ನಾವು ಮನುಷ್ಯರು ಕೆಲವೊಮ್ಮೆ ನಮ್ಮನ್ನು ಕೇಳಲಾದ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳದೆ ಅಬದ್ಧ, ಅಸಂಬದ್ಧ ಉತ್ತರಗಳನ್ನು ಕೊಡುತ್ತೇವೆ! ಶಾಲಾ ಕಾಲೇಜುಗಳ ಪರೀಕ್ಷೆಗಳಲ್ಲೂ, ದೈನಂದಿನ ವ್ಯವಹಾರ- ಮಾತುಕತೆಗಳಲ್ಲೂ ಕೆಲವು ಸಲ ಹೀಗಾಗುತ್ತೆ. ಕೇಳಿದ ಪ್ರಶ್ನೆ ಒಂದು ದಿಕ್ಕಲ್ಲಿದ್ದರೆ, ಉತ್ತರ ಇನ್ಯಾವುದೋ ದಿಕ್ಕಿನಲ್ಲಿದ್ದು, ಹೇಳಿದ್ದಕ್ಕೂ ಕೇಳಿದ್ದಕ್ಕೂ ಸಂಬಂಧವೇ ಇರುವುದಿಲ್ಲ. ಇದನ್ನು ಗಮನಿಸಿಯೇ ನಮ್ಮ ಹಿರಿಯರು ಮೇಲಿನ ಗಾದೆಮಾತನ್ನು ಮಾಡಿರಬೇಕು‌. ‘ಊಟ ಆಯಿತಾ?’ ಎಂದು ಕೇಳಿದರೆ ಆಯಿತು ಅಥವಾ ಇಲ್ಲ ಎಂದು ಉತ್ತರ ಕೊಡುವ ಬದಲು ಪುಣ್ಯಾತ್ಮರೊಬ್ಬರು ‘ಮುಂಡಾಸು( ತಲೆಗೆ ಕಟ್ಟುವ ಬಟ್ಟೆ – ರುಮಾಲು – ಪೇಟಾ) ಮೂವತ್ಮೂರು ಮೊಳ ಉದ್ದವಿದೆ’ ಅಂದರಂತೆ! ಈ ಗಾದೆಮಾತನ್ನು ಅರ್ಥೈಸಿಕೊಂಡು ನಾವು ನಮ್ಮ ಸಂಭಾಷಣೆಗಳು ಸುಸಂಬದ್ಧವಾಗಿರುವಂತೆ ಜಾಗ್ರತೆ ವಹಿಸಬೇಕು‌.

Kannada proverb – undaatha kelidre mundaasu moovaththu mola endidda( When I asked him whether you had lunch he said my head gear is 33 feet long). 

Sometimes we humans answer questions without any logic. Our answers might be irrelevant or totally out of the context. It can happen in daily life or during an exam. Our ancestors were such good observers of human behavior that they have advised us against this behavior, in an indirect way, through this proverb.