(ಕೊತ್ತಿ ಅಂದರೆ ಬೆಕ್ಕು. ಮೈಸೂರು ಕಡೆಯ ಕೆಲವು ಭಾಗಗಳಲ್ಲಿ ಬೆಕ್ಕಿಗೆ ಕೊತ್ತಿ ಎಂಬ ಪದವನ್ನೇ ಹೆಚ್ಚಾಗಿ ಬಳಸುತ್ತಾರೆ.)

ಕೆಲವು ಸಲ ನಮಗೆ ನಮಗಿಂತ ಹೆಚ್ಚು ವಯಸ್ಸು, ಅನುಭವ ಅಧಿಕಾರವುಳ್ಳವರ ಮೇಲೆ ಕೋಪ ಬಂದರೆ ಅದನ್ನು ಅವರ ಮೇಲೆ ತೋರಿಸಲಾಗದೆ ಕಸಿವಿಸಿ ಪಡುತ್ತಿರುತ್ತೇವೆ. ಅಂತಹ ಹೊತ್ತಿನಲ್ಲಿ ನಮಗಿಂತ ಕಡಿಮೆ ವಯಸ್ಸು, ಅಧಿಕಾರ, ಅನುಭವ ಇರುವವರೇನಾದೂ ನಮ್ಮ ಎದುರಿಗೆ ಬಂದರೆ ಅವರ ಮೇಲೆ ಆ ಕೋಪವನ್ನು ತೋರಿಸಿಕೊಂಡು, ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿ ಮಾಡಿಕೊಂಡುಬಿಡುತ್ತೇವೆ! ನಾವು ಯಾರ ಮೇಲೆ ರೇಗುತ್ತಿರುತ್ತೇವೋ ಅವರಿಗೆ ನಮ್ಮ ಕೋಪಕ್ಕೆ ಕಾರಣವೇನೆಂದೇ ಅರ್ಥವಾಗುವುದಿಲ್ಲ! ಉದಾಹರಣೆಗೆ ಅತ್ತೆ ಮೇಲೆ ಕೋಪ ಮಾಡಿಕೊಂಡ ಸೊಸೆ ತನ್ನ ಮಕ್ಕಳ ಮೇಲೆ ರೇಗುವುದು ಅಥವಾ ಮನೆಯಲ್ಲಿನ ಬೆಕ್ಕನ್ನು (ಕೊತ್ತಿಯನ್ನು) ಹೊಡೆಯುವುದು, ಹೆಂಡತಿಯ ಮೇಲೆ ಕೋಪಗೊಂಡ ಕಛೇರಿ ಉದ್ಯೋಗಿಯು ತಮ್ಮ ಸಹೋದ್ಯೋಗಿಗಳ ಮೇಲೆ ರೇಗಾಡುವುದು ಇಂಥವು. ಸ್ಥಾನಪಲ್ಲಟಗೊಂಡ ಕೋಪ ಎಂದು ಇದನ್ನು ಕರೆಯಬಹುದು! ಜೀವನದಲ್ಲಿ ಇಂತಹ ಸನ್ನಿವೇಶಗಳು ಅಪರೂಪವೇನಲ್ಲ.

Kannada proverb: Aththe melina kopa koththi mele (Angry on mother-in-law but pet cat is bearing the brunt.)

Sometimes we humans show a peculiar behavior. We are angry with someone but show that anger on someone else! This happens more when we are angry on authority figures in front of whom we are helpless. Therefore we tend to exhibit this anger on people who are less powerful or on people who are very close to us. This is known as displaced anger. For example an employee who is angry on his boss may take out his anger on his wife, and a teacher who has fought at home may get mad at his students for trivial reasons. In such situations the above proverb is remembered among Kannada speaking people.