Deutarium 

ಡ್ಯುಟೇರಿಯಂ‌ – ಜಲಜನಕದ ಒಂದು ಸಮರೂಪಿ ಇದು.‌ ಇದರ ದ್ರವ್ಯರಾಶಿ ಸಂಖ್ಯೆ 2.  ಇದನ್ನು ಭಾರದ ಜಲಜನಕ ಎಂದೂ‌ ಕರೆಯುತ್ತಾರೆ. ಸಹಜ ಜಲಜನಕದಲ್ಲಿ‌ ಡ್ಯುಟೇರಿಯಂನ ಪ್ರಮಾಣ 0.0156%.

Detonation

ಆಸ್ಫೋಟನ – ಅತಿ ಹೆಚ್ಚು ವೇಗವುಳ್ಳ ಆಘಾತ ತರಂಗಗಳೊಡನೆ ಆಗುವಂತಹ ಅತಿ‌ ಕ್ಷಿಪ್ರ ದಹನಕ್ರಿಯೆ( ಬಾಂಬುಗಳಲ್ಲಿ ಆಗುವಂತೆ).

Distillation 

ಭಟ್ಟಿ ಇಳಿಸುವಿಕೆ- ಒಂದು‌ ದ್ರವವನ್ನು ಆವಿಯ ರೂಪಕ್ಕೆ ಪರಿವರ್ತಿಸುವ ಹಾಗೂ ಅದು‌ ಮತ್ತೆ ತಂಪುಗೊಂಡು ದ್ರವರೂಪಕ್ಕೆ ಬಾಷ್ಪೀಕರಣಗೊಳ್ಳುವಂತೆ ಮಾಡುವ ಪ್ರಕ್ರಿಯೆ. ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಿ, ಆ ನೀರನ್ನು ಕುಡಿಯಲು ಯೋಗ್ಯವಾಗಿಸಲು ಈ‌ ವಿಧಾನವನ್ನು ಬಳಸುತ್ತಾರೆ. 

Depth of field

ದೃಷ್ಟಿಕ್ಷೇತ್ರದ ಹರಹು‌ – ಛಾಯಾಗ್ರಹಕ‌ ಯಂತ್ರ (ಕ್ಯಾಮೆರಾ) ಅಥವಾ ಅಂತಹ ದೃಶ್ಯಸಂಬಂಧೀ ಉಪಕರಣಗಳು ಒಂದು ವಸ್ತುವಿನ‌ ಸುಸ್ಪಷ್ಟ ಬಿಂಬವನ್ನು ಉತ್ಪಾದಿಸುವಷ್ಡು ವಿಸ್ತಾರದ ಶ್ರೇಣಿ. 

Depolarizer

ಧ್ರುವೀಕರಣ ನಿವಾರಕ – ವಿದ್ಯುತ್ ರಾಸಾಯನಿಕ ( ವೋಲ್ಟಾಯಿಕ್) ಕೋಶದಲ್ಲಿ ಧ್ರುವೀಕರಣವನ್ನು ಮ್ಯಾಂಗನೀಸ್ ಡೈಯಾಕ್ಸೈಡ್ ನಂತಹ ವಸ್ತುವನ್ನು ಬಳಸಲಾಗುತ್ತದೆ.

Page 3 of 3

Kannada Sethu. All rights reserved.