Leakage

ಲೀಕೇಜ್ – ಸೋರಿಕೆ – ಉತ್ತಮ ನಿರೋಧಕತೆಯ ಕೊರತೆಯಿಂದಾಗಿ ವಿದ್ಯುತ್ ನಷ್ಟವಾಗುವುದು.

LCR circuit 

ಎಲ್ ಸಿ ಆರ್ ಸರ್ಕ್ಯೂಟ್ – ಎಲ್ ಸಿ ಆರ್ ವಿದ್ಯುನ್ಮಂಡಲ – ಇದೊಂದು ಸರಳವಾದ, ಪಾಳಿಯುತ ವಿದ್ಯುನ್ಮಂಡಲ. ಇದರಲ್ಲಿ L – ವಿದ್ಯುತ್ ಪ್ರೇರಕತೆ, C – ವಿದ್ಯುತ್ ಸಾಮರ್ಥ್ಯ ಹಾಗೂ R – ಪ್ರತಿರೋಧ – ಈ‌ ಮೂರೂ ಒಂದೇ ಸರಣಿಯಲ್ಲಿ ಇರುತ್ತವೆ.

ಕನ್ನಡ ಗಾದೆಮಾತು – ಮರ ಹತ್ತುವವನನ್ನು‌ ಕೈಗೆಟಕುವವೆರೆಗೆ ಮಾತ್ರ ನೂಕಬಹುದು.

ನಾವು ಇನ್ನೊಬ್ಬರಿಗೆ ಅಂದರೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮತ್ತು ನಮ್ಮ ಸಹಾಯವನ್ನು ಬಯಸಿ ಬಂದವರಿಗೆ ಮಾಡುವಂತಹ ಸಹಾಯಕ್ಕೆ ಒಂದು ಮಿತಿ ಇರುತ್ತದೆ. ಬೇರೆಯವರು ನಮಗೆ ಮಾಡಬಹುದಾದ ವಿಷಯದಲ್ಲೂ ಇದು ನಿಜ. ಮರ ಹತ್ತುವವರಿಗೆ ನಾವು, ನಮ್ಮ ಕೈಗೆ ಅವರು ಎಟಕುವ ತನಕ ಮಾತ್ರ ಅವರನ್ನು ಮೇಲಕ್ಕೆ ನೂಕಬಹುದು. ಆಮೇಲೆ  ಸ್ವತಃ ಅವರೇ ಮೇಲೆ ಮೇಲೆ ಹತ್ತಬೇಕು‌. ಈ ವಿವೇಕದ ಮಾತನ್ನು ನೆನಪಿಟ್ಟುಕೊಂಡರೆ ನಾವು ಸಹಾಯ ಪಡೆಯುವುದರಲ್ಲಿ ಮತ್ತು ಕೊಡುವುದರಲ್ಲಿರುವ ಮಿತಿ ನಮಗೆ ಅರ್ಥ ಆಗುತ್ತದೆ. Kannada proverb – […]

ಅಡಿಗರ ಹುಟ್ಟುಹಬ್ಬದ ದಿನ ಅವರ ಶಬ್ದ ಪ್ರೀತಿಯ ನೆನಪು

ಇಂದು ಫೆಬ್ರವರಿ 18. ಕವಿ ಅಡಿಗರ ಜನ್ಮ ದಿನ( ಜನನ – 18-02-2018). ಅಡಿಗರು ಅಂದರೆ ನಮ್ಮ ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಮುಖ್ಯರಾದ ಮೊಗೇರಿ ಗೋಪಾಲಕೃಷ್ಣ ಅಡಿಗರು. ಇವರು ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳನ್ನು ಕರಗತ ಮಾಡಿಕೊಂಡಿದ್ದವರು‌. ಅವರ ಕವಿತೆಗಳೆಂದರೆ ಅಪರೂಪದ ಶಬ್ಧಗಳ ಖಜಾನೆಯೇ ಸರಿ. ಒಂದು ಉದಾಹರಣೆ ಕೊಡುವುದಾದರೆ, ಅವರ ಕವಿತೆಯೊಂದರಲ್ಲಿ ‘ಷಾಪಸಂದ್’ ಎಂಬ ಪದ ಬರುತ್ತದೆ. ಹಿಂದೊಮ್ಮೆ ಜ್ಞಾನಭಾರತಿಯಲ್ಲಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ನಾನು ಆ ಕವಿತೆಯನ್ನು ಪಾಠ ಮಾಡಬೇಕಾಗಿದ್ದುದರಿಂದ,  ‘ಷಾಪಸಂದ್’ ಪದದ ಅರ್ಥ […]

Lawrencium, symbol Lr

ಲಾರೆನ್ಶಿಯಂ, ಸಿಂಬಲ್ Lr –  ಲಾರೆನ್ಶಿಯಂ, ಸಂಕೇತ Lr – ಆಕ್ಟಿನಾಯ್ಡ್ ಗಳ ಸರಣಿಗೆ ಸೇರುವ,  ಯುರೇನಿಯಂನ ಆಚೆ ಇರುವ ಒಂದು ಲೋಹೀಯ ಮೂಲವಸ್ತು. ಇದರ ಪರಮಾಣು ಸಂಖ್ಯೆ 103. 

