Helium  Neon laser

ಹೀಲಿಯಂ ನಿಯಾನ್ ಲೇಸರ್ – ಹೀಲಿಯಂ ‌ನಿಯಾನ್ ತೀಕ್ಷ್ಣ ಬೆಳಕು‌ – ಹೀಲಿಯಂ ಮತ್ತು ನಿಯಾನ್ ಅನಿಲಗಳನ್ನು ಬಳಸುವ ಪರಮಾಣೀಯ ತೀಕ್ಷ್ಣ ಬೆಳಕು.

Helix

ಹೆಲಿಕ್ಸ್ – ಸುರುಳಿ – ನೈಸರ್ಗಿಕವಾಗಿ ದೊರೆಯುವ ಅನೇಕ ದೊಡ್ಡ ಗಾತ್ರದ ಅಣುಗಳು, ಉದಾಹರಣೆಗೆ, ಪ್ರೋಟೀನುಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳು ಸುರುಳಿಯಾಕಾರದಲ್ಲಿರುತ್ತವೆ.

Helioscope

ಹೀಲಿಯೋಸ್ಕೋಪ್ – ಸೂರ್ಯದರ್ಶಕ – ಸೂರ್ಯನನ್ನು ಗಮನಿಸಲು ಬಳಸುವ ದೂರದರ್ಶಕ. ಸೂರ್ಯನ ತೀಕ್ಷ್ಣಪ್ರಕಾಶದಿಂದಾಗಿ ಗಮನಿಸುವವರ ಕಣ್ಣುಗಳಿಗೆ ಅಪಾಯವಾಗದಂತೆ ಇದನ್ನು ವಿನ್ಯಾಸ ಮಾಡಿರುತ್ತಾರೆ.

Heliocentric

ಹೀಲಿಯೋಸೆಂಟ್ರಿಕ್ – ಸೂರ್ಯಕೇಂದ್ರಿತ – 

ಅ. ಸೂರ್ಯನನ್ನು ಕೇಂದ್ರವಾಗಿ‌ ಉಳ್ಳಂಥದ್ದು

ಆ. ಸೂರ್ಯನ ಕೇಂದ್ರದಿಂದ ಅಳೆಯಲ್ಪಟ್ಟದ್ದು

Heliocentric

ಹೀಲಿಯೋಮೀಟರ್ – ಸೂರ್ಯಮಾಪಕ‌ – ವಿಶೇಷ ವಿನ್ಯಾಸದಿಂದ ಸಿದ್ಧವಾದ, ಸೀಳಿದ ಮಸೂರವನ್ನು ಹೊಂದಿರುವ ದೂರದರ್ಶಕ. ಇದನ್ನು ಸೂರ್ಯನ ವ್ಯಾಸವನ್ನು ಮತ್ತು ನಕ್ಷತ್ರಗಳ ನಡುವಿನ ದೂರವನ್ನು ಅಳೆಯಲು ಬಳಸುತ್ತಾರೆ. 

Helical antenna

ಹೆಲಿಕಲ್ ಆಂಟೆನಾ – ಸುರುಳಿಯಾಕಾರದ ಆಕರ್ಷಣತಂತಿ‌ – ಸುರುಳಿಯಾಕಾರವನ್ನು ಹೊಂದಿರುವ ಒಂದು ಆಕರ್ಷಣ ತಂತಿ.

Heisenberg’s uncertainty principle

ಹೈಸನ್ಬರ್ಗ್ಸ್ ಅನ್ಸರ್ಟೈನಿಟಿ ಪ್ರಿನ್ಸಿಪ್ಲ್ – ಹೈಸನ್ ಬರ್ಗ್ ರ ಅನಿಶ್ಚಿತತಾ ಸಿದ್ಧಾಂತ ‌- ಪರಮಾಣುವಿನೊಳಗಿರುವ ಒಂದು ಕಣದ ಸ್ಥಾನಬಿಂದು ಮತ್ತು ದ್ರವ್ಯವೇಗವನ್ನು ಏಕಕಾಲಕ್ಕೆ ಹಾಗೂ ಕರಾರುವಾಕ್ಕಾಗಿ ಅಳೆಯಲು ಸಾಧ್ಯವೇ ಇಲ್ಲ. ಸರಳವಾಗಿ ಹೇಳಬೇಕೆಂದರೆ ಒಂದು ಕಣದ ಸ್ಥಳ ಮತ್ತು ವೇಗವನ್ನು ಏಕಕಾಲಕ್ಕೆ ಗೊತ್ತುಪಡಿಸಿಕೊಳ್ಳಲು ಸಾಧ್ಯ ಇಲ್ಲ.

Hecto

ಹೆಕ್ಟೊ – ಹೆಕ್ಟೊ – 10 ಎಂಬ ಸಂಖ್ಯೆಯ 2ರ  ಘಾತವನ್ನು ಸೂಚಿಸುವ ಪದ. 

Heavy water

ಹೆವಿ ವಾಟರ್ – ತನ್ನಲ್ಲಿ‌, ಜಲಜನಕದ ಜಾಗದಲ್ಲಿ( ಅಂದರೆ ಅದರ ಬದಲಾಗಿ) ಡ್ಯೂಟೇರಿಯಂ ಅನ್ನು ಹೊಂದಿರುವ ಜಲ‌ ಅಥವಾ ನೀರು.  ಪ್ರಕೃತಿ ಸಹಜ ನೀರಿನಲ್ಲಿ ಭಾರಜಲದ ಪ್ರಮಾಣ 1:5000.

Heavy Hydrogen or Deuterium

ಹೆವಿ‌ ಹೈಡ್ರೋಜನ್ ಆರ್ ಡ್ಯೂಟೇರಿಯಂ – ಭಾರ ಜಲಜನಕ‌ ಅಥವಾ ಡ್ಯೂಟೇರಿಯಂ‌ – ದ್ರವ್ಯರಾಶಿ ಸಂಖ್ಯೆ 2 ಆಗಿರುವ, ಜಲಜನಕದ ಒಂದು ಸಮರೂಪಿ.

Page 1 of 2

Kannada Sethu. All rights reserved.