Luminous flux

ಲ್ಯೂಮಿನಸ್ ಫ್ಲಕ್ಸ್ – ಬೆಳಕಿನ ಪ್ರವಾಹಗತಿ  – ಬೆಳಕು ಹರಿಯುವ ಗತಿಯನ್ನು ಅಳೆಯುವ ನೆಲೆ. ಇದನ್ನು ಲ್ಯೂಮೆನ್ ಗಳಲ್ಲಿ ಅಳೆಯುತ್ತಾರೆ. ಒಂದು ಪ್ರಮಾಣೀಕೃತ  ಆಕರದಿಂದ ಹೊರಸೂಸಲ್ಪಟ್ಟ ಬೆಳಕಿನ ಆಧಾರದಿಂದ ಇದನ್ನು ಅಳೆಯುತ್ತಾರೆ.

Luminosity

ಲ್ಯೂಮಿನಾಸಿಟಿ – ದೀಪ್ತತೆ, ಕಾಂತಿ‌ – ಒಂದು ನಿರ್ದಿಷ್ಟ ದಿಕ್ಲಿನಲ್ಲಿನ ಪ್ರಕಾಶದ ತೀಕ್ಷ್ಣತೆ, ಒಂದು ಬಿಂಬದ ದೃಗ್ಗೋಚರ ಪ್ರಕಾಶಮಾನತೆ, ಹಾಗೂ ಏಕಘಟಕ ಮೂಲಮಾನ ಸಮಯದಲ್ಲಿ ಹೊರಸೂಸಲ್ಪಟ್ಟ ಒಟ್ಟು ಶಕ್ತಿಯ ಲೆಕ್ಕದಲ್ಲಿ ನಿರೂಪಿತವಾದ ಒಂದು ನಕ್ಷತ್ರದ ಪ್ರಕಾಶಮಾನತೆ‌.

ಕನ್ನಡ ಗಾದೆಮಾತು – ಕೀಟ ಸಣ್ಣದಾದ್ರೆ ಕಾಟ ಸಣ್ಣದೆ?

ಸೊಳ್ಳೆ, ನುಸಿ, ನೊಣಗಳಂತಹ ಕೀಟಗಳು ಗಾತ್ರದಲ್ಲಿ ಸಣ್ಣವಾದರೂ ಕಚ್ಚಿ, ಗುಂಯ್ಗುಟ್ಟಿ, ನಮ್ಮ ಆಹಾರವನ್ನು ಕಲುಷಿತಗೊಳಿಸುತ್ತವೆ‌. ಹೀಗೆಯೇ ಕೆಲವು ಚಿಕ್ಕ ಚಿಕ್ಕ ಸಮಸ್ಯೆಗಳು, ಉದಾಹರಣೆಗೆ, ದಾರಿ ಮಧ್ಯೆ ಚಪ್ಪಲಿ ಕಿತ್ತುಹೋಗುವುದು, ಪೆನ್ನಿನ ಮುಚ್ಚಳ ಕಳೆದುಹೋಗುವುದು, ಅಥವಾ ಸಣ್ಣಗೆ ಶೀತವಾಗಿ ಸದಾ ಮೂಗು‌ ಸುರಿಯಲಾರಂಭಿಸುವುದು ….ಇಂಥವು ಸಣ್ಣ ಸಮಸ್ಯೆಗಳಾದರೂ ನಮಗೆ ಸಾಕಷ್ಟು ಕಿರಿಕಿರಿಯುಂಟುಮಾಡುತ್ತವೆ‌. ಕೆಲವು ಸಲವಂತೂ ಹೆಜ್ಜೇನು ಕಡಿಯುವುದು, ರೋಗ ತರುವ ಸೊಳ್ಳೆ ಕಚ್ಚುವುದು – ಈ  ಮುಂತಾದ ಘಟಿತಗಳು ನಿಜಕ್ಕೂ ಮಾರಣಾಂತಿಕ ತೊಂದರೆ ಮಾಡಬಹುದು. ಇದಕ್ಕಾಗಿಯೇ ಈ ಗಾದೆ […]

ಆಂಗ್ಲೀಕರಣಗೊಂಡ ತರಕಾರಿ ಮಳಿಗೆ!

