ಈ ಗಾದೆಮಾತಿನ ಗ್ರಾಂಥಿಕ ರೂಪ ‘ನಿದ್ದೆ ಕೆಟ್ಟರೋ, ಬುದ್ಧಿ ಕೆಟ್ಟರೋ’ ಎಂದು. ಬಳಕೆ ಮಾತಿನಲ್ಲಿ ಅದು ‘ನಿದ್ಗೆಟ್ರೋ, ಬುದ್ಗೆಟ್ರೋ’ ಎಂದಾಗುತ್ತದೆ.

ಈಗ ಈ ಗಾದೆಮಾತಿನ ಅರ್ಥದ ಬಗ್ಗೆ ವಿವೇಚನೆ ಮಾಡೋಣ. ನಿದ್ದೆ ಕೆಟ್ಟರೆ ಸಾಕಷ್ಟು ವಿಶ್ರಾಂತಿ ಸಿಗದೆ ಮನುಷ್ಯನ ದೇಹ ದಣಿಯುತ್ತದೆ, ಮನಸ್ಸು ಹಾಗೂ ಬುದ್ಧಿಗಳು ಮಂಕಾಗುತ್ತವೆ. ಆ ಸ್ಥಿತಿಯಲ್ಲಿ ಅವನು ಮಾಡುವ ಕೆಲಸಗಳು, ತೆಗೆದುಕೊಳ್ಳುವ  ನಿರ್ಧಾರಗಳು, ಸಹಜೀವಿಗಳೊಂದಿಗೆ ವರ್ತಿಸುವ ರೀತಿ‌ –  ಇವು ಸಮರ್ಪಕ ಹಾಗೂ ಸುಸಂಬದ್ಧವಾಗಿರದ ಸಾಧ್ಯತೆ ಇರುತ್ತದೆ. ಬಹುಶಃ ಎಲ್ಲ ಮನುಷ್ಯರೂ ಈ ಸ್ಥಿತಿಯನ್ನು ಒಂದಲ್ಲ ಒಂದು ಸಲ ಅನುಭವಿಸಿಯೇ ಇರುತ್ತಾರೆ.‌ ನಿದ್ದೆ ಇಲ್ಲದ ಆಯಾಸವು ಚಿಕ್ಕಪುಟ್ಟ ಕೆಲಸಗಳನ್ನೂ ಕಷ್ಟವಾಗಿಸಿಬಿಡುತ್ತದೆ, ಯಾರು ಮಾತಾಡಿಸಿದರೂ ತಾಳ್ಮೆಗೆಟ್ಟು ರೇಗುವಂತಾಗುತ್ತದೆ.‌ ಹೀಗಾಗಿಯೇ ನಮ್ಮ ಹಿರಿಯರು ನಿದ್ದೆ ಕೆಟ್ಟರೆ ಆಗುವ ಅಪಾಯದ ಬಗ್ಗೆ ಈ ಗಾದೆಮಾತಿನ ಮೂಲಕ ಎಚ್ಚರಿಕೆ ನೀಡಿದ್ದಾರೆ.

Kannada proverb – Nidgetro, budgetro (Whether they lost sleep or lost their mind?).

This is a very interesting proverb in Kannada which warns us against losing sleep. Though it has only two words in it, it has a wide ranging meaning. We all know that if we lose sleep in one particular night, the next day we feel tired, jittery and very irritable. Therefore our behavior, decision making, usual working style are altered for the worse. We tend to snap at others easily and lose our temper without reason. Therefore we do well to get enough sleep and take care of ourselves. This health tip given by our ancestors makes us aware of our physiology. Isn’t it?  Sceintists call the same thing as psychosomatic connection.