ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಕಲಿಕೆ ಎಂಬುದು ಎಂದಿಗೂ ಮುಗಿಯುವುದಿಲ್ಲ. ನಾವು ಜೀವನ ನಡೆಸುವಾಗ ಅನೇಕ ಕಷ್ಟನಷ್ಟಗಳು, ಅನಿರೀಕ್ಷಿತ ಸವಾಲುಗಳು ಎದುರಾಗುತ್ತ, ನಮ್ಮ ತಿಳುವಳಿಕೆಯ ಮಟ್ಟವನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಹೀಗಿರುವಾಗ ನಾವು ಕಲಿಕೆಯನ್ನು ನಿಲ್ಲಿಸುವ ಪ್ರಶ್ನೆಯೇ ಬರಬಾರದು, ಅಲ್ಲವೇ? ಒಂದು ಚಿಕ್ಕ ಮಗು ಕೂಡ ಕೆಲವು ಸಂದರ್ಭಗಳಲ್ಲಿ ನಮಗೆ ಗುರುವಾಗಬಹುದು. ಅದರಲ್ಲೂ ಭೂತ, ಭವಿಷ್ಯಗಳ ಚಿಂತೆ ಮಾಡದೆ ತಕ್ಷಣದ ವರ್ತಮಾನ ಕಾಲವನ್ನು ಅದು ಇರುವಂತೆಯೇ ಸವಿಯುವುದರಲ್ಲಿ ಮಕ್ಕಳು ಎತ್ತಿದ ಕೈ. ಹೀಗಾಗಿ ಜೀವನವನ್ನು ಚೆನ್ನಾಗಿ ನಡೆಸುವ ಯುಕ್ತಿಯ ಮಾತು ಬಂದಾಗ ಮಕ್ಕಳಿಂದಾದರೂ ಸರಿ, ನಾವದನ್ನು ತಿಳಿದುಕೊಳ್ಳಬೇಕು ಎಂದು ಸೂಚಿಸುವ ಈ ಗಾದೆಮಾತು ನಮಗೆ ಸದಾ ಪ್ರಸ್ತುತವಾಗುತ್ತದೆ.

Kannada proverb – Yukthiya maathu makkalindadaru thilidukollabeku ( If it is a wise thing, we must not hesitate to learn even from children).

With life’s uncertainties and myriad ways, many times we may feel that, what we have learnt already is not enough. Life never stops teaching, therefore we should never stop learnng. Sometimes, children though they are much younger to us in age, can possess and betray better wisdom than us, in particular situations. For example a  child’s characteristic of never worryimg about the past or future but just enjoying the present moment. Wise people know for sure that there are certainly things which can be and should be learnt from children. So, to face the enigma called life we do need a lot of wisdom, and, the age of a person who teaches us, should not matter.