Capture

ವಶ – ಕಣಗಳ ಒಂದು ವ್ಯವಸ್ಥೆಯು ತನ್ನದಾಗಿರದಿದ್ದ ಕಣವೊಂದನ್ನು ಹೊರಗಿನಿಂದ ಹೀರಿಕೊಳ್ಳುವ ಪ್ರಕ್ರಿಯೆಗಳಲ್ಲಿ ಯಾವುದಾದರೊಂದು ಪ್ರಕ್ರಿಯೆ.

Carat

ಕ್ಯಾರಟ್ – ಅ. ಚಿನ್ನದ ಶುದ್ಧತೆಯನ್ನು ಅಳೆಯುವ ಮೂಲಮಾನ. ಶುದ್ಧಚಿನ್ನವನ್ನು ೨೪ ಕ್ಯಾರಟ್‌ನದು   ಎನ್ನುತ್ತಾರೆ.

Carbon cycle

ಇಂಗಾಲ ಚಕ್ರ –ಪರಮಾಣು ಬೀಜಕೇಂದ್ರಗಳ ನಡುವೆ ನಡೆಯುವ ರಾಸಾಯನಿಕ ಕ್ರಿಯೆಗಳ ಒಂದು ಸರಣಿ. ಜಲಜನಕ ಬೀಜಕೇಂದ್ರಗಳು ಹೀಲಿಯಂ ಬೀಜಕೇಂದ್ರವಾಗಲು ಸಂಯೋಗಗೊಳ್ಳುವಾಗ ಇಂಗಾಲವು ವೇಗವರ್ಧಕವಾಗಿ ವರ್ತಿಸುವಂತಹ ಕ್ರಿಯಾ ಸರಣಿ ಇದು.

Carbon dating

ಇಂಗಾಲ ಕಾಲನಿರ್ಣಯ – ಜೀವಂತ ವಸ್ತುಗಳನ್ನು ಒಳಗೊಂಡ ಅದರಲ್ಲೂ ಭೂಮಿಯನ್ನು ಅಗೆಯುವುದರಿಂದ ದೊರೆಯುವ ಪಳೆಯುಳಿಕೆಗಳ ಕಾಲವನ್ನು ಕಂಡು ಹಿಡಿಯಲು ಬಳಸುವ ಒಂದು ವಿಧಾನ. ಜೀವಂತ ವಸ್ತುಗಳಲ್ಲಿರುವ ಇಂಗಾಲದ ಪರಮಾಣುವಿನ ವಿಕಿರಣ ಸೂಸುವ ಗುಣವನ್ನು ಆಧಾರವಾಗಿಟ್ಟುಕೊಂಡಂತಹ ವಿಧಾನ ಇದು.

Carbon microphone

ಇಂಗಾಲ ಧ್ವನಿವರ್ಧಕ – ಇಂಗಾಲದ ಹರಳುಗಳನ್ನು ಬಳಸಿಕೊಂಡು ತನ್ನ ಕೆಲಸ ಮಾಡುವಂತಹ ಒಂದು ಧ್ವನಿವರ್ಧಕ. 

Canal rays

ಕಾಲುವೆ ಕಿರಣಗಳು – ಋಣಧ್ರುವದಲ್ಲಿ ಚಿಕ್ಕ ಚಿಕ್ಕ ತೂತುಗಳನ್ನು ಮಾಡುವ ಮೂಲಕ, ವಿಸರ್ಜನ ಕೊಳವೆಯಿಂದ ಪಡೆದುಕೊಳ್ಳಲಾಗುವ ಧನ ಅಯಾನುಗಳ ಪ್ರವಾಹಗಳು.

Caloriemeter

ಉಷ್ಣಮಾಪಕ – ತಾಪಶಕ್ತಿಯನ್ನು ಅಳೆಯಲು ಬಳಸುವ ಉಪಕರಣ.

Cantilever

ತನ್ನ ಒಂದು ಕಡೆಯಲ್ಲಿ ಜೋಡಿಸಲ್ಪಟ್ಟ ಹಾಗೂ ಇನ್ನೊಂದು ಕಡೆಯಲ್ಲಿ ಮುಕ್ತವಾಗಿರಲು ಬಿಟ್ಟಂತಹ ವೃತ್ತಾಕಾರದ ಅಥವಾ ಚೌಕಾಕಾರದ ತೊಲೆ. ಇದರ ಮುಕ್ತಭಾಗದ ಮೇಲೆ ಭಾರ ಬೀಳುತ್ತದೆ.

Capacitance

ವಿದ್ಯುತ್ ಸಾಮರ್ಥ್ಯ – ವಾಹಕಗಳ ನಡುವೆ ವಿದ್ಯುತ್ ಅಂತಃಸಾಮರ್ಥ್ಯದ ವ್ಯತ್ಯಾಸವಿದ್ದಾಗ ವಿದ್ಯುತ್ ವಾಹಕಗಳು ಹಾಗೂ ನಿರೋಧಕಗಳ ಒಂದು ವ್ಯವಸ್ಥೆಗಿರುವ ವಿದ್ಯುತ್ ಸಂಗ್ರಹದ ಸಾಮರ್ಥ್ಯ.

Capillarity 

ಕೂದಲಗಲದಲ್ಲಿ ಚಲನೆ – ಕೂದಲಿನಷ್ಟು ಕಡಿಮೆ ವ್ಯಾಸವುಳ್ಳ ಅತಿ ತೆಳುವಾದ ಕೊಳವೆಗಳಲ್ಲಿ ದ್ರವಗಳು ಏರುವುದನ್ನು ಅಥವಾ ಇಳಿಯುವುದನ್ನು ವಿವರಿಸಲು ಬಳಸುವ ಪದ. 

Page 1 of 2

Kannada Sethu. All rights reserved.