ಕಾರಣ ತತ್ವ ಅಥವಾ ಕಾರ್ಯಕಾರಣ ತತ್ವ _ ಪ್ರತಿಯೊಂದು ಪರಿಣಾಮಕ್ಕೂ ಕೂಡ ಹಿಂದೆ ನಡೆದ ಘಟನೆ ಅಥವಾ ಘಟನೆಗಳು ಕಾರಣ ಅನ್ನುವ ಸಿದ್ಧಾಂತ.
ಕಾಚಿಯವರ ಚದುರುವಿಕೆಯ ಸಿದ್ಧಾಂತ – ಬಹುತೇಕ ಸಂಗತಿಗಳಲ್ಲಿನ ಬೆಳಕಿನ ಚದುರುವಿಕೆಯನ್ನು ಸಾಕಷ್ಟು ಕರಾರುವಾಕ್ಕಾಗಿ ವಿವರಿಸುವ ಒಂದು ಸಿದ್ಧಾಂತ.
ವಿದ್ಯುತ್ ಕೋಶ – ಎರಡು ವಿದ್ಯುತ್ ಧ್ರುವಗಳು ಮತ್ತು ಒಂದು ವಿದ್ಯುತ್ ವಾಹಕ ದ್ರಾವಣವುಳ್ಳ ಒಂದು ವ್ಯವಸ್ಥೆ. ಇದು ವಿದ್ಯುತ್ತನ್ನು ಉತ್ಪಾದಿಸುತ್ತದೆ.
ಸೆಲಿಷಿಯಸ್ ಅಳತೆಮಾನ – ಉಷ್ಣತೆಯನ್ನು ಅಳೆಯುವ ಒಂದು ಮೂಲಮಾನ ಪದ್ಧತಿ
ಸೆಂಟಿ – ೧/೧೦೦ ನ್ನು ಸೂಚಿಸುವ ಒಂದು ಪೂರ್ವಪದ.
ಕಂಬ ದೂರದರ್ಶಕ _ ವಿಂಗಡಣೆಯ ಗುರುತುಗಳನ್ನು ಮಾಡಿದಂತಹ ಕಂಬಕ್ಕೆ ಕಟ್ಟಿದ, ಮೇಲೆ ಕೆಳಗೆ ಚಲಸುವ ಸಾಮರ್ಥ್ಯವುಳ್ಳ ದೂರದರ್ಶಕ. ಕೆಲವು ಅಡಿಗಳ ಅಂತರದಲ್ಲಿ ಉಂಟಾಗುವ ಸ್ಥಾನಪಲ್ಲಟಗಳನ್ನು ಅಳೆಯಲು ಸಾಮಾನ್ಯವಾಗಿ ಇದನ್ನು ಬಳಸುತ್ತಾರೆ.
ಋಣ ಧ್ರುವ ಅಥವಾ ಋಣ ವಿದ್ಯುತ್‌ಧ್ರುವ _ ತಾಪ ವಿದ್ಯುದಣು ಕವಾಟದಲ್ಲಿ (ಥರ್ಮಿಯಾನಿಕ್ ವಾಲ್ವ್) ಎಲೆಕ್ಟ್ರಾನುಗಳನ್ನು ಹೊರಸೂಸುವ ಆಕರ.
ಋಣಧ್ರುವ ಕಿರಣಗಳು – ವಿದ್ಯುತ್ ಸೂಸುವ ಒಂದು ನಳಿಗೆಯಲ್ಲಿ ಅತ್ಯಂತ ಕಡಿಮೆ ಒತ್ತಡ ಇದ್ದು, ಅದರ ವಿದ್ಯುತ್ ಧ್ರುವಗಳ ನಡುವೆ ಹೆಚ್ಚಿನ ಚಾಲಕ ಶಕ್ತಿಯನ್ನು ಕೊಟ್ಟಾಗ, ಋಣಧ್ರುವದಿಂದ ಹೊರಸೂಸುವಂತಹ ಎಲೆಕ್ಟ್ರಾನುಗಳ ಕಿರಣಗಳು.
ಋಣಧ್ರುವ ಕಿರಣ ಬಿಂಬದರ್ಶಕ – ವಿದ್ಯುತ್‌ಪ್ರವಾಹವನ್ನು ಅಥವಾ ವಿದ್ಯುದಂಶವನ್ನು ಒಂದು ಪ್ರತಿದೀಪಕ (ಫ್ಲೋರೋಸೆಂಟ್) ಪರದೆಯ ಮೇಲೆ ತೋರಿಸುವ ಒಂದು ಉಪಕರಣ.
ಧನ ವಿದ್ಯುದಣು – ಧನ ವಿದ್ಯುದಂಶವುಳ್ಳ ಒಂದು ಪರಮಾಣು.