ಭಾರತದಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆಗಳಲ್ಲಿ ಮದುವೆಯಾದ ಹೆಣ್ಣು ತನ್ನ ಗಂಡನ ಮನೆಗೆ ಬಂದು ಜೀವನ ಮಾಡುವ ಸನ್ನಿವೇಶವಿರುವುದರಿಂದ ಅತ್ತೆ-ಸೊಸೆ ಸಮೀಕರಣವು ರೂಪುಗೊಳ್ಳುತ್ತದೆ. ಮನೆಯ ವಾತಾವರಣದಲ್ಲಿ ಒಂದೇ ಗಂಡುವ್ಯಕ್ತಿಯ ಜೊತೆಗೆ ಎರಡು ಪೀಳಿಗೆಯ ಹೆಂಗಸರ ಆಪ್ತ ಸಂಬಂಧವು (ತಾಯಿ–ಮಗ, ಗಂಡ-ಹೆಂಡತಿ) ಉಂಟಾಗಿರುವ ಕಾರಣ ಅಲ್ಲಿ ಒಂದು ರೀತಿಯ ಸ್ಪರ್ಧೆ, ಅಭದ್ರತೆ, ತಾಕಲಾಟಗಳು ಕಾಣಿಸಿಕೊಳ್ಳುವುದು ಸಹಜ. ಇದೇ ಪ್ರಸಿದ್ಧವಾದ `ಅತ್ತೆ-ಸೊಸೆ’ ಜಗಳಕ್ಕೆ ಹೇತು! ವಾಸ್ತವದಲ್ಲಿ ಇದು ಒಂದು ಅಧಿಕಾರ ಚಲಾವಣೆಯ ಪ್ರಶ್ನೆಯಾಗಿಬಿಡುತ್ತದೆ. `ನನ್ನ ಮಾತು ನಡೆಯಬೇಕು’ ಎಂಬ ಇಚ್ಛೆ ಅತ್ತೆ-ಸೊಸೆ ಇಬ್ಬರಲ್ಲೂ ಇರುತ್ತದೆ. ಮದುವೆಯಾದ ಹೊಸದರಲ್ಲಿ ಆಗಷ್ಟೇ ಬಂದ ಸೊಸೆಗೆ ಎಲ್ಲವೂ ಹೊಸದಾದದ್ದರಿಂದ ಹಳೆತಲೆಯಾದ ಅತ್ತೆಯ ಮಾತು ಸಾಮಾನ್ಯವಾಗಿ ನಡೆಯುತ್ತದೆ. ಅದು ಅತ್ತೆಯ ಕಾಲ. ಹಾಗೆಯೇ ಕೆಲವು ವರ್ಷಗಳು ಹೋದ ಮೇಲೆ ಸೊಸೆಗೆ ಮನೆಯ ವಾತಾವರಣ, ಮನೆಜನರ ಸ್ವಭಾವ ಇವೆಲ್ಲ ಪರಿಚಯ ಆಗುತ್ತಾ ಹೋದಂತೆ, ಹಾಗೂ ಪ್ರಕೃತಿ ನಿಯಮದಂತೆ ವಯಸ್ಸಾಗಿ ದುರ್ಬಲವಾಗುತ್ತಾ ಹೋಗುವ ಅತ್ತೆಗೆ ಅಧಿಕಾರದಿಂದ ಒಂದು ರೀತಿಯ `ವಯೋನಿವೃತ್ತಿ’. ಆಗ ಸೊಸೆಯ ಕಾಲ ಪ್ರಾರಂಭವಾಗುತ್ತದೆ. ಈ ಕೌಟುಂಬಿಕ/ಸಾಮಾಜಿಕ ಸನ್ನಿವೇಶವನ್ನೇ ಪ್ರಸ್ತುತ ಗಾದೆಮಾತು ಸಮರ್ಥವಾಗಿ ಸೂಚಿಸಿದೆ.
Kannada proverb: aththeguu ondu kaala, soseguu ondu kaala(There is ruling era of Mother-in-law and then there is era of Daughter-in-law).
There is a famous proverb in English which says `every dog has his day’. The above Kannada proverb is on the similar lines. In the households of patriarchal Indian society, there is a power struggle between mother-in-law and daughter-in-law. This is because both the women want to have the same man (the man who is son to one and husband to the other) to be on their side. Due to various factors like age, children’s upbringing, human nature of domination or submissiveness, place of work of the men of the home etc., sometimes mother-in-law will have the upper hand and some other times daughter-in-law will rule the roost. Therefore this proverb depicts a facet of Indian life.