Loss angle

ಲಾಸ್ ಆಂಗಲ್ – ನಷ್ಟ ಕೋನ – ಒಳ ಹಾಕುವ ವಿದ್ಯುದ್ಬಲವು ಸುಸಂಗತ ಅಲೆ ( ಸೈನ್ ವೇವ್) ಯಾಗಿದ್ದಾಗ, ವಿದ್ಯುತ್ ಸಂಪರ್ಕ ತಂತುವಿನ ಕೋನವು 90 ಡಿಗ್ರಿಗಿಂತ  ಎಷ್ಟು ಕಡಿಮೆ ಇದೆಯೋ ಆ ಕೋನ.

Longitudinal wave

ಲಾಂಗಿಟ್ಯೂಡಿನಲ್ ವೇವ್ – ರೇಖೀಯ ಅಲೆ (ನೀಳ ಅಲೆ ಅಥವಾ ಉದ್ದಕ್ಕೆ ಕಂಪಿಸುವ ಅಲೆ) – ಅಲೆಯು ಚಲಿಸುತ್ತಿರುವ ದಿಕ್ಲಿನಲ್ಲೇ ಕಣಗಳ ಸ್ಥಳಾಂತರವೂ ಆಗುತ್ತಿದ್ದರೆ ಅಂತಹ ಅಲೆಯನ್ನು ರೇಖೀಯ ಅಲೆ ಎನ್ನುತ್ತಾರೆ. ಉದಾಹರಣೆಗೆ ಶಬ್ಧದ ಅಲೆ.

Local oscillator 

ಲೋಕಲ್ ಆಸ್ಸಿಲೇಟರ್ – ಸ್ಥಳೀಯ ಆಂದೋಲಕ – ಅಲೆ ಸಂಯೋಜಕ ಅಥವಾ  ಉಚ್ಚತರ ಅಲೆಸಂಯೋಜಕವಾಗಿರುವಂತಹ ಅಲೆಗ್ರಾಹಕದಲ್ಲಿರುವ ಆಂದೋಲಕ ಇದು. ಈ ಉಪಕರಣವು ರೇಡಿಯೊ ಅಲೆಗಳ ಆವರ್ತನ ಆಂದೋಲನವನ್ನು ಉತ್ಪತ್ತಿ ಮಾಡುತ್ತದೆ.

ಕನ್ನಡ ಗಾದೆಮಾತು – ಅಡಿಗೆ ಬಲ್ಲವನ ಹೆಂಡ್ತಿಯಾಗಬಾರದು, ಕೆಲಸ ಬಲ್ಲವನ‌ ಆಳಾಗಬಾರದು.

ಅಡಿಗೆ ಬಲ್ಲ ಗಂಡಸರನ್ನು ಮದುವೆಯಾದ ಹೆಂಗಸರ ಪಾಡು ಯಾರಿಗೂ ಬೇಡ. ಏನು ಮಾಡಿದರೂ ‘ಹೀಗಿರಬೇಕಿತ್ತು, ಹಾಗಿರಬೇಕಿತ್ತು, ಇದಕ್ಕೆ ಉಪ್ಪು ಜಾಸ್ತಿ ಆಯ್ತು, ಅದಕ್ಕೆ ಖಾರ ಕಡಿಮೆ ಆಯ್ತು, ಸಿಹಿತಿಂಡಿ ಮಾಡೋ ಹದಾನೇ ಗೊತ್ತಿಲ್ಲ ನಿಂಗೆ”…..ಹೀಗೆ ಒಂದಲ್ಲ ಒಂದು ಟೀಕಾಪ್ರಹಾರ ಆಗುತ್ತಲೇ ಇರುತ್ತದೆ, ಆ ಹೆಂಡತಿಯ ಮೇಲೆ.‌ ಇದೇ ರೀತಿಯಲ್ಲಿ, ಎಲ್ಲೇ ಆಗಲಿ ಕೆಲಸ ಚೆನ್ನಾಗಿ ಬರುವ ಒಬ್ಬ ವ್ಯಕ್ತಿಯ ಕೈಕೆಳಗೆ ಕೆಲಸಕ್ಕೆ ಸೇರಿದರೆ ಆ ಕೆಲಸಗಾರನಿಗೂ ಕೆಲಸವನ್ನು ‘ಸರಿಯಾಗಿ’ ಮಾಡುವ ಬಗೆಗೆ ಟೀಕೆ-ಟಿಪ್ಪಣಿ ತಪ್ಪಿದ್ದಲ್ಲ.‌ ಹೀಗಾಗಿ ಈ […]

“ನಾಟ್ ಫನಿ….ಕನ್ನಡಾಭಿಮಾನಿ!”