ಕಲರ್ ಕ್ಯಾಪ್ಸಿಕಂ, ಬೀನ್ಸ್,, ಪಿಯರ್, ಪೋಮೊಗ್ರಾನೇಟ್, ಪಪಾಯ, ಲಿಚೀ, ಬಟರ್ ಫ್ರೂಟ್ …. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹಣ್ಣು ತರಕಾರಿ ಮಳಿಗೆಗಳಿಗೆ ಹೋದರೆ ಕಿವಿಗೆ ಬೀಳುವ ಪದಗಳಿವು‌. ಹುರುಳಿಕಾಯಿ, ಚವುಳಿಕಾಯಿ, ದೊಣ್ಣೆಮೆಣಸು, ಪರಂಗಿ ಹಣ್ಣು, ಕಣ್ಗುಡ್ಡೆ ಕಾಯಿ, ಬೆಣ್ಣೆಹಣ್ಣು…ಈ ಕನ್ನಡ ಪದಗಳು ಕಿವಿಗೆ ಬೀಳುವುದು ತೀರಾ ಅಪರೂಪ.‌ ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿದೆ‌. ಎರಡು ಕಾರಣಗಳಿವೆ ಅನ್ನಿಸಿತು. 1. ಬೆಂಗಳೂರಿನಲ್ಲಿ ಕನ್ನಡಿಗರಲ್ಲದೆ ಹಿಂದಿ, ಮಾರ್ವಾಡಿ, ತಮಿಳು, ತೆಲುಗು, ಮಲೆಯಾಳಿ ಮುಂತಾದ ಕನ್ನಡೇತರ ಭಾಷೆಗಳನ್ನು ಮಾತಾಡುವ ಜನರ […]

Luminescence

ಲ್ಯೂಮಿನಿಸೆನ್ಸ್ – ಸ್ವಯಂಪ್ರಕಾಶ – ಒಂದು ವಸ್ತುವು ಶಕ್ತಿಯನ್ನು ‌ಹೀರಿಕೊಂಡು‌ ಉದ್ರೇಕಿತ ಸ್ಥಿತಿಗೆ ಹೋದಾಗ ಅದರಿಂದ ಸೂಸುವ ಬೆಳಕು ಅಥವಾ ವಿಕಿರಣ. ಹೀಗೆ ವಿದ್ಯುತ್ಕಾಂತೀಯ ಅಲೆಗಳನ್ನು ಹೊರಸೂಸಿದ ಬಳಿಕ ಆ ವಸ್ತುಗಳು ಕಡಿಮೆ ಶಕ್ತಿ ಮಟ್ಟಕ್ಕೆ ಮರಳುತ್ತವೆ. ಸ್ವಯಂಪ್ರಕಾಶದಲ್ಲಿ ಜೈವಿಕ‌ ಸ್ವಯಂ ಪ್ರಕಾಶದಿಂದ ಹಿಡಿದು ರಾಸಾಯನಿಕ ಸ್ವಯಂಪ್ರಕಾಶದ ತನಕ ಅನೇಕ ವಿಧಗಳಿರುತ್ತವೆ.

Luminance, symbol : Lv

Lv – ಲ್ಯೂಮಿನೆನ್ಸ್ : ಸಿಂಬಲ್ ಎಲ್ ವಿ‌ – ಪ್ರಕಾಶಮಾನತೆ, ಸಂಕೇತ ಎಲ್ ವಿ – ಬಿಂದು‌ ಆಕರವಲ್ಲದ, ವಿಸ್ತರಿತ ಬೆಳಕು ನೀಡುವ ಬೆಳಕಿನ ಆಕರದ ಪ್ರಕಾಶಮಾನತೆಯ ಅಳತೆ.‌ ಒಂದು ದತ್ತ ದಿಕ್ಕಿನಲ್ಲಿ, ಏಕಘಟಕ ವಿಸ್ತೀರ್ಣದ ಪ್ರದೇಶಕ್ಕೆ ಆ ಆಕರವು ಲಂಬಕೋನದಲ್ಲಿ ಬೀರಿದಂತಹ ಪ್ರಕಾಶದ ತೀಕ್ಷ್ಣತೆ ಇದು‌.

