ಕನ್ನಡದ ಒಂದು ಜನಪ್ರಿಯ ಗಾದೆ ಮಾತು ಇದು ; ಉತ್ಪ್ರೇಕ್ಷೆಯ ಮೂಲಕ ಜನಗಳ ಸ್ವಭಾವವೊಂದನ್ನು ಕುರಿತು ಒಳನೋಟ ನೀಡುತ್ತದೆ.‌  

ಹಿಂದೂ ಧರ್ಮದ  ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಆದ ಮೇಲೆ ಮಂಗಳಾರತಿ, ತೀರ್ಥ ಕೊಡುವುದು ಪದ್ಧತಿ ಅಲ್ಲವೇ? ಅಲ್ಲಿ ಮಂಗಳಾರತಿಯ ತಾಪಕ್ಕೆ ಮತ್ತು ತೀರ್ಥದ ತಂಪಿಗೆ ನಾವು ಸಲ್ಲುವುದು ಒಂದೆರಡು ಮೂರು‌ ಕ್ಷಣಗಳ ಕಾಲ‌ ಅಷ್ಟೇ. ಅದರಿಂದಾಗಿ ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ.‌ ಆದರೆ ಕೆಲವು ಅತಿಸೂಕ್ಷ್ಮ ಮನಸ್ಸು ಅಥವಾ ಅತಿಸೂಕ್ಷ್ಮ ಆರೋಗ್ಯ ಪರಿಸ್ಥಿತಿಯವರು,  ಬೇರೆಯವರು ಆರಾಮವಾಗಿ ಇರುವ ಸಂದರ್ಭಗಳಲ್ಲೂ ಹುಷಾರು ತಪ್ಪುತ್ತಾರೆ ಅಥವಾ ತಮಗೆ ವಿಪರೀತ ಅನಾನುಕೂಲ ಆಯಿತು ಎಂದು‌ ದೂರುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರ ಮನೆಯವರು ಅಥವಾ ಪರಿಚಿತರು ಅವರ ಬಗ್ಗೆ “ಅಯ್ಯೋ… ಇವ್ರಿಗೆ ಮಂಗಳಾರತಿ ತಗೊಂಡ್ರೆ ಉಷ್ಣ, ತೀರ್ಥ ತಗೊಂಡ್ರೆ ಶೀತಾನಪ್ಪ, ಹುಷಾರಾಗಿರಬೇಕು ಇವರ ಬಗ್ಗೆ ” ಎನ್ನುತ್ತಾರೆ. ಹೀಗೆ, ಕನ್ನಡದ ಸ್ವಾರಸ್ಯಕರ ಗಾದೆಮಾತುಗಳ ಸಾಲಿಗೆ ಇದೂ ಸಹ ಸೇರುತ್ತದೆ.

Kannada proverb – Mangalarathi tagondre ushna, theertha tagondre sheetha.

( If taken aarathi it is too hot, if taken theertha it is too cold).

Some people are extremely sensitive about their surroundings and atmosphere. They fall sick too soon, fuss a lot and are very hard to please or convince. When kannadigas meet and greet others, if someone appears too sensitive about things, this proverb is remembered. Mangalarathi and theertha are part of worship at Hindu temples. For a very short time we come across with heat and cool things there. In realistic terms, nothing happens to anyone’s health by this. But this proverb uses exaggeration to drive home the point that some people are very fussy and too sensitive.