Launch vehicle

ಲಾಂಚ್ ವೆಹಿಕಲ್ – ಉಡ್ಡಯನ ವಾಹನ – ಒಂದು ಮಾನವ ನಿರ್ಮಿತ ಉಪಗ್ರಹ, ಬಾಹ್ಯಾಕಾಶ ಹುಡುಕು ಉಪಕರಣ ಅಥವಾ ಅಥವಾ ಬಾಹ್ಯಾಕಾಶ ನಿಲ್ದಾಣಗಳನ್ನು ಭೂಮಿಯ ಆಚೆ ಹಾರಿಸಲು ಬಳಸುವ ರಾಕೆಟ್ಟು ಅಥವಾ ಬಾಹ್ಯಾಕಾಶ ನೌಕೆ.

Latus rectum

ಲೇಟಸ್ ರೆಕ್ಟಮ್ – ಶಂಕುಕೇಂದ್ರ ರೇಖೆ – ಒಂದು ಶಂಕುವಿನ ಕೇಂದ್ರದ ಮೂಲಕ ಹಾದುಹೋಗುವ ರೇಖೆ‌.

Lattice vinbrations

ಲ್ಯಾಟಿಸ್ ವೈಬ್ರೇಷನ್ಸ್ – ಜಾಲಕ ಕಂಪನಗಳು‌ – ಪರಮಾಣುಗಳು, ವಿದ್ಯುದಣುಗಳು ಮತ್ತು ಅಣುಗಳು ಹರಳು ಜಾಲಕದಲ್ಲಿ ನಿಯತಕಾಲಿಕವಾಗಿ ಕಂಪಿಸುವುದು. ಕಾಯಿಸಿದಾಗ ಕಂಪನಗಳು ತುಂಬ ಹೆಚ್ಚಾಗಿ, ಈ ವಸ್ತುಕಣಗಳು ಅದೆಷ್ಟು ಕಂಪಿಸುತ್ತವೆ ಅಂದರೆ ಹರಳು ರಚನೆ ಮುರಿಯುತ್ತದೆ.  

Lattice energy

ಲ್ಯಾಟಿಸ್ ಎನರ್ಜಿ‌- ಜಾಲಕ‌ ಶಕ್ತಿ – ಒಂದು ಹರಳು ಜಾಲಕದ ಸ್ಥಿರತೆಯ ಅಳತೆ ಇದು‌. ಇದನ್ನು ಅನಂತ ದೂರಗಳಲ್ಲಿರುವ ಪರಮಾಣುಗಳು, ಅಣುಗಳು ಹಾಗೂ ವಿದ್ಯುದಣುಗಳನ್ನು ಹತ್ತಿರ ತಂದು ಹರಳನ್ನು ರೂಪಿಸಹೊರಟಾಗ ಬಿಡುಗಡೆಯಾಗುವ ಶಕ್ತಿ ಎಂದು ತಿಳಿಯಲಾಗುತ್ತದೆ.

ಕನ್ನಡ ಗಾದೆಮಾತು – ವನವೆಲ್ಲ‌ ಸಿರಿಗಂಧವ? 

ಸಿರಿಗಂಧ( ಶ್ರೀಗಂಧ) ಎಂಬುದು‌ ನಮಗೆಲ್ಲ ಗೊತ್ತಿರುವಂತೆ ದಕ್ಷಿಣ ಕರ್ನಾಟಕದಲ್ಲಿ (ಹಾಗೂ ಒಟ್ಟು ದಕ್ಷಿಣ ಏಷ್ಯಾದ ಕೆಲವು ಪ್ರದೇಶಗಳಲ್ಲಿ) ಬೆಳೆಯುವ ಒಂದು ವಿಶೇಷವಾದ ಮರ. ಇದರ ಚಿರಂತನ ಸುಗಂಧವು ಶತಶತಮಾನಗಳಿಂದ ಜಗತ್ಪ್ರಸಿದ್ಧವಾಗಿದೆ.  ನಮ್ಮ ಮೈಸೂರನ್ನು ಗಂಧದ ಬೀಡು ಅನ್ನುತ್ತಾರಲ್ಲವೆ? ಆದರೆ ಕಾಡಿನಲ್ಲಿ ಬೆಳೆಯುವ ಎಲ್ಲ ಮರಗಳೂ ಶ್ರೀಗಂಧವಾಗಿರುವುದಿಲ್ಲ. ಹೀಗೆಯೇ ವ್ಯಕ್ತಿಗಳಲ್ಲಿ ಎಲ್ಲರೂ ಒಂದೇ ರೀತಿಯ ಶ್ರೇಷ್ಠತೆ ಹೊಂದಿರುವುದಿಲ್ಲ. ಎಲ್ಲ ಲೋಹಗಳೂ ಚಿನ್ನವಲ್ಲ. ಎಲ್ಲ ಹರಳುಗಳೂ ವಜ್ರವಲ್ಲ‌. ಅತ್ಯುತ್ತಮವಾದುದು ಅಪರೂಪವಾಗಿರುತ್ತದೆ‌. ಜೀವನದ ಈ ಸತ್ಯವನ್ನು ಮೇಲಿನ ಗಾದೆಮಾತು ತುಂಬ ಚೆನ್ನಾಗಿ […]

Page 2 of 3

Kannada Sethu. All rights reserved.