ಅಂತರ್ಜಾಲ ಆಧಾರಿತ ಇಂದಿನ ಕಾರ್ಯಪ್ರಪಂಚದಲ್ಲಿ ನಾವು ಬಹಳವಾಗಿ ಬಳಸುವ ಎರಡು ಪದಗಳು – ಅಪ್ಲೋಡ್ ಹಾಗೂ ಡೌನ್ಲೋಡ್. ಒಂದು ನಿರ್ದಿಷ್ಟ ದಾಖಲೆ, ಬರವಣಿಗೆ, ಚಿತ್ರವನ್ನು ಯಾವುದಾದರೂ ಅಂತರ್ಜಾಲ ತಾಣಕ್ಕೆ ಏರಿಸುವುದು, ಸೇರಿಸುವುದು ‘ಅಪ್ಲೋಡ್’ ಅನ್ನಿಸಿಕೊಳ್ಳುತ್ತೆ. ಅಲ್ಲವೆ? ಈ ಪದಕ್ಕೆ ‘ಮೇಲ್ಸಲ್ಲಿಕೆ’ ಎಂಬ ಕನ್ನಡ ಪದ ಸೂಕ್ತವಾಗಬಹುದೆ? ‘ಮೇಲ್ಸಲ್ಲಿಕೆ’ ಪದವನ್ನು ನಾನು ಕೆಲವು ಸಲ ಬಳಸುವ ಪ್ರಯತ್ನ ಮಾಡಿದ್ದೇನೆ. ಹಾಗೆಯೇ ಯಾವುದಾದರೂ ಜಾಲತಾಣದಿಂದ ಅಥವಾ ಮಿಂಚಂಚೆ ವಿಳಾಸದಿಂದ ಒಂದು ನಿರ್ದಿಷ್ಟ ದಾಖಲೆ, ಬರವಣಿಗೆ ಅಥವಾ ಚಿತ್ರವನ್ನು ನಮ್ಮ ಗಣಕಯಂತ್ರ […]
ಎಚ್.ಎಫ್.( ಹೈ ಫ್ರೀಕ್ವೆನ್ಸಿ) ವೆಲ್ಡಿಂಗ್ – ಉಚ್ಚ ಆವರ್ತನ ಬೆಸುಗೆ – ತಾಪ ಪ್ಲಾಸ್ಟಿಕ್ ವಸ್ತುಗಳಿಗೆ ಬೆಸುಗೆ ಹಾಕುವ ವಿಧಾನ. ಇದರಲ್ಲಿ ವಸ್ತುಗಳನ್ನು ಒಟ್ಟಿಗೆ ಬೆಸೆಯುವ ತಾಪವನ್ಜು ವಿದ್ಯುತ್ ಕಾಂತೀಯ ಆವರ್ತನ ವಿಕಿರಣದಿಂದ ಉತ್ಪತ್ತಿ ಮಾಡಲಾಗುತ್ತದೆ.
ಹಿಸ್ಟಿರಿಸಿಸ್ ಲಾಸ್ – ವಿಲಂಬನ ನಷ್ಟ – ವಿಲಂಬನ ಪರೊಣಾಮದಿಂದಾಗಿ ಉಂಟಾಗುವ ಶಕ್ತಿನಷ್ಟ.
ಹಿಸ್ಟಿರಿಸಿಸ್ ಲೂಪ್ – ಉಳಿಕೆ ಪರಿಣಾಮ ( ವಿಲಂಬನ) ಸುತ್ತು – ಪ್ರಾರಂಭದಲ್ಲಿ ನಿಷ್ಕಾಂತಗೊಳಿಸಿದ ಪ್ರಬಲ ಕಾಂತವಸ್ತುವೊಂದನ್ನು ಕಾಂತಕ್ಷೇತ್ರ ವ್ಯತ್ಯಾಸಗಳ ಆವರ್ತನಗಳಿಗೆ ಒಳಪಡಿಸಿದಾಗ ಉಂಟಾಗುವ ಒಂದು ಕಾಂತಮಂಡಲ.
ಹಿಸ್ಟಿರಿಸಿಸ್ – ಉಳಿಕೆ ಪರಿಣಾಮ ( ವಿಲಂಬನ) – ಯಾವುದಾದರೊಂದು ಪರಿಣಾಮವುಂಟಾದಾಗ ಅದು ಮುಗಿದ ನಂತರವೂ ಉಳಿಯುವ ‘ಉಳಿಕೆ ವಿಷಯ’. ಉದಾಹರಣೆಗೆ, ಪ್ರಬಲ ಕಾಂತ ವಸ್ತುಗಳನ್ನು ಕಾಂತಗೊಳಿಸಿಯಾದ ಮೇಲೆ, ಆ ಕಾಂತತ್ವವನ್ನು ತೆಗೆದ ಮೇಲೂ ಅವುಗಳಲ್ಲಿ ಸ್ವಲ್ಪ ಕಾಂತೀಯತೆ ಉಳಿದಿರುತ್ತದೆ. ಇದನ್ನು ಉಳಿಕೆ ಪರಿಣಾಮ ಎನ್ನುತ್ತಾರೆ.
ಹೈಪರ್ಸಾನಿಕ್ – ಶಬ್ದಾತೀತ – ಶಬ್ದಾತೀತ ಪ್ರವಾಹಗಳಿಗೆ ಸಂಬಂಧ ಪಟ್ಟದ್ದು. ಮಾಚ್ ( ದ್ರವಗಳ ವೇಗಕ್ಕೆ ಸಂಬಂಧಪಟ್ಟ ಒಂದು ಸಂಖ್ಯೆ) 5 ಅಥವಾ ಅದಕ್ಕಿಂತ ಹೆಚ್ಚಿನ ವೇಗಗಳಿಗೆ ಸಂಬಂಧಿಸಿರುತ್ತೆ.
ಹಿಪ್ಸೋಮೀಟರ್ – ಕುದಿಬಿಂದು ಮಾಪಕ – ಒಂದು ದ್ರವದ ಕುದಿಬಿಂದುವನ್ನು ಅಳೆಯಲು ಬಳಸುವ ಉಪಕರಣ. ಆವಿಯ ಉಷ್ಣತೆಯಲ್ಲಿ ಉಷ್ಣಮಾಪಕಗಳ ಮೇಲೆ ಗುರುತುಗಳನ್ನು ಮಾಡಲು ಸಹ ಇದನ್ನು ಬಳಸುತ್ತಾರೆ.
ಹೈಪರಾನ್ – ಹೈಪರಾನು – ತುಂಬ ಕಡಿಮೆ ಹೊತ್ತು ಅಸ್ತಿತ್ವದಲ್ಲಿರುವ ಒಂದು ಮೂಲಭೂತ ಕಣ. ಇದು ಬೇರ್ಯಾನುಗಳ ಪಟ್ಟಿಗೆ ಸೇರುತ್ತದೆ ಮತ್ತು ಸೊನ್ನೆಯಲ್ಲದ ವಿಲಕ್ಷಣತೆ (strangeness)ಯನ್ನು ಹೊಂದಿರುತ್ತದೆ.