ಜಟ್ಟಿಗಳು ಮಲ್ಲಯುದ್ಧದ ಪಟ್ಟುಗಳನ್ನು ಅಭ್ಯಾಸ ಮಾಡುವುದಕ್ಕೆ ಸಾಮು ಮಾಡೋದು ಎನ್ನುತ್ತಾರೆ. ಸಾಮು ಮಾಡೋದು ಎಂಬ ಪದವನ್ನು ನಾವು ಮಾಡುವ ಯಾವುದೇ ವೃತ್ತಿ/ಕೌಶಲ್ಯದ ಅಭ್ಯಾಸದ ಸಂದರ್ಭದಲ್ಲೂ ಒಂದು ರೂಪಕವಾಗಿ ಬಳಸಬಹುದು. ಜೀವನವಿಡೀ ಯಾವುದೋ ಕಸರತ್ತು ಮಾಡುತ್ತಾ, ಏನಕ್ಕಾಗಿಯೋ ಒದ್ದಾಡುತ್ತಾ, ಇಪ್ಪತ್ನಾಲ್ಕು ಗಂಟೆಯೂ ದುಡಿಯುತ್ತಲೇ ಇದ್ದರೆ ಜೀವನದ ಸಂತೋಷಗಳನ್ನು ಅನುಭವಿಸಲು, ಬದುಕು ಕೊಡುವ ಸವಿಯನ್ನು ಸ್ವೀಕರಿಸಲು ಸಾಧ್ಯ ಆಗುವುದಿಲ್ಲ. ಹಾಗೆಂದೇ ಈ ಗಾದೆಮಾತು ನಮ್ಮೆಲ್ಲ ಕಸರತ್ತುಗಳಿಗೂ ಒಂದು ಮಿತಿ ಇರಬೇಕು ಎಂಬ ಸಂದೇಶವನ್ನು ಕೊಡುತ್ತಿದೆ.
Kannada proverb – Saayo thanaka saamu maadi baalodyavaga? ( If you keep practicing your trade till the end, when you will live?).
Saamu means the exercise and practice done by boxers. If there is a time limit to do this practice it is apt. But, if practice occupies our whole time of the day and of the night, there will be no time left for living! There is a saying in English – Life is lost in living. Therefore, we need to understand that too much is too bad, even if it is the practice of our trade or passion. Like they say ” have the time to smell the roses”, we should have our priorities right in our lives.