ಲ್ಯಾಟಿಟ್ಯೂಡ್ ಅಂಡ್ ಲಾಂಗಿಟ್ಯೂಡ್ – ಅಕ್ಷಾಂಶ ಮತ್ತು ರೇಖಾಂಶ –  (ಅ). ಭೂಗೋಳ ಶಾಸ್ತ್ರದಲ್ಲಿ – ಅಕ್ಷಾಂಶ – ಭೂಪಟದಲ್ಲಿ ಸಮಭಾಜಕ ವೃತ್ತಕ್ಕೆ ಸಮಾನಾಂತರವಾಗಿ ಎಳೆದ ರೇಖೆ.

‌ರೇಖಾಂಶ – ಭೂಮಂಡಲದ ಉತ್ತರಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆದಂತಹ ಕಲ್ಪಿತ ಮುನ್ನೂರ ಅರವತ್ತು ರೇಖೆಗಳು. ಇವು ಉತ್ತರ ಹಾಗೂ ದಕ್ಷಿಣ ಧ್ರುವದಲ್ಲಿ ಸೇರುತ್ತವೆ‌.

(ಆ). ಖಗೋಳ ಶಾಸ್ತ್ರದಲ್ಲಿ ಅಕ್ಷಾಂಶ – ಒಂದು ನಕ್ಷತ್ರದ ಅಥವಾ ಯಾವುದಾದರೂ ಆಕಾಶಕಾಯದ ಅಂತರಿಕ್ಷ ಅಕ್ಷಾಂಶ ಅಂದರೆ ಸೂರ್ಯಪಥಕ್ಕೆ ಸಂಬಂಧಿಸಿದಂತೆ ಅದರ ದೂರ‌.

ರೇಖಾಂಶ – ಅಂತರಿಕ್ಷ ರೇಖಾಂಶ ಅಂದರೆ ಸೂರ್ಯನು ಸಮಭಾಜಕ ರೇಖೆಯನ್ನು ದಾಟುವ ದಿಕ್ಕಿಗೆ ಸಂಬಂಧಿಸಿದಂತೆ ಅಳೆಯಲಾಗುವ  ಆಕಾಶಕಾಯದ ದೂರ.