ಲೆಡ್ ಆಸಿಡ್ ಅಕ್ಯುಮುಲೇಟರ್ – ಸೀಸ – ಆಮ್ಲ ಸಂಗ್ರಾಹಕ ಕೋಶ – ವಾಹನಗಳ ವಿದ್ಯುತ್ ಸಂಗ್ರಾಹಕ ಕೋಶಗಳಲ್ಲಿ ಬಳಸುವಂತಹ ಒಂದು ರೀತಿಯ ವಿದ್ಯುತ್ ಸಂಗ್ರಾಹಕ ಕೋಶ ಇದು. ಇದರಲ್ಲಿ ಸೀಸದ ಹಾಳೆಗಳನ್ನು ವಿದ್ಯುದ್ವಾರಗಳಾಗಿ ಮತ್ತು ದುರ್ಬಲ ಗಂಧಕಾಮ್ಲವನ್ನು ವಿದ್ಯುತ್ ವಿಭಜಕ ಕೋಶವಾಗಿ ಬಳಸುತ್ತಾರೆ.
ಲೀಕೇಜ್ ಫ್ಲಕ್ಸ್ – ಸೋರಿಕೆ ಶಕ್ತಿಪ್ರವಾಹ – ಕಾಂತೀಯ ವಿದ್ಯುನ್ಮಂಡಲವು ಇರುವಂತಹ ವಿದ್ಯುತ್ ಯಂತ್ರಗಳಲ್ಲಿ ಮತ್ತು ಪರಿವರ್ತಕಗಳಲ್ಲಿ ನಷ್ಡವಾಗುವಂತಹ ವಿದ್ಯುತ್ ಪ್ರವಾಹ ಇದು.
ಲೀಕೇಜ್ ಕರೆಂಟ್ – ಸೋರಿಕೆ ವಿದ್ಯುತ್ – ವಿದ್ಯುತ್ ಸಾಮರ್ಥ್ಯವು ಒಂದು ವಿದ್ಯುತ್ ನಿರೋಧಕದ ಸಂಪರ್ಕಕ್ಕೆ ಬಂದಾಗ, ತುಲನೆಯಲ್ಲಿ ಕಡಿಮೆ ಪ್ರಮಾಣದ ಹಾಗೂ ಇಂಥದ್ದೇ ದಾರಿ ಎಂದಿಲ್ಲದೆ ಹರಿಯುವ ಒಂದಿಷ್ಟು ವಿದ್ಯುತ್ತು ಇದು.
ಲೀಕೇಜ್ – ಸೋರಿಕೆ – ಉತ್ತಮ ನಿರೋಧಕತೆಯ ಕೊರತೆಯಿಂದಾಗಿ ವಿದ್ಯುತ್ ನಷ್ಟವಾಗುವುದು.
ಎಲ್ ಸಿ ಆರ್ ಸರ್ಕ್ಯೂಟ್ – ಎಲ್ ಸಿ ಆರ್ ವಿದ್ಯುನ್ಮಂಡಲ – ಇದೊಂದು ಸರಳವಾದ, ಪಾಳಿಯುತ ವಿದ್ಯುನ್ಮಂಡಲ. ಇದರಲ್ಲಿ L – ವಿದ್ಯುತ್ ಪ್ರೇರಕತೆ, C – ವಿದ್ಯುತ್ ಸಾಮರ್ಥ್ಯ ಹಾಗೂ R – ಪ್ರತಿರೋಧ – ಈ ಮೂರೂ ಒಂದೇ ಸರಣಿಯಲ್ಲಿ ಇರುತ್ತವೆ.
ಲಾರೆನ್ಶಿಯಂ, ಸಿಂಬಲ್ Lr – ಲಾರೆನ್ಶಿಯಂ, ಸಂಕೇತ Lr – ಆಕ್ಟಿನಾಯ್ಡ್ ಗಳ ಸರಣಿಗೆ ಸೇರುವ, ಯುರೇನಿಯಂನ ಆಚೆ ಇರುವ ಒಂದು ಲೋಹೀಯ ಮೂಲವಸ್ತು. ಇದರ ಪರಮಾಣು ಸಂಖ್ಯೆ 103.
ಲಾಂಚ್ ವೆಹಿಕಲ್ – ಉಡ್ಡಯನ ವಾಹನ – ಒಂದು ಮಾನವ ನಿರ್ಮಿತ ಉಪಗ್ರಹ, ಬಾಹ್ಯಾಕಾಶ ಹುಡುಕು ಉಪಕರಣ ಅಥವಾ ಅಥವಾ ಬಾಹ್ಯಾಕಾಶ ನಿಲ್ದಾಣಗಳನ್ನು ಭೂಮಿಯ ಆಚೆ ಹಾರಿಸಲು ಬಳಸುವ ರಾಕೆಟ್ಟು ಅಥವಾ ಬಾಹ್ಯಾಕಾಶ ನೌಕೆ.
ಲೇಟಸ್ ರೆಕ್ಟಮ್ – ಶಂಕುಕೇಂದ್ರ ರೇಖೆ – ಒಂದು ಶಂಕುವಿನ ಕೇಂದ್ರದ ಮೂಲಕ ಹಾದುಹೋಗುವ ರೇಖೆ.
Like us!
Follow us!