ಇಳಿಜಾರು ಮಾಪಕ – ಅಯಸ್ಕಾಂತೀಯ ಇಳಿಜಾರನ್ನು ಅಳೆಯಲು ಬಳಸುವ ಉಪಕರಣ.
ವಿನಾಶ – ಒಂದು ವಿಕಿರಣ ಬೀಜಕೇಂದ್ರವು ಇನ್ನೊಂದು ವಿಕಿರಣ ಬೀಜಕೇಂದ್ರವಾಗಿ ಮಾರ್ಪಾಟುಗೊಳ್ಳುವುದು.
ಡಾಲ್ಟನ್ ರ ನಿಯಮ – ಅನಿಲಗಳ ಒಂದು ಮಿಶ್ರಣದ ಒತ್ತಡವು ಆ ಮಿಶ್ರಣದಲ್ಲಿನ ಪ್ರತಿ ಬಿಡಿ ಅನಿಲದ ಒತ್ತಡಗಳ ಒಟ್ಟು ಮೊತ್ತವಾಗಿರುತ್ತದೆ ಎಂದು ಸೂಚಿಸುವ ನಿಯಮವಿದು.
ಮಗಳು – ಒಂದು ಬೀಜಕೇಂದ್ರದ ವಿಭಜನೆಯಿಂದ ಹುಟ್ಟಿದ ಇನ್ನೊಂದು ಬೀಜಕೇಂದ್ರ.
ಡಿ ಬ್ರಾಗ್ಲಿ ಅಲೆ – ಪ್ರೋಟಾನು ಅಥವಾ ಎಲೆಕ್ಟ್ರಾನಿನಂತಹ ಒಂದು ಕಣಕ್ಕೆ ಸಂಬಂಧಿಸಿದ ಅಲೆ.1924 ರಲ್ಲಿ ಲೂಯಿಸ್ ಡಿ ಬ್ರಾಗ್ಲಿಯವರು ಇದರ ಪ್ರಸ್ತಾಪ ಮಾಡಿದರು.
ಅತಿ ಕುಗ್ಗಿದ – ಗ್ಯಾಲ್ವನೋಮೀಟರಿನಂತಹ ಉಪಕರಣದಲ್ಲಿನ ಆಂದೋಲನಗಳು ಅತ್ಯಂತ ಕಡಿಮೆ ಸಮಯದಲ್ಲಿ ನಿಂತು ಹೋದಾಗ ಅದನ್ನು ಅತಿ ಕುಗ್ಗಿದ ಸ್ಥಿತಿಯದ್ದು ಎನ್ನುತ್ತಾರೆ.
ಭೂ ಸಂಪರ್ಕ – ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಬಳಸುವ ಪದವಿದು. ಯಾವುದೇ ಒಂದು ವಾಹಕಕ್ಕೂ (ವಿದ್ಯುತ್ ಹರಿಯುತ್ತಿರುವ) ಭೂಮಿಗೂ ಕಡಿಮೆ ಪ್ರತಿರೋಧವುಳ್ಳ ಸಂಪರ್ಕ ಕಲ್ಪಿಸಿರುವ ಸನ್ನಿವೇಶ ಇದು.