Lumen, symbol – lm

ಲ್ಯೂಮೆನ್, ಸಿಂಬಲ್ lm – ಲ್ಯೂಮೆನ್, ಸಂಕೇತ lm – ಪ್ರಕಾಶಮಾನ‌ ಬಲದ ಎಸ್.ಐ.ಮೂಲಮಾನ. ಬೆಳಕಿನ‌ ಆಕರವು ಸೂಸುವ ಪ್ರಕಾಶಮಾನ ಬಲದ ಅಳತೆಯನ್ನು ಈ ಮೂಲಮಾನದಿಂದ ಹೇಳಲಾಗುತ್ತದೆ.

Lubrication

ಲ್ಯೂಬ್ರಿಕೇಷನ್ – ತೈಲ ಲೇಪನ – ಒಂದನ್ನೊಂದು ಸ್ಪರ್ಶಿಸಿ‌ ಚಲಿಸುತ್ತಿರುವ ಎರಡು ಘನ ಮೇಲ್ಮೈ ಗಳ ನಡುವಿನ ನೇರಸಂಪರ್ಕವನ್ನು ತಪ್ಪಿಸಲು ಅವುಗಳ ನಡುವೆ ಒಂದು ವಸ್ತುವನ್ನು ಹಚ್ಚುವುದು‌. ಇದರಿಂದಾಗಿ ಆ ಘನಮೇಲ್ನೈಗಳ ನಡುವಿನ‌ ಘರ್ಷಣೆ ಕಡಿಮೆ ಆಗುತ್ತದೆ.

Low tension

ಲೋ ಟೆನ್ಶನ್ – ಕಡಿಮೆ ಕರ್ಷಣ – ಕಡಿಮೆ ವಿದ್ಯುದ್ಬಲ

ಕನ್ನಡ ಗಾದೆಮಾತು – ಜಿದ್ದು, ಜೀವಕ್ಕೆ ಗುದ್ದು‌.

 ಜಿದ್ದು ಎಂಬ ಪದಕ್ಕೆ ನಿಘಂಟಿನಲ್ಲಿ ಬದ್ಧ ಮಾತ್ಸರ್ಯ, ವೈರ, ಹಠ, ಸೇಡು ಮುಂತಾದ ಅರ್ಥಗಳಿವೆ. ಒಟ್ಟಿನಲ್ಲಿ ಇವೆಲ್ಲವೂ ನಕಾರಾತ್ಮಕ ಭಾವನೆಗಳು.‌ ಇನ್ನೊಬ್ಬರ ಬಗ್ಗೆ ಹಗೆತನ ಸಾಧಿಸುವುದು, ದ್ವೇಷ ಇಟ್ಟುಕೊಳ್ಳುವುದು … ಇವೆಲ್ಲ ನಮ್ಮ ಜೀವಕ್ಕೆ ಆರಾಮ ತರುವ ವಿಷಯಗಳಲ್ಲ.  ಜೀವಕ್ಕೆ ಗುದ್ದು ಕೊಟ್ಟಂತೆ ನಮಗೆ ಕಷ್ಟ ಕೊಡುವ ಅನುಭವಗಳು ಇವು. ದುರ್ಯೋಧನನು ಪಾಂಡವರ ಮೇಲೆ ಜಿದ್ದು ಇಟ್ಟುಕೊಂಡು ತನ್ನ ಸಕಲ ಸಾಮ್ರಾಜ್ಯವನ್ನು ಮತ್ತು ನೆಮ್ಮದಿಯನ್ನು ಕಳೆದುಕೊಂಡಂತೆ ಇದು. ಹೀಗಾಗಿ ನಾವು‌ ಜಿದ್ದು ಎಂಬ ವಿಷವನ್ನು ನಮ್ಮೊಳಗೆ ಇಟ್ಟುಕೊಳ್ಳಬಾರದೆಂಬ […]

Page 9 of 139

Kannada Sethu. All rights reserved.