Diffusion

ಚೆಲ್ಲಾಪಿಲ್ಲಿ ಚಲನೆ – ಒಂದು‌ ವಸ್ತುವಿನಲ್ಲಿನ ಅಣುಗಳು ತಾಪದ ಕಾರಣದಿಂದ ಚೆಲ್ಲಾಪಿಲ್ಲಿಯಾಗಿ ಚಲಿಸುವುದು.

Diffraction

ಬೆಳಕಿನಲೆಯ ಹಬ್ಬುವಿಕೆ – ಬೆಳಕಿನ ಕಿರಣ ಪುಂಜವೊಂದು ಕಿರಿದಾದ ಕಿಂಡಿಯೊಂದರ ಮೂಲಕ ಹಾಯ್ದು ಪರದೆಯೊಂದರ ಮೇಲೆ ಬೀಳುವಂತೆ ಮಾಡಿದಾಗ, ಉಜ್ವಲವಾಗಿ ಮತ್ತು ಮಸುಕಾದ ಪರ್ಯಾಯ ಪಟ್ಟಿಗಳಾಗಿ ಹಬ್ಬುವ ವಿದ್ಯಮಾನ. 

Differential pulley

ರಾಟೆ ವ್ಯವಸ್ಥೆ – ಎರಡು ರಾಟೆಗಳು ಮತ್ತು ಕೊನೆಯಿಲ್ಲದ ಸರಪಣಿಯನ್ನು ಬಳಸಿಕೊಂಡು ಕೆಲಸ ಮಾಡುವ ಒಂದು‌ ಯಾಂತ್ರಿಕ ವ್ಯವಸ್ಥೆ.

Dielectric

ಅವಾಹಕ – ತನ್ನೊಳಗೆ ವಿದ್ಯುತ್ತನ್ನು ಹರಿಯಲು ಬಿಡದ ವಸ್ತು.

Dichroism

ದ್ವಿವರ್ಣತೆ – ಟೌರ್ಮಲೈನ್ ತರಹದ  ಕೆಲವು ಹರಳುಗಳಲ್ಲಿ ಕಾಣುವಂತಹ ಒಂದು ಗುಣ, ಬೆಳಕಿನ‌ ಕೆಲವು ಕಿರಣಗಳನ್ನು ಹೀರಿಕೊಂಡು, ಇನ್ನು ಕೆಲವನ್ನು ತಮ್ಮ ಮೂಲಕ ಸಾಗಿಹೋಗಲು ಬಿಡುವಂತಹ ಗುಣ. ಇದರಿಂದಾಗಿ ಒಂದೇ ಹರಳಿನಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣ ಕಾಣುತ್ತದೆ.

Diascope

ಚಿತ್ರಯಂತ್ರ – ಅರೆಪಾರದರ್ಶಕ ವಸ್ತುಗಳನ್ನು ಬಿಂಬಿಸಲು ಬಳಸುವ ಒಂದು ದೃಶ್ಯೋಪಕರಣ. 

Diaphragm

ತಡೆಗೋಡೆ – ದೃಶ್ಯೋಪಕರಣಗಳಲ್ಲಿ  ಕ್ಯಾಮರಾ ಕಿಂಡಿಯೊಳಗೆ ಬರುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಸಾಧನ.

Diamagentism 

ಕಾಂತವಿರೋಧಿ‌ ಗುಣ – ತುಂಬಾ ದುರ್ಬಲವಾದ ಕಾಂತಗುಣ ಇದು.‌  ಬಿಸ್ಮತ್ ಮತ್ತು ಸೀಸದಂತಹ ಕೆಲವು ಮೂಲವಸ್ತಗಳು ಅಯಸ್ಕಾಂತ ಗುಣವನ್ನು ವಿರೋಧಿಸುವ ನೆಲೆ. 

Dextrorotary 

ಬಲಮುಖೀ ತಿರುಗಣೆ – ಮೇಲ್ಮೈ ಧ್ರುವೀಕೃತ ಬೆಳಕನ್ನು ಎಡದಿಂದ ಬಲಕ್ಕೆ ರಾಸಾಯನಿಕ ಸಂಯುಕ್ತವೊಂದರ ಮೂಲಕ ತಿರುಗಿಸುವುದು.

Dew

ಇಬ್ಬನಿ‌ – ಗಾಳಿಯ ಉಷ್ಣತೆ ಕಡಿಮೆಯಾಗಿ ಅದರಲ್ಲಿನ ಆವಿಯ ಪ್ರಮಾಣವು ಗರಿಷ್ಠ ಆರ್ದ್ರತೆಗೆ ತಲುಪಿದಾಗ ನೀರು ಪಡೆವ ಹನಿರೂಪ.

Page 2 of 3

Kannada Sethu. All rights reserved.