ಕನ್ನಡ ಭಾಷೆಯ ಈ ಗಾದೆಮಾತು ಉತ್ತಮ ನಡವಳಿಕೆಯೊಂದರ ಕಡೆ ನಮ್ಮ ಗಮನ ಸೆಳೆಯುತ್ತದೆ. ನಮ್ಮ ಸಹಜೀವಿಗಳೊಂದಿಗೆ ಒಡನಾಡುವಾಗ ನಾವು ನೆನಪಿಡಬೇಕಾದ ಒಂದು ಮಾತು ಇದು. ಕುಟುಂಬದಲ್ಲಿ, ಉದ್ಯೋಗ ಸ್ಥಳದಲ್ಲಿ, ಸಮಾರಂಭಗಳಲ್ಲಿ ನಮ್ಮ ಸಹಚರರು ಕೆಲವೊಮ್ಮೆ ಪ್ರಶಂಸನೀಯವಾದ ಕೆಲಸಗಳನ್ನು, ಇನ್ನೊಮ್ಮೆ ಅಷ್ಟೇನೂ ಪ್ರಶಂಸನೀಯವಲ್ಲದ ಕೆಲಸಗಳನ್ನು ಮಾಡಬಹುದು. ಇಂತಹ ಸಂದರ್ಭಗಳಲ್ಲಿ ಪ್ರಶಂಸೆಯ ಮಾತುಗಳನ್ನು ಹೇಳಬೇಕೆಂದರೆ ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಹೇಳಬೇಕು. ಆದರೆ ತಪ್ಪು ತಿದ್ದಬೇಕಾದ ಅಥವಾ ಏನಾದರೂ ಅಸಾಮಾಧಾನವುಂಟು ಮಾಡುವ ಸಾಧ್ಯತೆಯುಳ್ಳ ಮಾತನ್ನು ಹೇಳುವುದಿದ್ದರೆ, ತಪ್ಪು ಮಾಡಿದವರನ್ನು ಹತ್ತಿರಕ್ಕೆ ಕರೆದು ಮೆಲ್ಲಗೆ ಅವರಿಗೆ ಮಾತ್ರ ಕೇಳಿಸುವಂತೆ ಹೇಳಬೇಕು. ಇದರಿಂದ ತಪ್ಪು ಮಾಡಿದವರ ಆತ್ಮಗೌರವಕ್ಕೆ ಭಂಗ ಬಾರದಂತೆ ಅವರನ್ನು ತಿದ್ದಿದಂತಾಗುತ್ತದೆ. ಜನರೊಡನೆ ವ್ಯವಹರಿಸುವಾಗ ನೆನಪಲ್ಲಿಟ್ಟುಕೊಂಡರೆ, ಸಂಬಂಧ ನಿರ್ವಹಣೆಯಲ್ಲಿ ನಮಗೆ ತುಂಬ ಸಹಾಯ ಮಾಡುವ ಮಾತು ಇದು.

Kannada proverb : olledanna kooghelu, kettaddanna kiveelhelu(Be loud in your appreciation, but whisper your criticism in ears).

This proverb gives a hint to maintain good relationships with our fellow beings. Our loved ones, friends or colleagues behave sometimes in appreciable ways and sometime in not so appreciable ways. It is but natural that we come across these kinds of situations in our daily lives. The above ancient proverb advises us that if we have to appreciate the good deed of someone, we should be very vocal about it, so that everyone around will hear it. But if we have to point out a mistake or reprimand someone, we should do it quietly in a corner, almost as if we are whispering it in their ears. By doing so, the concerned person will get to realize their mistake with his/her self-respect intact. Nice advice, by our ancestors, isn’t it?