುದ್ಧಿ ಸರಿಯಾದರೆ ಅದರಿಂದ ಪ್ರಯೋಜನ ಇಲ್ಲ.  ಆದುದರಿಂದ, ನಾವು ಸಕಾಲದಲ್ಲಿ‌ ಸರಿಯಾದ ಬುದ್ಧಿಯಿಂದ ಆಲೋಚಿಸಿ, ಅಥವಾ ಬಲ್ಲವರಿಂದ ಮಾರ್ಗದರ್ಶನ ಪಡೆದು ನಮ್ಮ ಬಾಳನ್ನು ಸರಿಮಾಡಿಕೊಳ್ಳಬೇಕು. ಮನಸ್ಸಿಗೆ ತಕ್ಷಣ ನಾಟುವ ಹೋಲಿಕೆಯೊಂದಿಗೆ ಈ‌ ಗಾದೆ ಮಾತು ಒಂದು ಜೀವನ ಪಾಠವನ್ನು ಹೇಳಿದೆ. 

Kannada proverb – Atta mele ole uriyithu, ketta mele budhdhi banthu (The kiln got lit after the cooking was done and lesson was learnt after things went wrong).

The kiln or stove should work while we are cooking. Once the cooking is done and over, there is no use if the kiln starts working. Similarly, after everything goes wrong horribly, there is no point in getting the wisdom, which was needed before things went wrong. Therefore, we need to check and recheck our path and actions and  should incorporate timely corrections.Thus the Kannada proverb gives a apt life lesson with a striking metaphor.