ಈ ಲೇಖಕಿ/ಅಧ್ಯಾಪಕಿಯ ಗರಿಷ್ಠ ಕನ್ನಡ ಬಳಕೆಯ ಪ್ರಯತ್ನಗಳು ಕೆಲವೊಮ್ಮೆ ಮುಗುಳ್ನಗೆಯ ಸನ್ನಿವೇಶವನ್ನು ಸೃಷ್ಟಿ ಮಾಡ್ತವೆ. ಅಂತಹ ಒಂದು ಸನ್ನಿವೇಶಗಳನ್ನು ನಿಮ್ಮ ಜೊತೆ ಹಂಚ್ಕೊಳಕ್ಕೆ ಇಷ್ಟ ಪಡ್ತೀನಿ. ಈಚೆಗೆ ನನ್ನ ಚಿಕ್ಕ ಮಗಳು ಪ್ರಣತಿಯೊಂದಿಗೆ ಐಸ್ಕ್ರೀಮ್ ಅಂಗಡಿಯೊಂದಕ್ಕೆ ಹೋಗಿದ್ದೆ (ಅಂದ ಹಾಗೆ ಐಸ್ಕ್ರೀಮ್ ಗೆ ‘ಮಂಜುಕೆನೆ’, ‘ಮಂಜಿನ ಮಿಠಾಯಿ’ ಮುಂತಾದ ಕನ್ನಡ ಪದಗಳಿದ್ದರೂ ಅವು ಕನ್ನಡಿಗರಲ್ಲಿ ಜನಪ್ರಿಯತೆ  ಪಡೆದಿಲ್ಲ). ಐಸ್ಕ್ರೀಮ್ ಕೊಂಡ ನಂತರ ಬೆಲೆಚೀಟಿ ( ಬಿಲ್) ಕೊಡಲು, ಆ ಅಂಗಡಿಯ ಚಿಕ್ಕ ವಯಸ್ಸಿನ ಹಣಕಾಸು ನಿರ್ವಾಹಕನು ನನ್ನ […]

Logic gate

ಲಾಜಿಕ್ ಗೇಟ್ – ತರ್ಕ ವಿದ್ಯುದ್ವಾರ – ಸರಳವಾದ ತಾರ್ಕಿಕ ಕ್ರಿಯೆಗಳನ್ನು ಮಾಡುವ ಸಾಮರ್ಥ್ಯ ಇರುವ ಒಂದು ವಿದ್ಯುನ್ಮಂಡಲ ಇದು. ಉದಾಹರಣೆಗೆ, ‘ಮತ್ತು’, ‘ಇದು ಅಥವಾ ಅದು’, ‘ಇದೂ ಅಲ್ಲ – ಅದೂ ಅಲ್ಲ’ ಇಂಥ ಸೂಚನೆಗಳು‌.

Load line

ಲೋಡ್ ಲೈನ್ – ವಿದ್ಯುದ್ಬಲ ರೇಖೆ – ಒಂದು ವಿದ್ಯುನ್ಮಂಡಲವು ಪಡೆದುಕೊಳ್ಳುತ್ತಿರುವ ವಿದ್ಯುದ್ಬಲದ ಹಂಚಿಕೆಯ ಚಿತ್ರರೂಪೀ ಪ್ರಸ್ತುತಿ ಇದು.‌

Lloyd’s mirror

ಲಾಯ್ಡ್ಸ್ ಮಿರರ್ – ಲಾಯ್ಡ್‌ ರ ಕನ್ನಡಿ‌ – ಹಂಫ್ರಿ ಲಾಯ್ಡ್ ಎಂಬ ಐರ್ಲೆಂಡ್ ನ ವಿಜ್ಞಾನಿಯು 1834 ರಲ್ಲಿ ಕಂಡುಹಿಡಿದ ವಿದ್ಯಮಾನ ಇದು. ಒಂದೇ ಬೆಳಕಿನ‌ ಆಕರವನ್ನು ಬಳಸಿ ಸುಂದರವಾದ ಕಪ್ಪು – ಬಿಳುಪು ಪಟ್ಟಿಗಳನ್ನು  (interference fringes) ಪಡೆಯಲು ಸಾಧ್ಯ ಆಗುವಂತೆ ಇದನ್ನು ರಚಿಸಲಾಗಿರುತ್ತದೆ ; ಆದರೆ ಎರಡು ಬೆಳಕಿನ ಆಕರಗಳಿರುವಂತೆ ಭಾಸವಾಗುತ್ತದೆ.

Liquid air

ಲಿಕ್ವಿಡ್ ಏರ್ – ದ್ರವರೂಪೀ ನೆಲ – ದ್ರವಾನಿಲ – ಮಾಸಿದ ನೀಲಿ ಬಣ್ಣವುಳ್ಳ ಒಂದು ದ್ರವ. ಇದರಲ್ಲಿ ಮುಖ್ಯವಾಗಿ ದ್ರವರೂಪೀ ಆಮ್ಲಜನಕ (ಕುದಿಬಿಂದು :  -183 ಡಿಗ್ರಿ ಸೆಂಟಿಗ್ರೇಡ್), ದ್ರವರೂಪೀ ಜಲಜನಕ ( ಕುದಿಬಿಂದು : -196 ಡಿಗ್ರಿ ಸೆಂಟಿಗ್ರೇಡ್) ಇರುತ್ತವೆ.

Liquid

ಲಿಕ್ವಿಡ್ – ದ್ರವ – ವಸ್ತುವಿನ‌ ಹರಳುರೂಪೀ ಸ್ಥಿತಿ ಮತ್ತು ಅನಿಲಸ್ಥಿತಿಗಳ ನಡುವೆ ಇರುವಂತಹ (ವಸ್ತು)ಸ್ಥಿತಿ‌ ಇದು. ಈ ಸ್ಥಿತಿಯ ವಸ್ತುವಿಗೆ ತಾನಿರುವ ಪಾತ್ರೆಯ ಆಕಾರವನ್ನು ಪಡೆದುಕೊಳ್ಳುವ ಗುಣವಿದೆ‌.

Page 11 of 139

Kannada Sethu. All rights reserved.