ಸಮಯ ಅನ್ನುವುದು ಪ್ರತಿ‌ ಬೆಳಿಗ್ಗೆ, ಬದುಕಿರುವ ಎಲ್ಲ ಮನುಷ್ಯರಿಗೂ, ಇಪ್ಪತ್ನಾಲ್ಕು ಗಂಟೆಗಳ ಲೆಕ್ಕದಲ್ಲಿ ಸಮಾನವಾಗಿ ಸಿಗುವ ಅತ್ಯಮೂಲ್ಯ ಸಂಪತ್ತು.‌ ಇದನ್ನು‌ ಕೂಡಿಡಲಾಗದು, ಒಮ್ಮೆ ಕಳೆದರೆ ಏನು ಮಾಡಿದರೂ ಮರಳಿ‌ ಪಡೆಯಲಾಗದು. ಇದು ಗೊತ್ತಿದ್ದರೂ ನಾವು ಮನುಷ್ಯರು ನಾವು ಮಾಡಬೇಕಾದ ಮುಖ್ಯ ಕೆಲಸಗಳನ್ನು ‘ನಾಳೆ ಮಾಡಿದರಾಯಿತು ಬಿಡು’ ಎಂದು ಮುಂದಕ್ಕೆ ಹಾಕುತ್ತಲೇ ಇರ್ತೇವೆ. ಆದರೆ ಆ ‘ನಾಳೆ’ ಬರದೆಯೇ ಹೋಗಬಹುದು ಅನ್ನುವುದು ಜೀವನದ ಒಂದು ರುದ್ರ ಸತ್ಯ. 

ಸಾಂಸಾರಿಕ ತಾಪತ್ರಯ, ಅನಾರೋಗ್ಯ, ವ್ಯವಹಾರದಲ್ಲಿ ಕಷ್ಟನಷ್ಟ, ಪ್ರಕೃತಿ ವೈಪರೀತ್ಯ, ಕೊನೆಗೆ ನಮ್ಮದೇ ಸಾವು(!!!!)…ನಾಳೆ ಏನಾಗುವುದೋ ಹೇಳಬಲ್ಲವರಾರು? ಇದಕ್ಕಾಗಿಯೇ ಹಿರಿಯರು ‘ನಾಳೆ ಎಂದವನ ಮನೆ ಹಾಳು’ ಎಂಬ ಎಚ್ಚರಿಕೆಯನ್ನು ನಮಗೆ ಕೊಟ್ಟು, ಇವತ್ತು ಮಾಡುವ ಕೆಲಸವನ್ನು ಇವತ್ತೇ ಮಾಡಿ ಮುಗಿಸು, ನಾಳೆಗೆ ಮುಂದೂಡಬೇಡ ಎಂದು ಹೇಳಿರುವುದು‌. ಸರಿಯಾಗಿ ಗ್ರಹಿಸಿದರೆ ನಮ್ಮನ್ನು ಕಾಯುವ, ನಮ್ಮ ಸಾಧನೆಯ ಕನಸನ್ನು ನನಸು ಮಾಡುವ ಗಾದೆಮಾತಿದು.‌

Kannada proverb – Naale endavana mane haalu ( The ‘tomorrow’ sayer’s  home is doomed). 

We all have seen people who keep saying  ‘I will do it tomorrow’. Unfortunately even we may be one of them. Procrastination is the worst time thief. We postpone our important work which HAS to be done today to just one day, i.e. ‘tomorrow’ and that ‘tomorrow’ never comes! Because tomorrow also we will say ‘ I will do it tomorrow’! Therefore we end up not accomplishing the job. This makes us losers for sure. Then we lament about our bad luck, lack of opportunities, non co-operation of people…etc. So we are doomed for a life of cribbing and crying all the time.

So, it is wise to understand this proverb well and stop postponing our duties and jobs for tomorrow!